ತಾಜಾ ಸುದ್ದಿ

ಸರ್ಕಾರದ ವಿರುದ್ಧ ಮಹಾನಗರ ಪಾಲಿಕೆ ನೌಕರರ ಆಕ್ರೋಶ

Published

on

ಬೆಂಗಳೂರು, ಮೇ 26: 7ನೇ ವೇತನ ಆಯೋಗ ವರದಿ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರದ ತಾರತಮ್ಯ ನಡೆ ವಿರುದ್ಧ ರಾಜ್ಯದ 10 ಮಹಾನಗರ ಪಾಲಿಕೆ ನೌಕರರು ತೀವ್ರವಾಗಿ ಆಕ್ರೋಶ ಹೊರ ಹಾಕಿದ್ದಾರೆ.

ಪಾಲಿಕೆ ನೌಕರರನ್ನು ಹೊರಗಿಟ್ಟ ಹಿಂದಿನ ಸರ್ಕಾರ, ಬರೀ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯ ಮಾಡಿ ಮಾ.1ರಿಂದ ಜಾರಿಗೆ ಬರುವಂತೆ ಶೇ.17ರಷ್ಟು ಮಧ್ಯಂತರ ಪರಿಹಾರ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಪಾಲಿಕೆ/ಪುರಸಭೆ/ನಗರಸಭೆ ನೌಕರರಿಗೆ ಪ್ರತ್ಯೇಕ ಮಂಜೂರಾತಿಗೆ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯಿಂದ ಅನುಮತಿ ಪಡೆಯುವಂತೆ ಸರ್ಕಾರ ಆದೇಶಿಸಿದ್ದು ಆದರೆ ಇದಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಂಘ ದೂರಿದೆ.

ಎರಡು ತಿಂಗಳಿಂದ ಸತತವಾಗಿ ಮನವಿ ಪತ್ರ ನೀಡಿದ್ದರೂ ಇದಕ್ಕೆ ಸ್ಪಂದಿಸುತ್ತಿಲ್ಲ.ಸರ್ಕಾರಿ ನೌಕರರಿಗೆ ಮಾತ್ರ ಇದರ ಲಾಭ ಸಿಕ್ಕಿದೆ. ಆದರೆ, ನ್ಯಾಯಯುತವಾಗಿ ಸಿಗಬೇಕಿದ್ದ ಮಧ್ಯಂತರ ಪರಿಹಾರದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಸಂಘ ದೂರಿದೆ.

Leave a Reply

Your email address will not be published. Required fields are marked *

Trending

Exit mobile version