ತಾಜಾ ಸುದ್ದಿ

ಸಿದ್ದರಾಮ್ಮಯ್ಯ ಸರ್ಕಾರದಲ್ಲಿ 24 ಮಂದಿ ಸಚಿವರ ಪ್ರಮಾಣವಚನ

Published

on

ಬೆಂಗಳೂರು;ದೆಹಲಿಯಲ್ಲಿ ಸಂಪುಟ ವಿಸ್ತರಣೆಯ ಕಸರತ್ತು ನಡೆಯುತ್ತಿದ್ದು 27ರ ಶನಿವಾರ 24 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆಯಿದೆ.

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿ 10 ಮಂದಿ ಸಂಪುಟದಲ್ಲಿದ್ದು, 34 ಸದಸ್ಯ ಬಲದ ಸಂಪುಟದಲ್ಲಿ ಹಾಲಿ 24 ಸ್ಥಾನಗಳು ಖಾಲಿ ಇವೆ. ಸಚಿವ ಸಂಪುಟ ಸೇರ್ಪಡೆಗೆ ಕಸರತ್ತಿನ ಬೆನ್ನಲ್ಲೇ 24 ಸ್ಥಾನಗಳಿಗೂ ಸಚಿವರ ನೇಮಕ‌ ನಡೆಯಲಿದೆ ಎನ್ನಲಾಗಿದೆ.

ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ 24 ಹೆಸರುಗಳ ಬಗ್ಗೆ ಮೇಲಿಂದ ಮೇಲೆ ತೀರ್ಮಾನವಾಗಿದ್ದರೂ, ಖಾತೆ ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಪ್ರಭಾವಿ ಖಾತೆಗಳಿಗಾಗಿ ಸಿದ್ದು ಹಾಗೂ ಡಿಕೆಶಿ ಬಣದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರೊಂದಿಗೆ ಸರಣಿ ಸಭೆ ನಡೆಸಿದ್ದಾರೆ.ಸಂಪುಟ ಸೇರ್ಪಡೆ ಕಸರತ್ತಿನ‌ ನಡುವೆ ಕೆಲ ಹಿರಿಯರಿಗೆ ಅವಕಾಶ ತಪ್ಪಿದೆ ಎನ್ನಲಾಗಿದೆ.ಆರ್‌.ವಿ. ದೇಶಪಾಂಡೆ, ಜಯಚಂದ್ರ, ಬಿ.ಕೆ. ಹರಿಪ್ರಸಾದ್‌ ಹಾಗೂ ಎಚ್‌.ಕೆ. ಪಾಟೀಲ್‌ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗುತ್ತಾ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

ಸಾಂಭವ್ಯ ಸಚಿವರ ಪಟ್ಟಿ…
ಶಿವಾನಂದ ಪಾಟೀಲ,ಶರಣಪ್ರಕಾಶ್‌ ಪಾಟೀಲ್‌,ಬೈರತಿ ಸುರೇಶ್‌, ಶರಣಬಸಪ್ಪ ದರ್ಶನಾಪುರ, ಬಸವರಾಜ ರಾಯರಡ್ಡಿ, ಪಿರಿಯಾಪಟ್ಟಣ ಕೆ. ವೆಂಕಟೇಶ್‌,ಎಸ್‌.ಎಸ್‌. ಮಲ್ಲಿಕಾರ್ಜುನ್‌, ಅಜಯ್‌ ಸಿಂಗ್‌,ಪುಟ್ಟರಂಗ ಶೆಟ್ಟಿ,ಚಿಂತಾಮಣಿ ಸುಧಾಕರ್‌, ಹಿರಿಯೂರು ಸುಧಾಕರ್‌
ಎಚ್‌.ಕೆ. ಪಾಟೀಲ್‌, ಮಧು ಬಂಗಾರಪ್ಪ, ಶಿವರಾಜ ತಂಗಡಗಿ, ಎನ್‌.ಚೆಲುವರಾಯಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ರಹೀಂ ಖಾನ್‌, ಈಶ್ವರ ಖಂಡ್ರೆ
ಲಕ್ಷ್ಮೇ ಹೆಬ್ಬಾಳ್ಕರ್‌, ಕೆ.ಎನ್‌. ರಾಜಣ್ಣ /ಬಿ.ನಾಗೇಂದ್ರ
ಕೃಷ್ಣ ಬೈರೇಗೌಡ/ ಎಂ.ಕೃಷ್ಣಪ್ಪ
ನರೇಂದ್ರ ಸ್ವಾಮಿ/ ಡಾ.ಎಚ್‌.ಸಿ.ಮಹದೇವಪ್ಪ

Leave a Reply

Your email address will not be published. Required fields are marked *

Trending

Exit mobile version