ಲೈಫ್ ಸ್ಟೈಲ್

ಬ್ರೆಡ್ ಉಪ್ಪಿಟ್ಟು ಮಾಡುವುದು ಹೇಗೆ? ಟೈಮ್ ಇಲ್ಲದಾಗ ಇದು ಬೆಸ್ಟ್ ತಿಂಡಿ

Published

on

ನಿಮಗೆ ತಿಂಡಿ ಮಾಡೋಕೆ ಟೈಮ್ ಇಲ್ವಾ? ಮನೆಯವರಿಗೆಲ್ಲಾ ಇಷ್ಟ ಆಗೋ ರೀತಿ ತಿಂಡಿ ಮಾಡಬೇಕು. ಅದು ಬೇಗ ಬೇಗನೇ. ಇಲ್ಲಿದೆ ನೋಡಿ ಬ್ರೆಡ್ ಉಪ್ಪಿಟ್ಟು ಮಾಡುವ ಬಗೆ.

ಬ್ರೆಡ್ ಉಪ್ಪಿಟ್ಟನ್ನು ಬೇಗ ಮಾಡಬಹುದು. ಮತ್ತು ರುಚಿಕರವಾಗಿಯೂ ಇರುತ್ತೆ. ಮಕ್ಕಳಿಗಂತೂ ತುಂಬಾನೇ ಇಷ್ಟ ಆಗುತ್ತೆ ಎಲ್ಲರೂ ಇಷ್ಟ ಪಟ್ಟು ತಿಂತಾರೆ.

ಬ್ರೆಡ್ ಉಪ್ಪಿಟ್ಟಿಗೆ ಬೇಕಾಗುವ ಸಾಮಾಗ್ರಿಗಳು: ಬ್ರೆಡ್, ಈರುಳ್ಳಿಗಳು, ಟೊಮೆಟೊ, ಮಸಾಲೆ ಇದ್ರೆ ಸಾಕು. ಸಂಪೂರ್ಣ ಗೋಧಿ ಬ್ರೆಡ್, ಬ್ರೌನ್ ಬ್ರೆಡ್ ಅಥವಾ ಬಿಳಿ ಬ್ರೆಡ್. ಆದರೆ ನೀವು ಬಳಸುವ ಬ್ರೆಡ್ ಮೃದುವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಈ ಖಾದ್ಯವನ್ನು ತಯಾರಿಸಲು ನೀವು ತಾಜಾ ಬ್ರೆಡ್ ಚೂರುಗಳನ್ನು ಅಥವಾ ಕೆಲವು ದಿನಗಳ ಹಳೆಯ ಬ್ರೆಡ್ ಅನ್ನು ಬಳಸಬಹುದು. ತಾಜಾ ಬ್ರೆಡ್ ಸ್ಲೈಸ್‍ಗಳನ್ನು ಬಳಸುತ್ತಿದ್ದರೆ, ಅಂಚುಗಳನ್ನು ಸ್ಲೈಸ್ ಮಾಡುವ ಅಗತ್ಯವಿಲ್ಲ.

ಬ್ರೆಡ್ ಚೂರುಗಳನ್ನು ಕ್ಯೂಬ್ ರೀತಿ ಕಟ್ ಮಾಡಿಕೊಳ್ಳಿ. ಮತ್ತೆ ಒಗ್ಗರಣೆ ಮಾಡಲು ಇಡಿ. ಅದಕ್ಕೆ ಸ್ಪಲ್ಪ ಎಣ್ಣೆ ಹಾಕಿ. ಸಾಸಿವೆ ಸಿಡಿಸಿ. ನಂತರ ಈರುಳ್ಳಿ ಹಾಕಿ ಬ್ರೌನ್ ಕಲರ್ ಬರೋ ತನಕ ಬಾಡಿಸಿ. ನಂತರ 2 ಹಸಿಮೆಣಸಿನಕಾಯಿ, ಟೊಮೆಟೊ ಹಾಕಿ. ನಂತರ ಅರಿಶಿನ, ಗರಂ ಮಸಾಲೆ ಹಾಕಿ.

ಗರಂ ಮಸಾಲೆ ಹಾಕಿದ ನಂತರ ಬ್ರೆಟ್ ಕ್ಯೂಬ್ ಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಸ್ಪಲ್ಪ ಹೊತ್ತು ಆದ ಮೇಲೆ ತಿನ್ನೋಕೆ ರೆಡಿಯಾಗಿರುತ್ತೆ.

ಇದನ್ನು ನೀವು ಬೆಳಗ್ಗೆ ತಿಂಡಿಗೆ ಮಾಡಬಹುದು. ಅಥವಾ ಸಂಜೆಯಾದ್ರೂ ತಿಂಡಿಗಾದ್ರೂ ಮಾಡಬಹುದು. ಒಟ್ಟಿನಲ್ಲಿ ಇದೊಂದು ರುಚಿಕರವಾದ ತಿಂಡಿಯಾಗಿದೆ. ಎಲ್ಲರೂ ತಿನ್ನಬಹುದು.

ಹಾಗಾದ್ರೆ ನೀವು ಒಮ್ಮೆ ಬ್ರೆಡ್ ಉಪ್ಪಿಟ್ಟ ತಯಾರಿಸಿ ನೋಡಿ. ಇಷ್ಟ ಆಗುತ್ತೆ. ಇನ್ನಷ್ಟು ತಿಂಡಿಗಳನ್ನು ಮಾಡುವುದು ಹೇಗೆ ಎಂದು ದಿನ ನಿತ್ಯ ಹೇಳಲಾಗುತ್ತೆ. ನೀವು ಟ್ರೈ ಮಾಡಿ ಎಂಜಾಯ್ ಮಾಡಿ.

Leave a Reply

Your email address will not be published. Required fields are marked *

Trending

Exit mobile version