ತಾಜಾ ಸುದ್ದಿ

ಅರಣ್ಯ ಇಲಾಖೆಯ ಹೊಸ ಲಾಂಛನ ಬಿಡುಗಡೆ 

Published

on

ಬೆಂಗಳೂರು, ಮೇ 25: ಅಸ್ತಿತ್ವಕ್ಕೆ ಬಂದು ಹಲವು ದಶಕಗಳ ನಂತರ, ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗುವುದರೊಂದಿಗೆ ಕರ್ನಾಟಕ ಅರಣ್ಯ ಇಲಾಖೆಯು ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ.

ಹೊಸ ಲಾಂಛನವು ಕರ್ನಾಟಕದ ಶ್ರೀಮಂತ ಅರಣ್ಯ ಹಾಗ್ಯ್ ವನ್ಯ ಜೀವಿ ಸಂಪತ್ತನ್ನು ರಾಜ್ಯದ ನಕ್ಷೆಯಂತೆ ತೋರಿಸುತ್ತದೆ. ಲಾಂಛನವನ್ನು ಈಗ ಔಪಚಾರಿಕ ರಾಜ್ಯ ಸರ್ಕಾರದ ಅನುಮೋದನೆ ಮಾಡಿದೆ.

ಈ ಲಾಂಛನದಲ್ಲಿ ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಬಿಂಬಿಸುವ ಪ್ರತೀಕವಾದ ರಾಜ್ಯ ಪಕ್ಷಿ ನೀಲಕಂಠ, ಆನೆ, ರಾಷ್ಟ್ರೀಯ ವನ್ಯಪ್ರಾಣಿ ಹುಲಿ, ಚಿಟ್ಟೆ ಹಾಗೂ ಶ್ರೀಗಂಧದ ಮರವನ್ನು ಒಳಗೊಂಡಿದೆ. ಇವುಗಳಿಗೆಲ್ಲ ಮೂಲ ಆಧಾರವಾಗಿರುವ ನೀಲಿ ಬಣ್ಣದಲ್ಲಿರುವ ಅಂಶವು ನದಿಗಳು ಮತ್ತು ಸಮುದ್ರವನ್ನು ಬಿಂಬಿಸುತ್ತದೆ.

Leave a Reply

Your email address will not be published. Required fields are marked *

Trending

Exit mobile version