ಕ್ರೈಂ ನ್ಯೂಸ್

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಕೆಎಸ್ಸಾರ್ಟಿಸಿ ಚಾಲಕ ಮೃತ್ಯು

Published

on

ಬೆಳ್ತಂಗಡಿ, ಮೇ 25: ಕರ್ತವ್ಯ ಮುಗಿಸಿ ಮನೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಚಾಲಕರೊಬ್ಬರ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡಿದ್ದ ಸವಾರ ಮೇ 24ರಂದು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಧರ್ಮಸ್ಥಳ ಘಟಕದ ಚಾಲಕ ಗೋಳಿತೊಟ್ಟು ನಿವಾಸಿ ಅಶೋಕ್‌ ಕುಮಾರ್‌(37) ಮೇ 18 ರಂದು ಬೆಳಗ್ಗೆ ಕರ್ತವ್ಯ ಮುಗಿಸಿ ಬೈಕಿನಲ್ಲಿ ತಮ್ಮ ಮನೆಗೆ ತೆರಳುತ್ತಿದ್ದಾಗ ಕೊಕ್ಕಡ ಸಮೀಪದ ಕುಡಲ್‌ ಎಂಬಲ್ಲಿ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ಕಾರು ಢಿಕ್ಕಿ ಹೊಡೆದು ತಲೆಗೆ ತೀವ್ರವಾಗಿ ಪೆಟ್ಟಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜೀವನ್ಮರಣ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೇ 24ರಂದು ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರು ಪತ್ನಿ, ಮೂರು ಮತ್ತು ಆರು ವರ್ಷದ ಇಬ್ಬರು ಪುತ್ರಿಯರು, ತಂದೆ ಹಾಗೂ ತಾಯಿಯನ್ನು ಅಗಲಿದ್ದಾರೆ.

WhatsAppTelegramFacebookTwitterEmailMessageShare

Leave a Reply

Your email address will not be published. Required fields are marked *

Trending

Exit mobile version