ತಾಜಾ ಸುದ್ದಿ

ನಾಯಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್

Published

on

ಡೆಲಿವರ್​​​ ಬಾಯ್​​​ ಗ್ರಾಹಕರ ಮನೆಗೆ ಆರ್ಡರ್​​​​ ತಲುಪಿಸಲು ಹೋದ ಸಮಯದಲ್ಲಿ ಅಲ್ಲಿನ ಸಾಕು ನಾಯಿ ದಾಳಿ ಮಾಡಲು ಮುಂದಾಗಿದೆ. ಅಪಾಯದಿಂದ ಪಾರಾಗಲು ಈತ ಮೂರನೇ ಮುಹಡಿಯಿಂದ ಕೆಳಗೆ ಹಾರಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡಿದ್ದು ಆಸ್ಪ್ರತೆಗೆ ದಾಖಲಿಸಲಾಗಿದೆ.

ಹೈದರಾಬಾದ್‌: ಡೆಲಿವರ್​​​ ಬಾಯ್​​​ ಗ್ರಾಹಕರ ಮನೆಗೆ ಆರ್ಡರ್​​​​ ತಲುಪಿಸಲು ಹೋದ ಸಮಯದಲ್ಲಿ ಅಲ್ಲಿನ ಸಾಕು ನಾಯಿ ದಾಳಿ ಮಾಡಲು ಮುಂದಾಗಿದೆ. ಅಪಾಯದಿಂದ ಪಾರಾಗಲು ಈತ ಮೂರನೇ ಮುಹಡಿಯಿಂದ ಕೆಳಗೆ ಹಾರಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡಿದ್ದು ಆಸ್ಪ್ರತೆಗೆ ದಾಖಲಿಸಲಾಗಿದೆ. ಹೈದರಾಬಾದ್‌ನಲ್ಲಿ ಇಂತಹ ಘಟನೆ ಇದೇ ಮೊದಲೇನಲ್ಲಾ. ಇತ್ತೀಚಿನ ದಿನಗಳಲ್ಲಿ ಹೈದರಾಬಾದ್‌ನಲ್ಲಿ ಇದು ಎರಡನೇ ಘಟನೆಯಾಗಿದೆ. ಹೈದರಾಬಾದ್‌ನ ಡೆಲಿವರಿ ಬಾಯ್​​ ಭಾನುವಾರ ಮಧ್ಯಾಹ್ನ ಗ್ರಾಹಕರ ಸಾಕು ನಾಯಿಯಿಂದ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಅಪಾರ್ಟ್ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ವರ್ಷದ ಜನವರಿಯಿಂದ ನಗರದಲ್ಲಿ ವರದಿಯಾದ ಎರಡನೇ ಘಟನೆ ಇದಾಗಿದೆ.ಹೈದರಾಬಾದ್‌ನ ಪಂಚವಟಿ ಕಾಲೋನಿಯಲ್ಲಿರುವ ಶ್ರೀನಿಧಿ ಹೈಟ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಡೆಲಿವರಿ ಎಕ್ಸಿಕ್ಯೂಟಿವ್, ಆರ್ಡರ್​ ಕೊಡಲು ಬಂದಾಗ ಗ್ರಾಹಕರ ಮನೆಯ ಡಾಬರ್‌ಮ್ಯಾನ್‌ ತಳಿಯ ಶ್ವಾನ ಬೊಗಳಲು ಪ್ರಾರಂಭಿಸಿದೆ. ಇದಾದ ಬಳಿಕ ಏಕಾಏಕಿ ದಾಳಿ ಮಾಡಲು ಮುಂದಾಗಿದೆ. ತನ್ನನ್ನು ನಾಯಿಯಿಂದ ರಕ್ಷಿಸಿಕೊಳ್ಳಲು ಪ್ಯಾರಪೆಟ್ ಗೋಡೆಯ ಮೇಲೆ ಆತ ಹಾರಿದ್ದಾನೆ. ಸಂತ್ರಸ್ತೆಯನ್ನು ತಕ್ಷಣ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ರಾಯದುರ್ಗಂ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 289 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

WhatsAppTelegramFacebookTwitterEmailMessageShare

Leave a Reply

Your email address will not be published. Required fields are marked *

Trending

Exit mobile version