ತಾಜಾ ಸುದ್ದಿ

ಸಣ್ಣ ವಯಸ್ಸಿನಲ್ಲೇ ಪೈಲೆಟ್ ಆದ ಕರಾವಳಿಯ ಯುವತಿ

Published

on

ಮಂಗಳೂರು, ಮೇ 21 : ಮಂಗಳೂರಿನ ಯುವತಿಯೊಬ್ಬಳು ತನ್ನ 21ನೇ ವಯಸ್ಸಿಗೆ ಪೈಲೆಟ್ ಆಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಮಂಗಳೂರಿನ ಪಾಂಡೇಶ್ವರ ನಿವಾಸಿ ಮುಹಮ್ಮದ್ ಹನೀಫ್ ಹಾಗೂ ನಾಝಿಯಾ ದಂಪತಿಯ ಪುತ್ರಿಯಾದ ಹನಿಯಾ ಹನೀಫ್ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದು ಅಧಿಕೃತ ಪೈಲಟ್ ಆಗಿದ್ದಾರೆ.ಇನ್ನು ಹನಿಯಾ ಅವರು 9ನೇ ತರಗತಿವರೆಗೆ ದುಬೈನ ‘ದಿ ಇಂಡಿಯನ್ ಹೈಸ್ಕೂಲ್’ನಲ್ಲಿ ಓದಿದ್ದು. ಬಳಿಕ ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಹತ್ತನೇ ತರಗತಿ ಹಾಗೂ ಪಿಯು ಶಿಕ್ಷಣವನ್ನು ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದರು.ಚಿಕ್ಕಂದಿನಿಂದಲೆ ವಿದೇಶಕ್ಕೆ ಹೋಗುತ್ತಿದ್ದ ಕಾರಣ ವಿಮಾನಗಳ ಹಾರಾಟ ಕಂಡು ಪೈಲೆಟ್ ಆಗಬೇಕು ಎಂದು ಹನಿಯಾ ದೃಢ ನಿರ್ಧಾರಕ್ಕೆ ಬಂದಿದ್ದರು.ತನ್ನ ಪಿಯುಸಿ ಶಿಕ್ಷಣದ ಬಳಿಕ ಮೈಸೂರಿನ ಒರಿಯಂಟ್ ಫ್ಲೈಟ್ಸ್ ಏವಿಯೇಷನ್ ಅಕಾಡಮಿಯಲ್ಲಿ ಪೈಲಟ್ ತರಬೇತಿಗೆ ಸೇರಿ ಮೂರೂವರೆ ವರ್ಷ ತರಬೇತಿ ಪಡೆದು, ಟ್ಟು 200 ತಾಸುಗಳ ಕಾಲ ವಿಮಾನ ಹಾರಾಟ ನಡೆಸಿದ ಬಳಿಕ ಕಮರ್ಶಿಯಲ್ ಪೈಲಟ್ ಪರವಾನಿಗೆಯನ್ನು ಹನಿಯಾ ತನ್ನದಾಗಿಸಿಕೊಂಡಿದ್ದಾರೆ.ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಹನಿಯಾ, ಪೈಲೆಟ್ ಹಾಗಬೇಕೆಂದು‌ ನಾನು ದೃಢ ನಿರ್ಧಾರಕ್ಕೆ ಚಿಕ್ಕವಿರುವಾಗ ಬಂದಿದ್ದೆ. ನಾನು ವಿಮಾನದಲ್ಲಿ ದುಬೈಗೆ ಪ್ರಯಾಣ ಮಾಡುತ್ತಿದ್ದ ಕಾರಣ ನಾನು ಪ್ರೇರಿತಳಾದೆ. ಪೈಲೆಟ್ ತರಬೇತಿ ಸುಲಭವಲ್ಲ, ಅದರಲ್ಲೂ ಮಹಿಳೆಯರಿಗಂತೂ ಈ ರಂಗದಲ್ಲಿ ಪ್ರೋತ್ಸಾಹ ನೀಡಲು ಪೋಷಕರು ಬಹಳ ಹಿಂಜರಿಯುತ್ತಾರೆ. ಆದರೆ ನನಗೆ ನನ್ನ ಪೋಷಕರಿಂದ ಸಿಕ್ಕಿದ ಬೆಂಬಲ ಹಾಗೂ ಪ್ರೋತ್ಸಾಹ ನನಗೆ ಮುಂದುವರಿಯಲು ಸಾಧ್ಯವಾಗಿದೆ ಎಂದರು.ಇನ್ನು ಹನಿಯಾ ಸಣ್ಣ ವಯಸ್ಸಿನಲ್ಲೇ ನಾನು ಪೈಲಟ್ ಆಗುತ್ತೇನೆ ಎಂದು ಹೇಳುತ್ತಿದ್ದಳು. ಅದಕ್ಕೆ‌ ನಾವು ಬೆಂಬಲ್ ನೀಡಿದ್ದೇವೆ. ಇದೀಗ ಮಗಳು ಗುರಿಯನ್ನು ಯಶಸ್ವಿಯಾಗಿ ತಲುಪಿರುವುದು ಸಂತಸ ತಂದಿದೇ ಎಂದು ಹನಿಯಾ ತಾಯಿ ನಾಝಿಯಾ ಹೇಳಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version