ತಾಜಾ ಸುದ್ದಿ

ಹಳಿ ತಪ್ಪಿದ ರೈಲು ಸಂಚಾರದಲ್ಲಿ ವ್ಯತ್ಯಯ

Published

on

ಮಂಗಳೂರು, ಮೇ 22 : ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ಕಾರವಾರ ಬೆಂಗಳೂರು ಸೇರಿದಂತೆ ವಿವಿಧ ರೈಲುಗಳ ಸಂಚಾರದಲ್ಲಿ ವ್ಯತ್ಯಯವುಂಟಾಗಿರುವ ಘಟನೆ ಮೇ 22ರ ಸೋಮವಾರ ವರದಿಯಾಗಿದೆ.

ಮಂಗಳೂರು ನಗರ ಹೊರವಲಯದ ತೋಕೂರು ಬಳಿ ಸೋಮವಾರ ಸಂಜೆ ವೇಳೆ ಘಟನೆ ನಡೆದಿದೆ. ಈ ಕಾರಣದಿಂದಾಗಿ ಒಂದು ಗಂಟೆ ತಡವಾಗಿ ರೈಲುಗಳು ಸಂಚರಿಸಿದ್ದು ಗೂಡ್ಸ್ ರೈಲು ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ರೈಲುಗಳು ತಡವಾಗಿ ಸಂಚಾರ ನಡೆಸಿದ್ದರಿಂದ ಕೆಲವು ಪ್ರಯಾಣಿಕರು ಗೊಂದಲಕ್ಕೀಡಾದ ಸನ್ನಿವೇಶವೂ ಕೂಡ ನಡೆದಿದೆ. ಹಲವು ಪ್ರಯಾಣಿಕರು ಪರದಾಡಬೇಕಾದ ದುಸ್ಥಿತಿ ಎದುರಾಯಿತು.

Leave a Reply

Your email address will not be published. Required fields are marked *

Trending

Exit mobile version