ಮನೋರಂಜನೆ

ಎರಡನೇ ಮದುವೆಗೆತಯಾರಾದ್ರಾ ಸಮಂತಾ?

Published

on

ಮುಂಬೈ,ಮೇ22:ಬಾಲಿವುಡ್ ಬ್ಯೂಟಿ ಸಮಂತಾ ಹಲವು ವಿಚಾರಗಳಲ್ಲಿ ಸುದ್ಧಿಯಲ್ಲಿದ್ದು. ಇದೀಗ  ಎರಡನೇ ಮದುವೆಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಡಿವೋರ್ಸ್  ಬಳಿಕ ಭಾರೀ ಸುದ್ದಿಯಲ್ಲಿರುವ ನಟಿ ಸಮಂತಾ ಮತ್ತೆ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

  • ಸಮಂತಾ ಹಾಗೂ ನಾಗಚೈತನ್ಯ ಜೋಡಿ ಟಾಲಿವುಡ್ ಅಂಗಳದ ಕ್ಯೂಟ್  ಕಪಲ್ ಎಂದು ಏನಿಸಿಕೊಂಡರು.  ಹಲವು   ವರ್ಷಗಳು ಪ್ರೀತಿ ಮಾಡಿ  ದಾಂಪತ್ಯ ಜೀವನಕ್ಕೆ  ಅಂತ್ಯ ಹಾಡಿ ದೂರ ದೂರ ಆಗಿದ್ದಾರೆ.  ಡಿವೋರ್ಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದು, ಒಂದು ಕಡೆ ನಾಗಚೈತನ್ಯ ಹೆಸರು ಶೋಭಿತಾ ಜೊತೆ ತಳಕು ಹಾಕಿಕೊಂಡರೆ, ಇನ್ನೊಂದು ಕಡೆ ಸಮಂತಾ ಮದುವೆ ಸುದ್ದಿ ಸೌಂಡ್ ಮಾಡುತ್ತಿದೆ.ಇನ್ನೂ ಸಮಂತಾ ಮದುವೆ ಸುದ್ದಿ ಚರ್ಚೆ ಆಗಲು ಕಾರಣ ಇತ್ತೀಚಿಗೆ ನಟಿ ಹಂಚಿಕೊಂಡಿದ್ದ ಹುಡುಗನ ಪೋಸ್ಟ್. ಸಮಂತಾ ತನ್ನ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಒಬ್ಬ ವ್ಯಕ್ತಿಯ ವಿವರಗಳನ್ನು ಹಾಕಿದ್ದು, ಲೂಕಿಂಗ್ ಫಾರ್‍  ಸೂಟೇಬಲ್ ಮ್ಯಾಚ್ ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ಡಾ.ಜ್ಯುವೆಲ್ ಗಮಾಡಿಯಾ ಇವರಿಗೆ ಸರಿಯಾದ ಜೋಡಿಯನ್ನು ಹುಡುಕಿಕೊಡುವುದ್ದಾಗಿ ಸಮಂತಾ  ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ  ಬರೆದಿದ್ದರು ಆದರೆ ಅದು ಬೇರೆಯದ್ದೇ ಅರ್ಥ ಕೊಡುತ್ತಿದೆ ಎಂದು ಫ್ಯಾನ್ಸ್​  ವ್ಯಕ್ತಪಡಿಸಿದ್ದಾರೆ.ಬಾಲಿವುಡ್ ನಾಯಕಿಯರಾದ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್, ಹಾಗೂ ಅಜಯ್ ದೇವಗನ್ ಸೇರಿದಂತೆ ಅನೇಕ ಬಿಟೌನ್ ಸೆಲೆಬ್ರಿಟಿಗಳಿಗೆ ಡಾ. ಜ್ಯುವೆಲ್ ಗಮಾಡಿಯಾ ಫ್ಯಾಮಿಲಿ ಡಾಕ್ಟರ್ ಆಗಿದ್ದಾರೆ.ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ  ನಟಿ ಸಮಂತ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version