ರಾಜಕೀಯ

ದಾಳಿಂಬೆ ಸಲಾಡ್​ ಆರೋಗ್ಯಕ್ಕೆಉಪಯುಕ್ತವಾಗಿದೆ.

Published

on

ಬೆಂಗಳೂರು: ಬೇಸಿಗೆಯಲ್ಲಿ ಸೂರ್ಯನ ಶಾಖವು ಹಸಿವನ್ನು ನಾಶಪಡಿಸುತ್ತದೆ. ಹೀಗಾಗಿ ಹಲವಾರು ಜನರು ಊಟದಲ್ಲಿ ತಾಜಾ ಹಣ್ಣುಗಳು, ಜ್ಯೂಸ್‌ಗಳು, ಸಲಾಡ್‌ಗಳು ಮತ್ತು ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಸೇರಿಸಿ ಊಟವನ್ನು ಹೆಚ್ಚು ರುಚಿಕರವಾಗಿಸುತ್ತಾರೆ. ಈ ಸಾಲಿನಲ್ಲಿ ದಾಳಿಂಬೆಯು ಒಂದಾಗಿದ್ದು, ದೇಹವನ್ನು ಹೈಡ್ರೇಟ್ ಮಾಡಲು ಅತ್ಯುತ್ತಮವಾದ ಹಣ್ಣಾಗಿದೆ.ದಾಳಿಂಬೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಗತ್ಯ ಪೋಷಕಾಂಶಗಳನ್ನು ಪೂರೈಸುತ್ತದೆ. ಈ ಆಹಾರ ಕ್ರಮಗಳನ್ನು ನಿಮ್ಮ ಊಟದಲ್ಲಿ ಸೇರಿಸಿದರೆ ದೇಹಕ್ಕೆ ಒಳ್ಳೆಯದು. ಮಾಗಿದ ಬಾಳೆಹಣ್ಣು, ಬೆರಳೆಣಿಕೆಯಷ್ಟು ಪಾಲಕ ಮತ್ತು ದಾಳಿಂಬೆ ಬೀಜ, ಜೇನುತುಪ್ಪ ಮಿಶ್ರಣ ಮಾಡಿ ಸೇವಿಸಿದರೆ ಇದು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ.

ಬೇಯಿಸಿದ ಕ್ವಿನೋವಾ, ಕತ್ತರಿಸಿದ ಸೌತೆಕಾಯಿ, ಚೆರ್ರಿ, ಟೊಮ್ಯಾಟೊ ಮತ್ತು ಕೆಲವು ದಾಳಿಂಬೆ ಬೀಜ,ಆಲಿವ್ ಎಣ್ಣೆ, ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಸೇರಿಸಿ ಸಲಾಡ್​ ಮಾಡಿ. ಈ ಸಲಾಡ್ ಪ್ರೋಟೀನ್, ಫೈಬರ್ ಮತ್ತು ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ.

ಒಂದು ತಾಜಾ ದಾಳಿಂಬೆವನ್ನು ತೆಗೆದುಕೊಂಡು ಅದರ ರಸ ತೆಗೆದು ಸೇವಿಸಬಹುದಾಗಿದ್ದು, ಇದು ಬೇಸಿಗೆಯ ಆರೋಗ್ಯಕರ ಪಾನೀಯವಾಗಿದೆ. ಬೇಕಾದರೆ ಸ್ವಲ್ಪ ನಿಂಬೆ ರಸ ಹಾಗೂ ಸಿಹಿಗಾಗಿ ಜೇನುತುಪ್ಪವನ್ನು ಸೇರಿಸಬಹುದಾಗಿದೆ.

ದಾಳಿಂಬೆ ಬೀಜ ಮತ್ತು ಮಾಗಿದ ಆವಕಾಡೊಗಳನ್ನು ಮಿಶ್ರಣ ಮಾಡಿ ಅದಕ್ಕೆ ಚೌಕವಾಗಿ ಕತ್ತರಿಸಿದ ಟೊಮ್ಯಾಟೊ, ಕೆಂಪು ಈರುಳ್ಳಿ, ಕೊಚ್ಚಿದ ಬೆಳ್ಳುಳ್ಳಿ, ನಿಂಬೆ ರಸ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕೆಲವು ದಾಳಿಂಬೆ ಬೀಜಗಳನ್ನು ಬೆರೆಸಿದ ಸಲಾಡ್​ ಆರೋಗ್ಯಕ್ಕೆ ಒಳ್ಳೆಯದು. ಒಟ್ಟಾರೆಯಾಗಿ ದಾಳಿಂಬೆ ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಿದೆ.

Leave a Reply

Your email address will not be published. Required fields are marked *

Trending

Exit mobile version