ತಾಜಾ ಸುದ್ದಿ

ಹಿಂದೂ ಕಾರ್ಯಕರ್ತರಿಗೆ ಹೊಡೆಸಿದ್ದು ನಳಿನ್‌ ಹಾಗೂ ಕಲ್ಲಡ್ಕ ಭಟ್ರು: ಅಭಯಚಂದ್ರ ಜೈನ್

Published

on

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ಮಾರಣಾಂತಿಕವಾಗಿ ಪೊಲೀಸರಿಂದ ಹೊಡೆಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ಟರು ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್‌ ಹೇಳಿದ್ದಾರೆ.

ಮಂಗಳೂರು: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ಮಾರಣಾಂತಿಕವಾಗಿ ಪೊಲೀಸರಿಂದ ಹೊಡೆಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ಟರು ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್‌ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ನಳಿನ್‌ ಕುಮಾರ್ ಅವರು ಒಬ್ಬ ಲೋಕಸಭೆ ಸದಸ್ಯನಾಗಿ ಕಾರ್ಯಕರ್ತರಿಗೆ ಪೊಲೀಸರಿಗೆ ಹೇಳಿ ಹೊಡೆಸಿದ್ದಾರಂದ್ರೆ ಏನರ್ಥ ? ನಿನ್ನೆ ಕಲ್ಲಡ್ಕ ಪ್ರಭಾಕರ ಭಟ್ಟರು ಕಾರ್ಯಕರ್ತರಿಗೆ ಹೊಡೆಸಿದ್ದು ಕಾಂಗ್ರೆಸ್ ಸರ್ಕಾರ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇನ್ನಷ್ಟೇ ಪ್ರಮಾಣ ವಚನ ಸ್ವೀಕರಿಸಬೇಕು, ಕಾಂಗ್ರೆಸ್ ಸರಕಾರ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ.

ಉಸ್ತುವಾರಿ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರೇ ಇದ್ದಾರೆ, ಆದರೆ ಭಟ್ಟರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಮತ್ತು ಕಲ್ಲಡ್ಕ ಪ್ರಭಾಕರ ಭಟ್ಟರು ಇನ್ಫ್ಲುಯೆನ್ಸ್ ಮಾಡಿ ಪೊಲೀಸರ ಮೂಲಕ ಹೊಡೆಸಿದ್ದಾರೆ ಎಂದು ಅಭಯಚಂದ್ರ ಜೈನ್‌ ನುಡಿದರು.

ಕಾರ್ಯಕರ್ತರಿಗೆ ಸಾಯುವ ಹಾಗೆ ಹೊಡೆಸಿದ್ದಾರಂದ್ರೆ ಇವರಿಗೆ ಮಾನವೀಯತೆ ಇದೆಯೇ ? ಎಂದು ಪ್ರಶ್ನಿಸಿದರು.

ದ.ಕ. ಜಿಲ್ಲೆಯಲ್ಲಿ ಪಕ್ಷದಲ್ಲಿ ಬಲಿಷ್ಠ ನಾಯಕತ್ವದ ಕೊರತೆ ಇದೆ. ಬಿಜೆಪಿಯವರು ದೇವರ ಹೆಸರಿನಲ್ಲಿ ರಾಜಕೀಯ ಮಾಡಿದ್ದರಿಂದ ನಾವು ಸೋತಿದ್ದೇವೆ.

ಕೋಮು ಭಾವನೆಯನ್ನು ಕೆರಳಿಸುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಜನ ಮತ ನೀಡಿದ್ದಾರೆ, ಒಳ್ಳೆಯ ಸರ್ಕಾರ ಬಂದಿದೆ. ಒಳ್ಳೆಯ ಆಡಳಿತ ನೀಡುತ್ತೇವೆ ಎಂದರು.

ನಮ್ಮ ಸರಕಾರದಿಂದ ಇನ್ನೂ ಅತ್ಯುತ್ತಮವಾದ ಜನಪರ ಯೋಜನೆಗಳನ್ನು ನಾವು ಜಾರಿಗೆ ತರಲಿದ್ದೇವೆ. ಈಗಾಗಲೇ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನೂ ಕೂಡಾ ಈಡೇರಿಸುವ ಹೊಣೆಗಾರಿಕೆ ನಮಗೆ ಇದೆ ಎಂದು ಜೈನ್‌ ನುಡಿದರು.

Leave a Reply

Your email address will not be published. Required fields are marked *

Trending

Exit mobile version