ರಾಷ್ಟ್ರ ಸುದ್ದಿ

ಡಿ.ಕೆ.ಶಿವಕುಮಾರ್ ಗೆ ಎರಡು ಆಫರ್ ನೀಡಿದ ಕಾಂಗ್ರೆಸ್

Published

on

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಸಸ್ಪೆನ್ಸ್ 4ನೇ ದಿನವೂ ಮುಂದುವರಿದಿದ್ದು, ಸದ್ಯಕ್ಕಂತೂ ಬಗೆ ಹರಿಯುವಂತೆ ಕಾಣುತ್ತಿಲ್ಲ, ಇಬ್ಬರು ನಾಯಕರನ್ನು ಸಮಾಧಾನಪಡಿಸಿ ಸರ್ಕಾರ ರಚಿಸಲು ಹೈಕಮಾಂಡ್ ಹರಸಾಹಸಪಡುತ್ತಿದೆ.

ಇಂದು ದೆಹಲಿಯಲ್ಲಿ ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ  ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಎರಡು ಆಫರ್ ಗಳನ್ನು ನೀಡಿದರು.

ಮೊದಲ ಆಯ್ಕೆಯಲ್ಲಿ ರಾಜ್ಯದ ಏಕೈಕ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡುವುದು. ಹಾಗೂ ಇದರ ಜೊತೆಗೆ ಅವರು ಆಯ್ಕೆ ಮಾಡುವ 6 ಸಚಿವಾಲಯಗಳನ್ನು ಅವರಿಗೆ ನೀಡುವುದಾಗಿತ್ತು. ಆದರೆ ಈ ಆಫರ್ ನ್ನು ಡಿ.ಕೆ.ಶಿವಕುಮಾರ್ ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಎರಡನೆಯದಾಗಿ ಸಿದ್ದರಾಮಯ್ಯ 2 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಮತ್ತು ಡಿ.ಕೆ.ಶಿವಕುಮಾರ್ ಅವರು 3 ವರ್ಷಗಳ ಕಾಲ ಮುಖ್ಯಮಂತ್ರಿಯಾಗುವುದು. ಈ ಆಯ್ಕೆಯನ್ನು ಕೂಡ ಡಿ.ಕೆ.ಶಿವಕುಮಾರ್ ಅವರು ನಿರಾಕರಿಸಿದ್ದಾರೆಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Trending

Exit mobile version