ಜೂಮ್ ಪ್ಲಸ್

ವಿವಿಧ ಕಾರ್ಯಗಳ ಅನುಷ್ಠಾನಕ್ಕೆ ನೂತನ ಶಾಸಕರಿಗೆ ವಾಣಿಜ್ಯೊಧ್ಯಮ ಸಂಸ್ಥೆಯಿಂದ ಒತ್ತಾಯ.

Published

on


ಗಂಗಾವತಿ:ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ವಿವಿಧ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ನೂತನ ಶಾಸಕರಾದ ಶಿವರಾಜ ತಂಗಡಗಿ ಮತ್ತು ಜನಾರ್ಧನ ರೆಡ್ಡಿಯವರಿಗೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಒತ್ತಾಯ ಮಾಡಿದೆ.

ಕೆಳಕಂಡ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಲು ಶಾಸಕರೂ ಸೇರಿದಂತೆ ಆಯಾ ಪಕ್ಷದ ಮುಖಂಡರಿಗೆ ವ್ಯಾಟ್ಸಾಪ್ ಸಂದೇಶದ ಮೂಲಕ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮನವಿ ಮಾಡಿದ್ದಾರೆ.

1) ಗಂಗಾವತಿ-ದರೋಜಿ ರೈಲ್ವೆ ಲೈನ್ ಕಾಮಗಾರಿಗೆ ರಾಜ್ಯದ ಅನುದಾನ,
2) ಗಂಗಾವತಿ ಕ್ಷೇತ್ರದಲ್ಲಿ ಕರಡಿ ಧಾಮ,
3) ಗಂಗಾವತಿ-ಬಳ್ಳಾರಿ ರಸ್ತೆಗಳ ಉನ್ನತೀಕರಣ,
4) ವಡ್ಡರಹಟ್ಟಿ-ವಿಧ್ಯಾನಗರ,
5) ಹೊಸಳ್ಳಿ-ಆನೆಗುಂದಿ,
6)ಆನೆಗುಂದಿ-ಬಸಾಪಟ್ಟಣ ವರ್ತೂಲ ರಸ್ತೆಗಳ ನಿರ್ಮಾಣ,
7) ಹೊಸಳ್ಳಿ -ಕಂಪ್ಲಿ ರಸ್ತೆ
8) ವಡ್ದರಹಟ್ಟಿ-ಹೇರೂರ,
9) ಬಸಾಪಟ್ಟಣ -ಹೇರೂರ,
10) ಡಾಕ್ಟರ್ ಕ್ಯಾಂಪ್- ಹೇರೂರ
11) ಹೇರೂರ-ಹೊಸ್ಕೇರಾ
12) ಆನೆಗುಂದಿ-ಗಂಗಾವತಿ
13) ಆನೆಗುಂದಿ-ಹಂಪಿ ಮತ್ತು
14) ಗ್ರಾಮೀಣ ಪ್ರದೇಶದ ಎಲ್ಲಾ
ರಸ್ತೆಗಳ ಅಗಲಿಕರಣ.
15)ಗಂಗಾವತಿ ನಗರದಲ್ಲಿ ಎಲ್ಲಾ ರಸ್ತೆಗಳ ಅತಿಕ್ರಮಣ ತೆರುವು ಮತ್ತು ಅಗಲೀಕರಣ.
16) ಗಂಗಾವತಿಯಲ್ಲಿ ಎ.ಆರ್.ಟಿ.ಓ.ಕಚೇರಿ,
17) ಉಪ ಆಯುಕ್ತರ ಕಚೇರಿ ಆರಂಭ
18) ತುಂಗಭದ್ರಾ ನದಿಗೆ ಆನೆಗುಂದಿಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ.
19) ಗಂಗಾವತಿಯಲ್ಲಿ ಸಂಯುಕ್ತ ಆಯುಷ್ ಆಸ್ಪತ್ರೆ ನಿರ್ಮಾಣ.

ಈ ಎಲ್ಲಾ ಕಾರ್ಯಗಳಿಗೆ ನೂತನ ಶಾಸಕರು ಆಧ್ಯತೆ ನೀಡಬೇಕು ಎಂದು ಕೋರಿರುವ ಅಶೋಕಸ್ವಾಮಿ ಹೇರೂರ,ಕನಕಗಿರಿ ಕ್ಷೇತ್ರದ ವೀರಯ್ಯ ಹಿರೇಮಠ, ಕಾಂಗ್ರೆಸ್ ಯುವ ಮುಖಂಡರಾದ ಬಸಯ್ಯ ಸಸಿಮಠ,ಶಶಿಧರಗೌಡ ಮಾಲೀ ಪಾಟಿಲ್ ಹೇರೂರ, ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ನಾಯಕಿ ಶೈಲಜಾ ಹಿರೇಮಠ,ಕಲ್ಯಾಣ ಕರ್ನಾಟಕ ರಾಜ್ಯ ಪಕ್ಷದ ಜಿಲ್ಲಾ ಅಧ್ಯಕ್ಷ ಮನೋಹರಗೌಡ ಹೇರೂರ, ಮುಖಂಡರಾದ ಸಿಂಗನಾಳ ಪಂಪಾಪತಿ ಸಾಹುಕಾರ,ಅಮರ ಜ್ಯೊತಿ ನರಸಪ್ಪ ಮುಂತಾದವರಿಗೆ ಸಂದೇಶದ ಮೂಲಕ ಆಗ್ರಹಿಸಿದ್ದಾರೆ.

ಈ ಬಗ್ಗೆ ಸಂಸ್ಥೆಯಿಂದ ಶಾಸಕದ್ವಯರಿಗೆ ಖುದ್ದಾಗಿ ಮನವಿ ಪತ್ರ ಸಲ್ಲಿಸುವುದಾಗಿ ಹೇರೂರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version