ಕಾಂಗ್ರೆಸ್, ಬಿಜೆಪಿಗೆ ಪುಟ್ಬಾಲ್ ನಡುಕ ಹುಟ್ಟಿಸಿರುವದಂತು ನಿಜ
ಕ್ಷೇತ್ರದಲ್ಲಿ ಜನರ ಮಾತುಗಳು
ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಲವಿದೆ ,ಈಗ ಚೇತರಿಸಿಕೊಂಡಿದೆ ,ಕಾಂಗ್ರೆಸ್ ಕೂಡಾ ಚೇತರಿಸಿಕೊಂಡಿದೆ. KRPP ಯಾರ ಓಟು ತೆಗೆದುಕೊಳ್ಳುವ ದರಮೇಲೆ ಬಿಜೆಪಿ, ಕಾಂಗ್ರೆಸ್ ಬಹುಷ್ಯ ನಿರ್ಧಾರ ?
ರಾಜ್ಯದಲ್ಲಿ ಹೈವೋಲ್ವೇಜ್ ಕ್ಷೇತ್ರಗಳಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಸಹ ಒಂದು, ಬಿಜೆಪಿ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ, ಗಂಗಾವತಿಯಿಂದಲೇ ಮೊದಲ ಸರ್ಧೆ ಎದುರಿಸಲು ಬಂದಿರುವ ಜನಾರ್ಧ ನರೆಡ್ಡಿಯಿಂದ ಗಂಗಾವತಿ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.
ಜನಾರ್ಧನರೆಡ್ಡಿ ಎಂಟ್ರಿ ಕೊಡುವ ಮುನ್ನ ಗಂಗಾವತಿ ಮತಕ್ಷೇತ್ರದ ಚಿತ್ರಣ ಬೇರೆ ಇತ್ತು. ಬಿಜೆಪಿಯಿಂದ ಪರಣ್ಣ ಮುನವಳ್ಳಿ, ಕಾಂಗ್ರೆಸ್ ನಿಂದ ಇಕ್ಬಾಲ್ ಅನ್ಸಾರಿ ನಡುವೆ ನೇರ ಹಣಾಹಣಿ ಎಂದು ಲೆಕ್ಕ ಹಾಕಲಾಗಿತ್ತು. ಆದರೆ ಜನಾರ್ಧನ ರೆಡ್ಡಿ ಆಗಮಿಸಿದ ಮೇಲೆ ಸದ್ಯಕ್ಕಿದ್ದು ತ್ರಿಕೋನ ಸರ್ಧೆಯ ಕ್ಷೇತ್ರವಾಗಿ ಕಂಡು ಬಂದಿತ್ತು.
ಕೆಪಿಪಿ ಉದಯಗೊಂಡ ನಂತರ ಶಾಸಕ ಪರಣ್ಣ ಮತ್ತು ಪಡೆ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಪರಣ್ಯ ಅಖಾಡಕ್ಕಿಳಿದಾಗ ಚಿತ್ರಣ ಬೇರೆಇತ್ತು,ಈಗ ಚಿತ್ರಣ ಹಂತ ಹಂತವಾಗಿ ಬದಲಾಗುತ್ತಾ ಬರುತ್ತಿದೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಯವರ ಪರ ಸಾಕಷ್ಟು ಸಮುದಾಯಗಳು ಹಗಲಿರುಳು. ಗೆಲುವಿಗೆ ಪ್ರಯತ್ನ ಪಡುತಿದ್ದಾರೆ. ಅಧಿಕಾರವಧಿಯಲ್ಲಿ ಹೆಸರು ಕೆಡಿಸಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಗೆ ಕಿವಿಕೊಡದೆ ಕಾರ್ಯ ಕರ್ತರು ಕೆಲಸ ಮಾಡುತಿದ್ದಾರೆ.
ಪಾಳೇಗಾರಿಕೆ ಬಿಡಲೊಲ್ಲದ ಅನ್ಸಾರಿ: ಕಾಂಗ್ರೆಸ್ ಅಭ್ಯರ್ಥಿ ಉತ್ತಮ ಆಡಳಿತಗಾರರಾಗಿದ್ದರೂ ಪಾಳೆಗಾರಿಕೆ ಸಂಸ್ಕೃತಿಯಿಂದ ಹೊರಬಂದಿಲ್ಲ. ಕ್ಷೇತ್ರದ ಜನ ಅಳಲನ್ನು ಹೇಳಲು ಬಂದರೆ ಅವರ ವೈಟ್ ಹೌಸ್ ಎಂಟ್ರಿ ಅಷ್ಟು ಸುಲಭವಿಲ್ಲ ಮನೆಯೊಳಗೆ ಪ್ರವೇಶ ಸಿಕ್ಕರೂ ಕನಿಷ್ಟ ನಾಲ್ಕಾರು ಗಂಟೆ ಕಾಯಬೇಕಾಗುತ್ತದೆ ಎಂದು ಜನರು ಮಾತನಾಡುತಿದ್ದರೂ.ಸಿದ್ದರಾಮಯ್ಯನರ ಅಭಿಮಾನಿಗಳು,ಅನ್ಸಾರಿ. ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರು ಅನ್ಸಾರಿ ಗೆಲುವಿಗಾಗಿ ಶ್ರಮಿಸುತಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಹುರಿಯಾಳನ್ನು ಕಣಕ್ಕಿಳಿಸಿದೆ. ಎಚ್. ಆರ್.ಚನ್ನಕೇಶವ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದು, ಚುನಾವಣೆ ವೇಳೆ ಮಾತ್ರ ಚಲಾವಣೆಯಲ್ಲಿ ಇರುತ್ತಾರೆ, ಆನಂತರ ಅವರ ಸುಳಿವೇ ಇರುವುದಿಲ್ಲ, ಎಂದು ವಿರೋದ ಪಕ್ಷದವರು ಪ್ರಚಾರ ಮಾಡುವದರಿಂದ ಮತ್ತು ಹಣ ಬಲ ಇಲ್ಲದಿರುವದು ಹೆಚ್ಚಿನ ಸಂಖ್ಯೆ ಲ್ಲಿ ಮತ ಗಳಿಸುವಲ್ಲಿ ಹಿಂದೆ ಬೀಳಬಹು.
ಫುಟ್ಬಾಲ್..?: ಗಂಗಾವತಿ ಪ್ರವೇಶ ಮಾಡಿದ ಸಂದರ್ಭದಲ್ಲಿ ಸಿಕ್ಕಿದ್ದ ಜನಬೆಂಬಲ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಡಿಮೆಯಾದಂತೆ ಕಾಣುತ್ತಿದೆ.ಜನಾರ್ಧನರೆಡ್ಡಿಯವರನ್ನುಕಾಣುವುದು ಸುಲಭದ ಮಾತಲ್ಲ. ನೇರವಾಗಿ ಅವರು ದೊಡ್ಡವರಿಗೆ ಸಿಗುವುದಿಲ್ಲ. ಇನ್ನೂ ಜನಸಾಮಾನ್ಯರ ಕೈಗೆ ಸಿಗ್ತಾರಾ? ಏಳು ಸುತ್ತಿನ ಕೋಟೆಯನ್ನು ಬೇಧಿಸಬಹುದು, ಬೆಂಬಲಿಗರ ಹೆಸರಿನಲ್ಲಿ ಸುತ್ತುವರೆದಿರುವ ರೆಡ್ಡಿ ಬೆಂಬಲಿಗರ ನ್ನು ದಾಟಿ ಭೇಟಿ ಕಷ್ಟಸಾಧ್ಯ, ಇವರನ್ನೇನಾದರೂ ಗೆಲ್ಲಿಸಿದರೆ ನಾಳೆ ನಮ್ಮ ಸಮಸ್ಯೆ ಕೇಳ್ತಾರಾ? ಎನ್ನುವ ಮಾತುಗಳು ಸದ್ಯ ಕ್ಷೇತ್ರದಲ್ಲಿ ಕೇಳಿ ಬರತೊಡಗಿದೆ. ಎಲ್ಲದಕ್ಕೂ ಮೇ 10 ರಂದು ಉತ್ತರ ಸಿಗಲಿದೆ ?. ಎಲ್ಲದಕ್ಕೂ ಮತದಾರನ ತೀರ್ಮಾನ ಅಂತಿಮ .