ಜೂಮ್ ಪ್ಲಸ್

ತಾಲೂಕ ಸ್ವೀಪ್ ಸಮಿತಿಯಿಂದ ಇವಿಎಂ ಮತ್ತು ವಿವಿಪ್ಯಾಟ್ ಕುರಿತು       ಯುವ ಮತದಾರರಿಗೆ ಜಾಗೃತಿ ಕಾರ್ಯಕ್ರಮ  

Published

on

                    

  ಕೊಪ್ಪಳ:- ನಗರದ ಗ.ವಿ.ವ.ಟ್ರಸ್ಟನ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ                                    ಇಂದು ಬೆಳಿಗ್ಗೆ ಕೊಪ್ಪಳ ತಾಲೂಕ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಕುರಿತಂತೆ ಯುವ ಮತದಾರರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವೀಪ್ ಸಮಿತಿಯ ಮುಖ್ಯಸ್ಥರು ಅಕ್ಷರ ದಾಸೋಹದ ಸಹಾಯಕ ನಿರ್ದೆಶಕರಾದ ಹನುಮಂತಪ್ಪ ಮಾತನಾಡಿ ಮತದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಸಧೃಡ ಸರ್ಕಾರದ ರಚನೆಯಲ್ಲಿ ಮತದಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಮತದಾರರು ಆದ ತಾವುಗಳು ಯಾವುದೆ ಆಸೆ, ಆಮಿಷಗಳಿಗೆ ಒಳಗಾಗದೆ ನಿರ್ಭಿತಿಯಿಂದ ಮತವನ್ನು ಚಲಾಯಿಸಬೇಕು, ನೀವು ಮತದಾನ ಮಾಡುವುದರ ಜೊತೆಗೆ ನಿಮ್ಮ ಮನೆಯ ಹಾಗೂ ಗ್ರಾಮದ, ಓಣಿಯ ಸಾರ್ವಜನಿಕರಿಗೆ ಕೂಡಾ ಮತದಾನ ಮಾಡುವಂತೆ ಜಾಗೃತೆ ವಹಿಸುವದು ಅತ್ಯಗತ್ಯ, ತಾಲೂಕ ಸ್ವೀಪ್ ಸಮಿತಿಯು ಮತದಾನ ಜಾಗೃತಿ, ಮತದಾನ ಹೆಚ್ಚಳ ಹಾಗೂ ಮತದಾರರ ಸಕ್ರೀಯ ಭಾಗವಿಸುವಿಕೆಗೆ ನಿರಂತರವಾಗಿ ಪ್ರಯತ್ನಿಸುತ್ತಿದೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಡಾ ಎಸ್.ಬಿ.ಕಂಬಾರ್ ಮಾತನಾಡಿ ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಆಶಯಗಳನ್ನು ಎತ್ತಿ ಹಿಡಿಯೋಣ ಎಂದು ಹೇಳಿದರು. ಸ್ವೀಪ್ ಸಮಿತಿಯ ಸದಸ್ಯರಾದ ವಿರೇಶ ಬಡಿಗೇರ ಅವರು ಚುನಾವಣಾ ಜಾಗೃತಿ ಹಾಡು ಹಾಡಿದರು. ಪೂರ್ಣೆಂದ್ರಸ್ವಾಮಿ ಭೂಸನೂರಮಠ ಅವರು ಚುನಾವಣಾ ಪ್ರತಿಜ್ಞಾವಿಧಿ ಬೋಧಿಸಿದರು. ಬಸವರಾಜ ಬಳಿಗಾರ ಅವರು ಇವಿಎಂ ಮತ್ತು ವಿವಿಪ್ಯಾಟ್ ಕುರಿತಂತೆ ಪ್ರಾತ್ಯಕ್ಷೀಕೆಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಗಂಗಾಧರ ಸೊಪ್ಪಿಮಠ ನಿರೂಪಿಸಿದರು. ಶೈಲಜಾ ಆರಳಲೇಮಠ ಸ್ವಾಗತಿಸಿದರು. ಸಿಂದೂ ಪ್ರಾರ್ಥಿಸಿದರು. ಡಾ.ಆನಂದರಾವ ದೇಸಾಯಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಪಕರುಗಳಾದ ಲತಾ ದೇಸಾಯಿ, ಡಾ.ನೀಲಾಂಬಿಕೆ, ಕಾಂಚನಗAಗಾ, ಅನಿತಾ, ಶಿವಕುಮಾರ, ಜಂಬಯ್ಯ ದೇವರಾಜ ಹಾಗೂ ದೇವೆಂದ್ರ ಮತ್ತು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Trending

Exit mobile version