ಜೂಮ್ ಪ್ಲಸ್

ಗೋಸೇವಕ ಮಹೇಂದ್ರ ಮುಣೋತ್ ಅವರ ಮತದಾನ ಕುರಿತು ಜನ ಜಾಗೃತಿ ಗೀತೆ ಬಿಡುಗಡೆ

Published

on

ಬೆಂಗಳೂರು; ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತು ಮಾರುತಿ ಮೆಡಿಕಲ್ಸ್‍ನ ಗೋಸೇವಕ ಮಹೇಂದ್ರ ಮುಣೋತ್ “2023ರ ಮತದಾನ ಜಾಗೃತಿ” ಗೀತೆ ಬಿಡುಗಡೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸ್ವತಃ ತಾವೇ ನಟಿಸಿ ನಿರ್ದೇಶಿಸಿರುವ 4.48 ನಿಮಿಷದ ಗೀತೆಯನ್ನು ಬಿಡುಗಡೆ ಮಾಡಿ, ಬಲಿಷ್ಠ ಪ್ರಜಾ ಪ್ರಭುತ್ವಕ್ಕಾಗಿ ಮತ್ತು ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಜಾಗೃತಿ ಗೀತೆ ರಚಿಸಲಾಗಿದೆ. ಚುನಾವಣೆಯಲ್ಲಿ ಎಲ್ಲಾ ಮತದಾರರು ನೈತಿಕ ಮತದಾನ ಮಾಡಿ ಪ್ರಜಾಪ್ರಭುತ್ವವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದರು.

ಆನಂದ್ ಸಿನಿಮಾಸ್ ಸಂಸ್ಥೆಯಿಂದ ಗೀತೆ ಪ್ರಸ್ತುತ ಪಡಿಸಿದ್ದು, ಬಿ.ಪಿ. ಹರಿಹರನ್ ನಿರ್ದೇಶನ ಮಾಡಿದ್ದಾರೆ. ರೇವಣ್ಣ ನಾಯಕ್ ಅವರ ಗೀತೆ ರಚನೆಯಿದ್ದು,. ಎ.ಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಅಜಯ್ ವಾರಿಯರ್ ಹಾಡಿದ್ದಾರೆ. ನಾಗೇಂದ್ರ ರಂಗಾರಿ ಛಾಯಾಗ್ರಹಣದಲ್ಲಿ ಗೀತೆ ಮೂಡಿಬಂದಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಬಿ.ಎನ್. ಯಶಸ್, ನಿರ್ದೇಶಕ ಬಿ.ಪಿ. ಹರಿಹರನ್, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Trending

Exit mobile version