ಜೂಮ್ ಪ್ಲಸ್

ಜಿಂಕೆ ಕೊಂಬು ನಕ್ಷತ್ರ ಆಮೆ.ಮಾರಲು ಸಾಗಾಟ ಇಬ್ಬರ ಬಂಧನ

Published

on


ವರದಿ :ಬಂಗಾರಪ್ಪ ಸಿ ಹನೂರು .
ಚಾಮರಾಜನಗರ: ಪ್ರತ್ಯೇಕ ಪ್ರಕರಣದಲ್ಲಿ ಜಿಂಕೆಕೊಂಬು, ನಕ್ಷತ್ರ ಆಮೆ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ನರೀಪುರ ಹಾಗೂ ಸರಗೂರು ಗ್ರಾಮದಲ್ಲಿ ನಡೆದಿದೆ.

ನರೀಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ಜಿಂಕೆ ಕೊಂಬು ಸಾಗಾಟ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಕೂರ್ಗಳ್ಳಿ ಗ್ರಾಮದ ಮಂಜಾಚಾರಿ(42) ಎಂಬಾತನನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿ ಬಂಧಿತನಿಂದ ಜಿಂಕೆಕೊಂಬು ವಶಕ್ಕೆ ಪಡೆದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸರಗೂರು ಗ್ರಾಮದ ಬಸ್‌ ನಿಲ್ದಾಣ ಸಮೀಪ ನಕ್ಷತ್ರ ಆಮೆ ಸಾಗಾಟ ಮಾಡುತ್ತಿದ್ದ ತುಮಕೂರು ಜಿಲ್ಲೆಯ ಚಟ್ನಹಳ್ಳಿ ಗ್ರಾಮದ ಫೈರೋಜ್ ಖಾನ್ (36) ಎಂಬಾತನನ್ನು ಬಂಧಿಸಿ ಆಮೆಯನ್ನು ರಕ್ಷಿಸಲಾಗಿದೆ.ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

WhatsAppTelegramFacebookTwitterEmailMessageShare

Leave a Reply

Your email address will not be published. Required fields are marked *

Trending

Exit mobile version