ಇಂದು ಗಂಗಾವತಿ ನಗರದ ಜಂತಕಲ್ ಬೈಪಾಸ್ ರಸ್ತೆಯಲ್ಲಿ ಬರುವ ವೃದ್ದಾಶ್ರಮದಲ್ಲಿ
ಜನಪ್ರಿಯ ಶಾಸಕರು ಮತ್ತು ಬಿಜೆಪಿ ಅಭ್ಯರ್ಥಿಗಳಾದ ಶ್ರೀ ಪರಣ್ಣ ಮುನವಳ್ಳಿ ಅವರು ಚಿಕ್ಕ ಸಭೆ ನೆಡೆಸಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನ ವಿವರವಾಗಿ ತಿಳಿಸಿ
ಮೊತ್ತೊಮ್ಮೆ ಕಮಲದ ಚಿಹ್ನೆ ಇರುವ 3 ನೆ ಬಟನ್ ಒತ್ತುವ ಮೂಲಕ ಬಿಜೆಪಿ ಬಹು ಮತ ನೀಡಿ ಗೆಲ್ಲಿಸ ಬೇಕೆಂದು ಮನವಿ ಮಾಡಿಕೊಂಡರು.
ನಂತರ ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ ಶಾಸಕರನ್ನ ಗೌರವಿಸಿ ಸತ್ಕರಿಸಿದರು.
ಈ ಸಮಯದಲ್ಲಿ ಪಾದ್ರಿಗಳಾದ ಬಸವರಾಜ ಪಾಧರ್, ಮಾಧ್ಯಮ ವಕ್ತಾರರಾದ ವೀರಭದ್ರಪ್ಪ ನಾಯಕ, ಶರಣಪ್ಪ ವಕೀಲರು, ವಿರೇಶ್, ಶಿವಪ್ಪ ಕೊಪ್ಪಳ ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು