Connect with us

ಉದ್ಯೋಗ

ಮಂಗಳೂರಿನ ಮಣ್ಣಗುಡ್ಡೆಯ ಅನುಗ್ರಹ ಕಟ್ಟಡದಲ್ಲಿ ಗಗನಸಖಿ ತರಬೇತಿಗಾಗಿ ಹುಟ್ಟಿಕೊಂಡ ಐಎಕ್ಸ್ಇ ಇನ್‌ಸ್ಟಿಟ್ಯೂಶನ್‌

Published

on

ಮಂಗಳೂರು ಜು 01 (Zoom Karnataka): ಮಂಗಳೂರಿನ ಮಣ್ಣಗುಡ್ಡೆಯ ಅನುಗ್ರಹ ಕಟ್ಟಡದಲ್ಲಿ ಹೊಸದಾಗಿ ಸ್ಥಾಪಿಸಲಾದ ವಿಮಾನಯಾನ ಮತ್ತು ಕೌಶಲ್ಯಾಭಿವೃದ್ಧಿಯ ಐಎಕ್ಸ್ಇ ಇನ್‌ಸ್ಟಿಟ್ಯೂಶನ್‌ನ್ನು

ಪೊಳಲಿಯ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಬುಧವಾರ ಉದ್ಘಾಟಿಸಿದರು.

ದೀಪ ಬೆಳಗಿಸಿದ ಬಳಿಕ ಸ್ವಾಮಿಯವರು ಮಾತನಾಡಿ, ಗಗನಸಖಿ ತರಬೇತಿಗಾಗಿ ಮಂಗಳೂರಿನಲ್ಲಿ ಹುಟ್ಟಿಕೊಂಡ ಈ ಸಂಸ್ಥೆಯಿAದ ಯುವಜನರ ಉದ್ಯೋಗ ಸಮಸ್ಯೆ ಬಗೆಹರಿಯುವಂತಾಗಲಿ. ಪ್ರಧಾನಿ ಮೋದಿಯವರ ಕನಸಿನಂತೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಡಿ ತೆರೆದುಕೊಂಡಿರುವ ಇಂತಹ ಶಿಕ್ಷಣ ಸಂಸ್ಥೆಗಳ ಮೂಲಕ ಉದ್ಯೋಗಾವಕಾಶಗಳು ಹೆಚ್ಚುವಂತಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಡಾ. ಮೋಹನ್ ಆಳ್ವ ಮಾತನಾಡಿ, ಯುವಜನರು ನಮ್ಮ ದೇಶದ ಸಂಪತ್ತು. ದೇಶದಲ್ಲಿ ಪ್ರತಿವರ್ಷ ೧೮ ಕೋಟಿ ಯುವಜನರು ವಿಜಿ-ಪಿಜಿ ಶಿಕ್ಷಣ ಪಡೆಯುತ್ತಿದ್ದಾರೆ. ಉದ್ಯೋಗದ ದೃಷ್ಟಿಯಿಂದ ಕೌಶಲ್ಯಾಭಿವೃದ್ಧಿಗಾಗಿ ಆದ್ಯತೆ ನೀಡಿರುವ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ಧಿಗಾಗಿ ಪ್ರತ್ಯೇಕ ಖಾತೆ ತೆರೆದಿದೆ. ಆಧುನಿಕ ಜಗತ್ತಿನಲ್ಲಿ ಕೌಶಲ್ಯಾಭಿವೃದ್ಧಿಗೆ ಮಹತ್ವ ಸಿಕ್ಕಿದ್ದು, ಪ್ರತಿಯೊಬ್ಬರೂ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಬೇಕು. ಇದರಿಂದ ಯುವಜನ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ. ಕೌಶಲ್ಯಾಭಿವೃದ್ಧಿ ಶಿಕ್ಷಣದಲ್ಲಿ ತಾಳ್ಮೆ, ಧರ್ಯ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಅಂತಹ ಸಾಧನಾಶೀಲ ತರಬೇತಿ ವೃತ್ತಿಜೀವನದಲ್ಲಿ ಸಹಕಾರಿಯಾಗುತ್ತದೆ ಎಂದರು.

ಬೆಕಿಸಾಫ್ಟ್ ಟೆಕ್ನಾಲಾಜೀಸ್‌ನ ನಿರ್ದೇಶಕ ನಾರಾಯಣ ಹೊಳ್ಳ ಮಾತನಾಡಿ, ಸಮಾಜದ ಮೇಲೆ ತೋರುವ ಕಾಳಜಿ ಒಂದು ರೀತಿಯ ಕೌಶಲ್ಯವೇ ಆಗಿದೆ. ಕೌಶಲ್ಯಾಭಿವೃದ್ಧಿಗೆ ಆಸಕ್ತಿ ಮತ್ತು ಪರಿಶ್ರಮ ಅವಶ್ಯ. ನಾವೀಗ ಫಲಿತಾಂಶಸಹಿತ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಕೌಶಲ್ಯಾಭಿವೃದ್ಧಿಯಿಂದ ವ್ಯಕ್ತಿ ತನ್ನ ಕಾಲ ಮೇಲೆ ನಿಂತು ಸಂತೋಷದ ಜೀವನ ಕಂಡುಕೊಳ್ಳಬಹುದು. ಇದು ಸಾಧನೆಯಿಂದ ಮಾತ್ರ ಸಾಧ್ಯ. ಮಕ್ಕಳ ಶ್ರೇಯೋಭಿವೃದ್ಧಿ ಬಯಸುವ ಪಾಲಕರು, ಮೊತ್ತಮೊದಲಾಗಿ ಸರಿಯಾದ ದಿಕ್ಕಿನಲ್ಲಿ ತಮ್ಮ ಕೌಶಲ್ಯ ಪ್ರಯೋಗಿಸಬೇಕು. ಈ ಸಂಸ್ಥೆ ರಾಜ್ಯಕ್ಕೂ ವಿಸ್ತರಿಸಲಿ ಎಂದರು.

ಸ್ವಸ್ತಿಕಾ ನ್ಯಾಶನಲ್ ಸ್ಕೂಲ್ ನ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಮಾತನಾಡಿ, ತಾಂತ್ರಿಕ ಜ್ಞಾನ, ಉದ್ಯೋಗಶೀಲತೆ, ಆಡಳಿತ ಕೌಶಲ್ಯ ಮೈಗೂಡಿಸಿಕೊಂಡಲ್ಲಿ ಒಂದು ಸಂಸ್ಥೆ ನಿಸ್ಸಂದೇಹವಾಗಿ ಪ್ರಗತಿ ಸಾಧಿಸುತ್ತದೆ. ಈ ಮೂರೂ ಗುಣ ಲಕ್ಷಣ ಈ ಸಂಸ್ಥೆಯವರಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಿ. ಗುಲಾಬಿ ಕನ್‌ಸಲ್ಟೆನ್ಸಿ ಪ್ರೈ ಲಿಮಿಟೆಡ್ ನಿರ್ದೇಶಕ ರೋಹಿತಾಕ್ಷ ಕುಮಾರ್, ಐಎಕ್ಸ್ಇ ಸಂಸ್ಥೆಯ ವಿಶ್ರುತಾ ಪ್ರಜ್ವಲ್, ಪಿ. ಗುಲಾಬಿ ಕನ್‌ಸಲ್ಟೆನ್ಸಿ ಪ್ರೈ ಲಿಮಿಟೆಡ್ ಪಾಲುದಾರ ಅನಿಲ್ ವಾಲ್ಡರ್, ಪಿ. ಗುಲಾಬಿ ಕನ್‌ಸಲ್ಟೆನ್ಸಿ ಪ್ರೈ ಲಿಮಿಟೆಡ್ ನಿರ್ದೇಶಕ ಮೋಹನದಾಸ್, ತುಳಸಿ ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.ಕೃತಿಕ್‌ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading