Connect with us

ಕ್ರೀಡಾ ಸುದ್ದಿ

ಮೊದಲು ಆ ಹೆಸರು ಬದಲಿಸಿ; IPL ವಿರುದ್ಧ ಗುಡುಗಿದ ಗುಜರಾತ್​ ಟೈಟಾನ್ಸ್​ ಸ್ಟಾರ್​ ಆಟಗಾರ!

Published

on

ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್​ ಮೇಲಿನ ಕ್ರೇಜ್​ ಹೆಚ್ಚಾಗುತ್ತಿದೆ. ಜನ ಟೆಸ್ಟ್​, ಏಕದಿನ ಪಂದ್ಯಕ್ಕಿಂತಲೂ ಟ20 ನೋಡಲು ಇಷ್ಟಪಡುತ್ತಾರೆ. ಕಾರಣ ಕೇವಲ 4 ಗಂಟೆಯಲ್ಲಿ ಪಂದ್ಯದ ಫಲಿತಾಂಶ ಏನು ಎಂದು ತಿಳಿಯುತ್ತದೆ. ಜೊತೆಗೆ ಹೊಡಿಬಡಿ ಆಟವನ್ನು ನೋಡಬಹುದಾಗಿದೆ.

ಅಲ್ಲದೆ ಈ ಸ್ವರೂಪದಲ್ಲಿ ಬೌಲರ್‌ಗಳ ಮೇಲೆ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸುತ್ತಾರೆ. ಮೊದಲ ಓವರ್‌ನಿಂದಲೇ ಬೌಲರ್‌ಗಳನ್ನು ದಂಡಿಸುತ್ತಾರೆ. ಅದರೆ ಕೆಲವೊಮ್ಮೆ ಕ್ರಿಕೆಟ್​ ಪ್ರಿಯರನ್ನು ಆಕರ್ಷಿಸಲೆಂದ ಬ್ಯಾಟಿಂಗ್ ಪಿಚ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದು ಬೌಲರ್‌ಗಳಿಗೆ ನರಕವಾಗುತ್ತದೆ.

ಸದ್ಯ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್​ನಲ್ಲೂ ಬ್ಯಾಟರ್​ಗಳ ಅಬ್ಬರ ಮುಂದುವರೆದಿದೆ. ಈವರೆಗೆ ನಡೆದ 6 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ 200+ ರನ್​ಗಳು ದಾಖಲಾಗಿವೆ. ಇದು ಬ್ಯಾಟರ್​ಗಳ ಪ್ರಾಬಲ್ಯ ಎತ್ತಿ ತೋರಿಸುತ್ತಿದೆ. ಇದರ ಬೆನ್ನಲ್ಲೇ ಗುಜರಾತ್​ ಟೈಟಾನ್ಸ್​ ತಂಡದ ಸ್ಟಾರ್​ ಆಟಗಾರ ಕಗಿಸೋ ರಬಾಡ ಆಕ್ರೋಶ ಹೊರಹಾಕಿದ್ದಾರೆ.

ಮಂಗಳವಾರ (ಮಾರ್ಚ್ 25) ನಡೆದ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಎಲ್ಲಾ ಬೌಲರ್‌ಗಳು ವಿಫಲರಾದರು. ವಿಶ್ವದರ್ಜೆಯ ಬೌಲರ್‌ಗಳಾದ ಕಗಿಸೊ ರಬಾಡ, ರಶೀದ್ ಖಾನ್, ಚಹಾಲ್​, ಅರ್ಶ್‌ದೀಪ್ ಸಿಂಗ್ ಮತ್ತು ಸಿರಾಜ್ ಬೌಲಿಂಗ್​ ಮೂಲಕ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇದಕ್ಕೆ ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ರಬಾಡ್ ಆಕ್ರೋಶ ಹೊರಹಾಕಿದ್ದಾರೆ.

ಕ್ರಿಕೆಟ್​ ಎಂದರೆ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಸಮತೋಲನ ಇರಬೇಕು. ಬ್ಯಾಟಿಂಗ್ ಬೌಲಿಂಗ್ ಎರಡೂ ಸರಾಗವಾಗಿ ನಡೆದರೆ ಮಾತ್ರ ಪ್ರೇಕ್ಷಕರಿಗೆ ಮನರಂಜನೆ ಸಿಗುತ್ತದೆ. ಆದರೆ ಟಿ20 ಸ್ವರೂಪ ಬಂದ ನಂತರ ಇದು ಬ್ಯಾಟರ್​ಗಳ ಆಟವಾಗಿ ಬದಲಾಗಿದೆ. ಐಪಿಎಲ್‌ನಲ್ಲೂ ಹಲವು ಪಿಚ್‌ಗಳನ್ನು ಬ್ಯಾಟಿಂಗ್ ಸ್ನೇಹಿಯಾಗಿ ಮಾಡಲಾಗುತ್ತಿದೆ. ಆದ್ದರಿಂದ 250ಕ್ಕೂ ಹೆಚ್ಚು ಸ್ಕೋರ್‌ಗಳನ್ನು ಸುಲಭವಾಗಿ ಗಳಿಸಲಾಗುತ್ತಿದೆ. ಇದಕ್ಕೆ ಕ್ರಿಕೆಟ್ ಅನ್ನುವ ಬದಲು ಬ್ಯಾಟಿಂಗ್​ ಎಂದು ಹೆಸರು ಬದಲಿಸಬೇಕು ಎಂದಿದ್ದಾರೆ.

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಿಚ್‌ಗಳು ತುಂಬಾ ಸಮತಟ್ಟಾಗುತ್ತಿವೆ. ಪ್ರತಿಯೊಂದು ಪಂದ್ಯದಲ್ಲೂ ನಾವು ಒಂದೇ ರೀತಿಯ ಪರಿಸ್ಥಿತಿಯನ್ನು ನೋಡುತ್ತೇವೆ. ಇದು ಆಟದಿಂದ ಮಜವನ್ನು ಕಸಿದುಕೊಳ್ಳುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮಂಗಳವಾರ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಬಾಡ 4 ಓವರ್‌ಗಳಲ್ಲಿ 41 ರನ್‌ ನೀಡಿ ಒಂದು ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 11 ರನ್‌ಗಳಿಂದ ಸೋಲನ್ನು ಕಂಡಿತು.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading