ಇತ್ತೀಚೆಗೆ ಸಮಂತಾ ಅವರ ನಟನೆಯ ‘ಸಿಟಾಡೆಲ್: ಹನಿ ಬನಿ’ ಸೀರಿಸ್ ರಿಲೀಸ್ ಆಯಿತು. ಈ ಸೀರಿಸ್ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿ ಸಕ್ಸಸ್ ಪಾರ್ಟಿ ಕೂಡ ಆಯೋಜನೆ ಮಾಡಲಾಯಿತು. ಇದರ ಪ್ರಚಾರದಲ್ಲಿ ಸಮಂತಾ ತೊಡಗಿದ್ದರು. ಈ ವೇಳೆ ಅವರಿಗೆ ಒಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ಉತ್ತರ ನೀಡಿದ್ದಾರೆ.
ಸಮಂತಾ ಅವರು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿ ಇದ್ದಾರೆ. ಅವರ ಮಾಜಿ ಪತಿ ನಾಗ ಚೈತನ್ಯ ಇತ್ತೀಚೆಗೆ ಮದುವೆ ಆದರು. ನಟಿ ಶೋಭಿತಾ ಧುಲಿಪಾಲ್ ಜೊತೆ ಅವರ ವಿವಾಹ ಆಗಿದೆ. ಆದರೆ, ಈ ವಿಚಾರದಲ್ಲಿ ಸಮಂತಾ ಅವರು ಯಾವುದೇ ಕಮೆಂಟ್ ಮಾಡಿಲ್ಲ. ಈ ಬಗ್ಗೆ ಅವರು ಮಾತನಾಡುವುದಿಲ್ಲ ಅನ್ನೋದು ಅನೇಕರಿಗೆ ತಿಳಿದಿದೆ. ಹೀಗಿರುವಾಗಲೇ ಅವರು ಒಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವೈರಲ್ ಆಗಿದೆ.
ಇತ್ತೀಚೆಗೆ ಸಮಂತಾ ಅವರ ನಟನೆಯ ‘ಸಿಟಾಡೆಲ್: ಹನಿ ಬನಿ’ ಸೀರಿಸ್ ರಿಲೀಸ್ ಆಯಿತು. ಈ ಸೀರಿಸ್ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿ ಸಕ್ಸಸ್ ಪಾರ್ಟಿ ಕೂಡ ಆಯೋಜನೆ ಮಾಡಲಾಯಿತು. ಇದರ ಪ್ರಚಾರದಲ್ಲಿ ಸಮಂತಾ ತೊಡಗಿದ್ದರು. ಈ ವೇಳೆ ಅವರಿಗೆ ಒಂದು ಪ್ರಶ್ನೆ ಕೇಳಲಾಯಿತು. ,‘ನೀವು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿ ಖರ್ಚು ಮಾಡಿದ ಹಣ ಎಂದರೆ ಯಾವುದು’ ಎಂದು ಕೇಳಲಾಯಿತು.ಇದಕ್ಕೆ ಉತ್ತರಿಸಿದ ಸಮಂತಾ ಅವರು, ‘ನನ್ನ ಎಕ್ಸ್ಗೆ ನೀಡಿದ ದುಬಾರಿ ಗಿಫ್ಟ್’ ಎಂದಿದ್ದಾರೆ. ಇದಕ್ಕೆ ವರುಣ್ ಧವನ್ ನೇರ ಪ್ರಶ್ನೆ ಮಾಡಿದ್ದಾರೆ. ‘ಯಾವ ಗಿಫ್ಟ್ ಮತ್ತು ಎಷ್ಟು’ ಎಂದು ಕೇಳಿದ್ದಾರೆ. ಆದರೆ, ಇದಕ್ಕೆ ಅವರು ಉತ್ತರಿಸಿಲ್ಲ. ‘ಸ್ವಲ್ಪ ಹಣ. ಮುಂದಕ್ಕೆ ಹೋಗೋಣ’ ಎಂದಿದ್ದಾರೆ ಅವರು.
ನಾಗ ಚೈತನ್ಯ ಬಳಿ ಹಲವು ದುಬಾರಿ ಕಾರುಗಳು ಇವೆ. ಇದರಲ್ಲಿ ಅವರು ಹೊರಗೆ ಸುತ್ತಾಟ ಮಾಡುತ್ತಾರೆ. ಈ ಪೈಕಿ ಒಂದು ಕಾರನ್ನು ನಾಗ ಚೈತನ್ಯಗೆ ಸಮಂತಾ ನೀಡಿದ್ದರೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಇದು ನಿಜವೇ ಆದಲ್ಲಿ ಅದರ ಬೆಲೆ ಕೋಟಿ ರೂಪಾಯಿಗಳಲ್ಲಿ ಆಗಲಿದೆ.