Connect with us

ಕರಾವಳಿ

ತುಳುನಾಡಿನ ದೈವಗಳನ್ನು ವೇದಿಕೆಗಳಲ್ಲಿ ಪ್ರದರ್ಶನ ಕ್ಕಿರುವಂತದಲ್ಲ. ಅದು ತುಳುವರ ಜನಮನದ ಸಂಸ್ಕ್ರತಿ, ಅಚರಣೆ

Published

on

ಮಂಗಳೂರು,ಡಿ(Zoom Karnataka): ಚಾಮರಾಜಪೇಟೆಯಲ್ಲಿ ನ.30ರಂದು ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ದೈವಗಳ ಪಾತ್ರಗಳನ್ನು ಸೃಷ್ಟಿಸಿ ನರ್ತನ ಮಾಡಿರುವುದು ಸಾರ್ವಜನಿಕರ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಅರಾಧಕರು ತುಳುವರು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವೀಡಿಯೋದಲ್ಲಿ ಪಂಜುರ್ಲಿ ದೈವದ ಇಬ್ಬರು ಪಾತ್ರಧಾರಿಗಳು ದರ್ಶನ, ಆವೇಶ, ಕೈ ಭಾಷೆಯ ಅಭಿನಯದ ದೃಶ್ಯಗಳಿವೆ. ಇದಾದ ಬಳಿಕ ವೇಷಧಾರಿಗಳು ಸಚಿವ ಜಮೀರ್ ಅವರ ಕೈಹಿಡಿದು ಮೇಲಕ್ಕೆತ್ತಿ ದೈವ ಅಭಯ ನೀಡುವಂಥ ರೀತಿಯ ದೃಶ್ಯವಿದೆ. ಇದಕ್ಕೆ ದೈವಾರಾಧಕರು ಅಸಮಾಧಾನ  ವ್ಯಕ್ತಪಡಿಸಿದ್ದಾರೆ.   

ಬಾರೀ ಬೇಸರದ ವಿಷಯ ಪದೇ ಪದೇ ನಮ್ಮ ತುಳುನಾಡಿನ ದೈವಗಳನ್ನು  ತುಚ್ಚ ಸ್ವರೂಪಮಾಡಿ ಹುಚ್ಚರಾಗೇ ಮಾಡುತ್ತಿರುವುದು ಅತೀ ಬೇಸರದ ವಿಷಯ. ತುಳುನಾಡು ತೆನ್ಕಾಯಿಯಿಂದ ಬಡಕಾಯಿಡ್ ಮುಟ್ಟ ಸತ್ಯಲೋ ಚಿತ್ತಲೋ ನೆಲೆಯಾಯಿನ ಈ ಮಣ್ಣ್ ಡ್ ಎಂಕುಲೆ ಸತ್ಯ. ಧರ್ಮವನ್ನು ಮಿತ್ತಲೋಕದ ದೇವರು ಕಾಯುದಾದರೆ ,ಕಾಲಕಾಲಕ್ಕೆ ಅಧರ್ಮವನ್ನು  ಧರ್ಮವನ್ನು ಕಾಯುವ  ಶಕ್ತಿಯೇ ್ಈ ಮಣ್ಷಿನ ದೈವಗಳು .

ಪ್ರಕೃತಿರಾಧನೆಯನ್ನು ಮೈಗೂಡಿಸಿಕೊಂಡು ಹಿರಿಯರು, ಕಲ್ಲು ಮಣ್ಣು ಮರ ಬಳ್ಳಿ ಬನ, ಹರಿದು ಸಾಗುವ ನೀರಿನ ಜಲ ತೋಡು ನದಿ ಹಳ್ಳ ಗಳಲ್ಲಿ  ಶಕ್ತಿಪೂಜೆಯನ್ನು ಅರಾಧಿಸಿದವರೇ ನಮ್ಮ ತುಳುನಾಡಿನವರು. ಎಲ್ಲದಕ್ಕೂ ಮಿಗಿಲಾದ ಅಗೋಚರ ಶಕ್ತಿಯೊಂದು ತುಳುನಾಡನ್ನು ರಕ್ಷಿಸುತ್ತದೆ. ಎಲ್ಲಿಯೂ ಪ್ರಳಯ ಭೀತಿ ಬರಲಿ ಈ ಮಣ್ಣನ್ನು ರಕ್ಷಿದುವ ಹೊಣೆ ಇಲ್ಲಿನ ದೈವಗಳಿಗಿದೆಅದೇ ಭೂತರಾಧನೆ  ಈ ದೈವವನ್ನು ಪದೇ ಪದೇ ವೇದಿಕೆಯಲ್ಲಿ ಅವಶ್ಯಕತೆ ಎನಿದೆ. ತುಳುನಾಡಿನ ಪ್ರತಿಯೊಬ್ಬರ  ವಂಶವೃಕ್ಷ ದ ದೈವವೊಂದಿದೆ ಅದೇ ಧರ್ಮದೈವ. ಪ್ರತಿ ಕುಟುಂಬದ ತರವಾಡು ಮನೆತನದಲ್ಲಿ ಈ ದೈವಗಳನ್ನು ಕಾಲಕಾಲಕ್ಕೆ ಅಗಭೋಗ  ನೇಮಪರ್ವಗಳನ್ನು ನೀಡಿದಲ್ಲಿ ಕುಟುಂಬವನ್ನು ರಕ್ಷಣೆ ಮಾಡುತ್ತವೆ. ಮನೆಯ ಯಜಮಾನನಾಗಿ,ಮಾವನಾಗಿ,ತಾಯಿಯಾಗಿ ಮಕ್ಕಳನ್ನು ರಕ್ಷಣೆ ಮಾಡಿದಂತ ಅನುಭವ ಪ್ರತಿ ತುಳುನಾಡಿನವರಿಗೆ ತಾಯಿಯಂತೆ ಆರಾಧಿಸುತ್ತಾರೆ ಅದೇ ಇಲ್ಲಿನ ಮಣ್ಣಿನ ಶಕ್ತಿ. ಅದು ಪ್ರತಿಕುಟುಂಬದ ಅಗುಹೋಗುಗಳನ್ನು ಭವಿಷ್ಯವನ್ನು ನಿರ್ಧರಿಸುವ ಬರತಕ್ಕ ಅಪಾಯವನ್ನು ನಿವಾರಿಸುವ ಅಮೂಲ್ಯ ಶಕ್ತಿ ದೈವಗಳ ಅರಾಧನೆ. ಅಂತಹ ದೈವಗಳನ್ನು ನಮ್ಮವರೇ ಪದೆ ಪದೇ ನಿಂದಿಸುವುದು ವ್ಯಂಗ್ಯಮಾಡುವುದು ಇಲ್ಲ ಸಲ್ಲದ ವೇದಿಕೆಯಲ್ಲಿ ಪ್ರದರ್ಶನವನ್ನು ಮಾಡುವುದು ಇತ್ತೀಚೆಗಿನ ದಿನಗಳಲ್ಲಿ ಯುವಕರು ಈ ಥರ ಮಾಡುತ್ತಿದ್ದಾರೆ. ದೈವದ ನರ್ತಕರು ,ಸೇವಕರು,ಚಾಕರಿಯವರು ಅಯಾಯ  ಸಮುದಾಯದವರು ಅದರ ಕೆಲಸವನ್ನು ಚಾಚೂತಪ್ಪದೇ ಭಕ್ತಿಭಯದಿಂದ ಮಾಡುತ್ತಾರೆ. ಅದರೆ ಏನೋ ಅಗೋಲ್ಲ ಅನ್ನುವವರು ಒಂದಿಬ್ಬರಿಂದ ಮಾತ್ರ ಇಂತಹ ಅನ್ಯಾಯ ಅಗುತ್ತಿದೆ. ಪ್ರದರ್ಶನಕ್ಕೆ ಭೂತಾರಧನೆ ಸಲ್ಲದು. ಅದು ಅಯಾಯ ಮೂಲಸ್ವರೂಪದ ಮೂಲ ಚೌಕಟ್ಟಿನಲ್ಲೆ ಅಗಬೇಕು.  ಹದಿನಾರು ಕಟ್ಟುಪಾಡು ಪ್ರಕಾರ ಪಾಡ್ದನ ,ಮದಿಪು,ಬಿರ್ದಳಿ ಮೂಲಕ ದೈವವನ್ನು ಮಾಯದಿಂದ ಕಾಯಕ್ಕೆ ಬರಮಾಡಿಸುವ ಒಂದು ಶಕ್ತಿ.  ಪ್ರಾಣಿ ಸ್ವರೂಪ, ಮಾನವ ಶಕ್ತಿಗಳು ಕಾಯಬಿಟ್ಡು ಮಾಯ ಸೇರಿ ದೈವಿಕ ಶಕ್ತಿಯಾಗಿ ದೈವಗಳಾಗಿ ನಮ್ಮನ್ನು ರಕ್ಷಣೆ ಮಾಡುತ್ತಿದೆ.  ಅದು ಅಯಾಯ ಕುಟುಂಬ,ಗ್ರಾಮ,ಸೀಮೆಗೆ ಹೊಂದಿ ಅರಾಧನೆ ನಡೆಯುತ್ತದೆ. ಒಬ್ಬ ದೈವ ಪಾತ್ರಿಗೆ ಅವೇಶ ಹೇಗೆ ಬಂತು ಅಂದಾಗ ಇತರರು ಅದು ಸುಳ್ಳು ,ಅವನಿಗೆ ಸೈಕೋ ಅನ್ನಬಹುದು ಇದೇ ಮಾತನ್ನು ಒಂದು ಹೆಣ್ಣು ಹೆರಿಗೆಯ ನೋವನ್ನು ಎಲ್ಲ ಮೂಳೆ ಮುರಿದು ಮೂಗಿನ ತುದಿಯವರೆಗೆ ನೋವ ಯಾವಾ ರೀತಿ ಅನುಭವಿಸಿ ಪ್ರಸವಿಸುತ್ತಾಳೋ ನಂತರ ಜನಿಸಿದ ಮಗು ತನ್ನ ಮಡಿಲೊಮ್ಮೆ ಸೇರಿದಾಗ ಅಗುವ ನೋವನ್ನೆಲ್ಲಾ ಮರೆತು ಅಕೆಗೆ ಅಗುವ ಸ್ವರ್ಗದಂತಹ ಪರಮ ಆನಂದ ಇದು ಅಕೆಗೆ ಗೊತ್ತು ಹೊರತು ಯಾವ ಗಂಡಸರಿಗೂ ಅನುಭವ ಅಗಲಾರದು ಇದುವೇ ದೈವಗಳ ಅರಾಧನೆ. ಹೆರಿಗೆಯ ನೋವಿನಂತಹ ಅನುಭವ ದರುಶನ ಪಾತ್ರಿಗಳಿಗೆ ಇರುತ್ತದೆ ಅದನ್ನು ಯಾರಾದರೂ ಪ್ರಶ್ನಿಸಿದಾಗ ನಿಮಗೆ ಮೈಮೇಲೆ ಬರುವುದು ನಿಜನಾ ಅಂದಾಗ ಅದಕ್ಕೆ ದೈವ ಪಾತ್ರಿಗಳಿಗೆ ಉತ್ತರ ವಿರದು ಎಲ್ಲಾವೂ ನಂಬಿದ ವಿಶ್ವಾಸದ ನಮ್ಮ ದೈವಗಳ ಅನುಗ್ರಹ ಅಂತಾರೆ ಅವೇಶದ ಹೊತ್ತಿನಲ್ಲಿ ನಮಗೆ ಏನಾಯಿತು ಅನ್ನುವುದೇ ಗೊತ್ತಾಗಲ್ಲ.ಎಂಭತ್ತು ತೊಂಬತ್ತರ ಮುದಿಮುದಿ ಹಿರಿಯರು ಕೂಡಾ ದೈವದ ಪಾತ್ರಿಯಾಗಿ, ದೈವ ಕಟ್ಟುವವರು ಕೂಡಾ ಯುವಕರ ಹಾಗೇ ಬೆಳಗ್ಗಿನಿಂದ ತಡರಾತ್ರಿಯವರೆಗೆ ಅಯಾಸವಾಗದೇ ಸೇವೆ ಮಾಡುತ್ತಾರೆ. ಅಂತಹ ಅಮೂಲ್ಯವಾದ ದೈವವನ್ನು ಹಿಂದೇ ಎಲ್ಲೂ ವೇದಿಕೆಯಲ್ಲಿ ತರುವಂತದಲ್ಲ.

ಇದೀಗ ಮೊಬೈಲ್ ಯುಗ ದೈವ ಎದ್ದು ನಿಂತಾಗ ಉತ್ಸವ ನೋಡಲು ಬಂದವರು ಎಷ್ಟೇ ದೊಡ್ಡವನಾದರೂ ಅತನ ಕೈ ಮುಗಿದು ಭಯಭಕ್ತಿಯಿಂದ ನಿಂತಿರುತ್ತಾನೆ ಅದರೆ ಇಂದು ಎಲ್ಲಾವೂ ಕೈ ಮುಗಿದು ದೈವದ ಕಲದಲ್ಲೇ ಮೊಬೈಲ್ ಹಿಡಿದು ನಮ್ಮೂರ ದೈವ ಅಂತಾ ಟ್ಯಾಗ್  ಹಾಕಿ ಇನ್ಸಟಂ ,ಫೇಸ್ಬುಕ್, ಸ್ಟೇಟಸ್ ಹಾಕುದರಲ್ಲೆ ಮಗ್ನನಾಗುವವರೇ ಹೆಚ್ಚಾದ ಕಾರಣ ದೈವವನ್ನು ತಾತ್ಸರ ಭಾವನೆಯಿಂದ ನೋಡುವಂತಾಗಿದೆ. ದೈವಗಳ ಮುಖ ಚಿತ್ರಗಳನ್ನು  3Dಮಾಡಿ ಬೈಕ್ ಗಳ ಹಿಂಬದಿ ಅಂಟಿಸುವುದು, ನಿಮ್ಮ ವಾಹನಕ್ಕೆ ದೈವಗಳು ಸದಾ ನೆನೆದು ಬೂಲ್ಯವನ್ನು ಎದ್ರು ಇಡಿ ಭದ್ರವಾಗಿ ಇಡಿ,ಅದು  ಕೆಸರು ನೀರು,ಕೊಳಚೆ ನೀರು ತಾಗಿಸುವಲ್ಲಿ  ಅಂಟಿಸಿ ಬಿಟ್ಟು ನಾಯಿ ಸು ಮಾಡಿದಾಗ ತುಂಬಾನೇ ಬೇಜರು ಅನಿಸುತ್ತೆ.  ದೈವಗಳ  ಇತಿಹಾಸ ಕಥೆಯನ್ನು ಎಂದೂ ತಿರುಚಬೇಡಿ ,ಅಯಾಯ ದೈವಗಳಕ್ಷೇತ್ರಗಳ  ಇತಿಹಾಸ ಬಲ್ಲವರಿಂದ ,ಪಾಡ್ದನಗಳಿಂದ ಅರಿತುಕೊಳ್ಳಿ. ದೇವರಿಗೆ  ದೈವವನ್ನೂ ಹೋಲಿಕೆ ಬೇಡ.ಶಿವ,ವಿಷ್ಣು ಬ್ರಹ್ಮ ಅವತಾರ ಎಂದೆಲ್ಲ ವಿಷಯ ಬಿಟ್ಟು ,ದೈವಗಳು ಈ ತುಳುನಾಡಿನ ಶಕ್ತಿ.ಜನಮನದ ಸಂಸ್ಕೃತಿ, ಸಂಪ್ರದಾಯ, ಕಲೆ,ಸಾಹಿತ್ಯ,ಶಿಕ್ಷಣ,ನ್ಯಾಯ,ಬದುಕು ಇವೆಲ್ಲದರ ಒಂದು ಕೂಟವೇ ದೈವರಾಧನೆ.ಇದನ್ನು ನಮಗೆ ಬೇಕಾದ ಕಡೆ ವಿಕೃತಿ ಮಾಡುವುದು ನಟನೆ ಮಾಡುವುದು,ರಂಗವೇದಿಕೆಯಲ್ಲಿ ಪ್ರದರ್ಶಿಸುವುದು ತಪ್ಪು. ಸಂಸ್ಕಾರಯುತವಾದ ಕುಟುಂಬದ   ನಮ್ಮ ಮನೆಯ ಮುದ್ದಿನ ಮಗಳನ್ನು ಎಲ್ಲೆಲ್ಲೂ  ಕೆಟ್ಟ ವೇದಿಕೆಯಲ್ಲಿ ಕುಣಿಸಲು ಹೆತ್ತ ಹೃದಯಕ್ಕೆ ಎಂದೂ ಮನಸು ಬರದು ಸರಿ ತಾನೇ. (ದಡ್ಡಂಗಡಿ)


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading