ಮಂಗಳೂರು ಅ.31 Zoom Karnataka): ಕಾಸರಗೋಡು ಕನ್ನಡ ಗ್ರಾಮದಲ್ಲಿ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಚಪ್ಪರ ಮುಹೂರ್ತ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ,ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ,ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗ ಪ್ರಾಯೋಜಕತ್ವ ಕಾಸರಗೋಡು ಕನ್ನಡ ಗ್ರಾಮದಲ್ಲಿ 2024 ನವೆಂಬರ್ 10 ಆದಿತ್ಯವಾರರಂದು ಬೆಳಿಗ್ಗೆ ಗಂಟೆ 9.00 ವರೆಗೆ ಒಂದು ದಿನದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ 2024 ಇದರ ಪೂರ್ವಬಾವಿ ಸಿದ್ಧತೆಗಳು ಭರದಿಂದ ನಡೆಯುತ್ತಿದೆ
ಈ ಐತಿಹಾಸಿಕ ಮಕ್ಕಳ ಸಮ್ಮೇಳನ ಕೇರಳ ಕರ್ನಾಟಕ “ಮಕ್ಕಳ ಉತ್ಸವವನ್ನಾಗಿ ” ಸಂಬ್ರಮಿಸಲಾಗುವುದು. ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಹೇಳಿದ್ದಾರೆ
ಸಮ್ಮೇಳನದಂದು ಬೆಳಿಗ್ಗೆ ಮೀಪುಗುರಿ ಎಲ್ ಪಿ ಶಾಲೆಯ ಪರಿಸರದ ಮೀಪುಗುರಿ ಬಸ್ ಸ್ಟಾಪ್ ಜಂಕ್ಷನ್ ನಿಂದ ಕನ್ನಡ ಗ್ರಾಮಕ್ಕೆ ಭವ್ಯ ಸಂಸ್ಕೃತಿಕ ಮೆರವಣಿಗೆಯನ್ನು ಕೊಂಡೊಯ್ಯಲಾಗುವುದು ಕೇರಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1000 ಪ್ರತಿನಿಧಿಗಳು ಪಾಲ್ಗೊಳಲಿದ್ದು ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಿದ್ಧತೆ ನಡೆಯುತ್ತಿದೆ. ಕಾಸರಗೋಡು ಪ್ರದೇಶದ ಎಲ್ಲಾ ಸಂಘ ಸಂಸ್ಥೆಗಳು ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಹೆತ್ತವರು, ಪೋಷಕರು ,ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ .
ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಚಪ್ಪರ ಮುಹೂರ್ತವನ್ನು ಧಾರ್ಮಿಕ , ಸಾಂಸ್ಕೃತಿಕ,ಕನ್ನಡ ಪರ ಹೋರಾಟಗಾರ ಡಾ.ವೆಂಕಟರಮಣ ಹೊಳ್ಳ ಕಾಸರಗೋಡು ಉದ್ಘಾಟಿಸಿದರು .ಕಾಸರಗೋಡು ನಗರ ಸಭೆಯ ಕೌನ್ಸಿಲರ್ ಶ್ರೀಮತಿ ಶಾರದಾ ಜೆ. ಪಿ ನಗರ ಅಧ್ಯಕ್ಷತೆ ವಹಿಸಿದರು.ಹೋಟೆಲ್ ಉಡುಪಿ ಗಾರ್ಡನ್ ನ ಮೂಲಕ ರಾಮಪ್ರಸಾದ್ ಕಾಸರಗೋಡು ,ಚಪ್ಪರ ಕಾಂಟ್ರಾಕ್ಟ್ ರ್ ಲವ.ಕೆ ಮೀಪುಗುರಿ,ಜಯಾನಂದ ಕುಮಾರ್ ಅನಂತಪುರ, ರಘು.ಕೆ ಮೀಪುಗುರಿ,ದಿವಾಕರ. ಪಿ. ಅಶೋಕ್ ನಗರ , ಕೆ ಸಿ.ಎನ್ ಚೆನಲ್ ನ ನಿರ್ದೇಶಕ ಪುರುಷೋತ್ತಮ ಎಂ ನಾಯಕ ,ಮಾಜಿ.ಕೌನ್ಸಿಲರ್ ಶಂಕರ . ಕೆ,ಸಾಹಿತ್ಯ ಪತ್ರಕರ್ತ ರಾಧಾಕೃಷ್ಣ. ಕೆ.ಉಲ್ಲಿಯತಡ್ಕ, ಜಗನ್ನಾಥ. ಶೆಟ್ಟಿ. ಪಿ .ಕೆ, ಕುಶಲ ಕುಮಾರ. ಕೆ ಕನ್ನಡ ಗ್ರಾಮ, ರಾಷ್ಟ್ರ ಪತಿ ಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಶತಿಷ್ . ಕೆ .ಕೂಡ್ಲು,ಕಾವ್ಯ ಕುಶಲ ,ರಾಧಾ ಶಿವರಾಮ,ಸವಿತಾ ಕಿಶೋರ್, ಕೃಪಾ,ಅನುಷ ಉಪಸ್ಥಿತರಿದ್ದರು. ಕರ್ಣಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ ಪ್ರಸ್ತವನ ಗೈದರು. ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ. ಕೂಡ್ಲು ಧನ್ಯವಾದವಿತ್ತರು.