Jun 11 (ZoomKarnataka) : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡ ರವರನ್ನು ಇಂದು ರಾಜ್ಯ ಕೇಂದ್ರ ಕಚೇರಿಯಲ್ಲಿ ‘ಅವನಿ’ ಕಿರು ಚಿತ್ರತಂಡದ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ನೀಡಿ 58 ನೇ ಹುಟ್ಟುಹಬ್ಬದ ಶುಭಾಶಯದೊಂದಿಗೆ ಸನ್ಮಾನಿಸಲಾಯಿತು.
ಅವನಿ ಕಿರು ಚಿತ್ರವು ಶಶಿ ಬೆಳ್ಳಾಯರು ಅವರ ಕಥೆ, ಸಾಹಿತ್ಯ,ನಿರ್ದೇಶನದಲ್ಲಿ ಮೂಡಿಬರಲಿದ್ದು ಎಸ್.ಆರ್.ಎಸ್ ಪ್ರೊಡಕ್ಷನ್ ಹೌಸಿನ ಹಾಗೂ ಧಾರವಾಹಿಯ ನಿರ್ವಹಣೆ, ಕಾರ್ಯಕಾರಿ ನಿರ್ಮಾಪಕರುಗಳಾದ ಸುಜಿತ್ ಕುಮಾರ್ ಫರಂಗಿಪೇಟೆ, ಲಯನ್ ಅನಿಲ್ ದಾಸ್ ಮಂಗಳೂರು, ದಿನೇಶ್ ಸುವರ್ಣ ಪಡುಪಣಂಬೂರು ಇವರ ನೇತೃತ್ವದಲ್ಲಿ ಮೂಡಿಬಂದ ಕನ್ನಡ ಮೆಗಾ ಧಾರಾವಾಹಿ ‘ ಅವನಿ’ ಕಿರುಚಿತ್ರ ದ ಪೋಸ್ಟರನ್ನು ಟಿ. ಎ ನಾರಾಯಣ ಗೌಡರು ಬಿಡುಗಡೆ ಯನ್ನು ಮಾಡಿ ಶುಭ ಹಾರೈಸಿ ಮಾತನಾಡಿದರು.
ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಾಗೂ ಅವನಿ ಧಾರಾವಾಹಿಯ ನಿರ್ಮಾಪಕ ರಲ್ಲಿ ಓರ್ವರಾದ ಲಯನ್ ಅನಿಲ್ ದಾಸ್ ಮಂಗಳೂರು,ಸುಜಿತ್ ಕುಮಾರ್ ಫರಂಗಿಪೇಟೆ ದಿನೇಶ್ ಸುವರ್ಣ ಪಡುಪಣಂಬೂರು ಕ.ರಾ.ವೇ ಜಿಲ್ಲಾ ಉಪಾಧ್ಯಕ್ಷರಾದ ಪ್ರಸಾದ್ ಡಿಸೋಜ, ಕಾರ್ಯದರ್ಶಿ ಕಿರಣ್ ಅಟ್ಟಲೂರ್, ಅವನಿ ಧಾರವಾಹಿಯ ಪ್ರಮುಖ ನಟರಲ್ಲೊಬ್ಬರಾದ ಸಯ್ಯದ್ ವಹಿದ್ ಖಾನ್ ಬೆಂಗಳೂರು ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
ಕರ್ನಾಟಕ ದಾದ್ಯಂತ ಜನಮೆಚ್ಚಿನ ಅಭಿಮತ ಕೇಬಲ್ ನೆಟ್ ವರ್ಕ್ ಚಾನೆಲ್ನಲ್ಲಿ ಪ್ರಸಾರ ವಾಗುವ ‘ಅವನಿ’ ಕನ್ನಡ ಮೆಗಾ ಧಾರಾವಾಹಿಯು ಉತ್ತಮ ಕಥಾ ವಸ್ತುವನ್ನು ಹೊಂದಿದ್ದು ಒಂದು ಪ್ರಾಮಾಣಿಕ,ಗುಣವಂತೆ ,ಶಿಸ್ತಿನ ಹುಡುಗಿಯ ಸುತ್ತ ಹೆಣೆದಿರುವ ಕಥೆಯಾಗಿದ್ದು,ಬದುಕಿನ ವಸ್ತು ಸ್ಥಿತಿಯನ್ನು ಸಮಾಜದ ಮುಂದೆ ಹಿಡಿದಿರುವ ನಿರ್ದೇಶಕರ ಪ್ರಯತ್ನ ಸಪಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.