ಮಂಗಳೂರು,ನ 04(Zoom Karnataka): ರಾಜ್ಯ ಸರ್ಕಾರ ಕರಾವಳಿಯ ಬಿಜೆಪಿ ಶಾಸಕರಿಗೆ ಆರು ತಿಂಗಳಲ್ಲಿ ಅನುದಾನ ನೀಡಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕಾಮತ್, ಕ್ಷೇತ್ರದ ಅಭಿವೃದ್ದಿಗೋಸ್ಕರ ಒಂದು ರೂಪಾಯಿ ಅನುದಾನವನ್ನೂ ಕೊಟ್ಟಿಲ್ಲ, ಕರಾವಳಿಯ ಬಿಜೆಪಿ ಶಾಸಕರು ತೊಂದರೆಗೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಅನುದಾನ ನೀಡುವಂತೆ ಮುಂದಿನ ವಾರ ಮತ್ತೊಮ್ಮೆ ಹೋಗಿ ಮನವಿ ಮಾಡುವುದಾಗಿ ಹೇಳಿರುವ ವೇದವ್ಯಾಸ ಕಾಮತ್, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ನಾವೇ ತಂದಿರುವಂತಹ ಯೋಜನೆಯ ಹಣ ಬರುವುದು ನಿಂತಿದೆ ಎಂದು ಆರೋಪ ಮಾಡಿರುವ ಶಾಸಕ ವೇದವ್ಯಾಸ ಕಾಮತ್, ಜನರು ದಿನ ನಿತ್ಯ ಬೆಳಗ್ಗೆ ಮನೆಯ ಬಳಿ ಬಂದು ನಿಲ್ಲುತ್ತಾರೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಆದೇಶ ಆಗಿರುವ ಕಾಮಗಾರಿಯ ಹಣವನ್ನು ಕೊಡಿ ಎಂದು ಒತ್ತಾಯಿಸಿದ್ದಾರೆ.