Connect with us

ತಾಜಾ ಸುದ್ದಿ

ಹುಲಿ ಉಗುರು ಕೇಸ್: ಚಿತ್ರ ನಟರ ನಿವಾಸದ ಮೇಲೆ ಅರಣ್ಯ ಅಧಿಕಾರಿಗಳ ದಾಳಿ

Published

on

ಬೆಂಗಳೂರು,ಅ. 26 (Zoom Karnataka): ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದರು ಎನ್ನುವ ಕಾರಣಕ್ಕಾಗಿ ವರ್ತೂರ್ ಸಂತೋಷ್ ಮೊನ್ನೆಯಷ್ಟೇ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ನಟ ದರ್ಶನ್ , ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಅವರಿಗೂ ಹುಲಿ ಉಗುರಿನ ಸಂಕಷ್ಟ ಎದುರಾಗಿದೆ. ದರ್ಶನ್‌ ನಿವಾಸ ಆರ್‌ಆರ್ ನಗರಕ್ಕೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.

ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋ ವೈರಲ್ ಆಗಿತ್ತು. ಈ ಹಿನ್ನಲೆ ನಟನ ಮನೆಗೆ ಮೂವರು ಅಧಿಕಾರಿಗಳಿಂದ ಹುಲಿ ಉಗುರಿಗಾಗಿ ಭೇಟಿ ನೀಡಿದ್ದಾರೆ. ಸದ್ಯ ದರ್ಶನ್ ಮೈಸೂರಿನಲ್ಲಿ ಇದ್ದಾರೆ ಎಂದು ತಿಳಿದು ಬಂದಿದ್ದು, ಅರಣ್ಯಾಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ರಾಜ್ಯಸಭಾ ಸದಸ್ಯ ಜಗ್ಗೇಶ್ ನಿವಾಸಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ. ಸದ್ಯ ಜಗ್ಗೇಶ್ ಹುಟ್ಟುರಿನಲ್ಲಿದ್ದಾರೆ. ಈ ಹಿನ್ನೆಲೆ ಅವರ ಪತ್ನಿ ಪರಿಮಳರಿಗೆ ನೋಟೀಸ್ ಕೊಡುವ ಸಾಧ್ಯತೆಯಿದೆ. ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೆ ಅರಣ್ಯ ಅಧಿಕಾರಿಗಳ ದಾಳಿ ನಡೆಸಿದ್ದಾರೆ.

ಇನ್ನೂ ಹುಲಿಯುಗುರಿನ ಪೆಂಡೆಂಟ್ ಮನೆಯಲ್ಲಿದ್ದರೆ ವಶಕ್ಕೆ ಪಡೆಯುತ್ತಾರೆ. ಒಂದು ವೇಳೆ ಮನೆಯಲ್ಲಿ ಪೆಂಡೆಂಟ್ ಇಲ್ಲ ಅಂದ್ರೆ ಆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading