ಸಾಸಿವೆಯು ಬ್ರಾಸೀಕಾ ಮತ್ತು ಸಿನ್ಯಾಪಿಸ್ ಪಂಗಡಗಳಲ್ಲಿನ ಒಂದು ಸಸ್ಯ ಜಾತಿ. ಸಾಸಿವೆಯನ್ನು ಅಡುಗೆ ಮನೆಯಲ್ಲಿ ಒಗ್ಗರಣೆಗೆ ಬಳಸುವ ಮೊಟ್ಟಮೊದಲ ಆಹಾರ ಪದಾರ್ಥ. ಯಾವುದೇ ಶುಭ ಕಾರ್ಯ ಮಾಡುವ ಸಂದರ್ಭದಲ್ಲಿ ಮೊದಲಿಗೆ ಗಣೇಶನಿಗೆ ಪೂಜೆ ಸಲ್ಲಿಸುವ ಹಾಗೆ ಅಡುಗೆ ತಯಾರಿಯಲ್ಲಿ ಮೊಟ್ಟ ಮೊದಲ ಸ್ಥಾನ ಸಾಸಿವೆಗೆ ಎಂದು ಹೇಳಬಹುದು.
ಕೇವಲ ಅಡುಗೆ ತಯಾರಿಯ ಒಗ್ಗರಣೆಯಲ್ಲಿ ಚಿಟಪಟ ಎಂದು ಶಬ್ದ ಬರಲಿ ಎಂದು ಉಪಯೋಗಿಸುವ ಸಾಸಿವೆ ಕಾಳುಗಳಲ್ಲಿ ಕಂಡು ಬರುವ ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.
- ಕಣ್ಣಿನ ರೆಪ್ಪೆಗಳ ಮೇಲೆ ಆಗುವ ಕುರು/ಕಣ್ಣ ಚುಟ್ಟಲಿ ಆದಾಗ ಸಾಸಿವೆ ಪುಡಿಯನ್ನು ತುಪ್ಪದಲ್ಲಿ ಪೇಸ್ಟ್ ಮಾಡಿ ಹಚ್ಚಬೇಕು.
- ಸಾಸಿವೆಯಲ್ಲಿ ಬೋಫ್ಲಾವಿನ್ ಎಂಬ ವಿಟಮಿನ್ ಇರುತ್ತದೆ, ಇದು ಮೈಗ್ರೇನ್ ಅಪಾಯವನ್ನು ಕಡಿಮೆ ಮಾಡುತ್ತದೆ.
- ಹಲ್ಲು ನೋವಿಗೆ ಸಾಸಿವೆ ಕಾಳು ಅಗಿದು ಉಗುಳ ಬೇಕು , ಅಥವಾ ಸಾಸಿವೆ ಪುಡಿ ನೀರಿನಲ್ಲಿ ಬೆರೆಸಿ ಮುಕ್ಕಳಿಸಬಹುದು.
- ಒಂದು ಅಧ್ಯಯನದ ಪ್ರಕಾರ, ಸಿನಾಪೈನ್ ಎಂಬ ಸಾವಯವ ಸಂಯುಕ್ತವು ಸಾಸಿವೆ ಮಧ್ಯದಲ್ಲಿ ಕಂಡುಬರುತ್ತದೆ, ಇದು ಸ್ನಾಯುಗಳ ಸಕ್ರಿಯಗೊಳಿಸುವಿಕೆ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸ್ಥಿತಿಯ ವಿರುದ್ಧ ಕಾರ್ಯವನ್ನು ತಡೆಯಲು ಸಹಾಯ ಮಾಡುತ್ತದೆ.
- ಜ್ವರ ಕಡಿಮೆಯಾಗದಿದ್ದರೆ ಸಾಸಿವೆಯನ್ನು ಜಗಿದು ತಿನ್ನಬೇಕು, ಇದರಿಂದ ದೇಹ ಬೇಗನೆ ಬೆವತು, ಜ್ವರವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ, ಇದು ದೇಹದಲ್ಲಿರುವ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುತ್ತದೆ.
- ಕಪ್ಪು ಸಾಸಿವೆ ಕಾಳುಗಳು ಹೈಪೊಗ್ಲಿಸಿಮಿಕ್ ಮತ್ತು ಆಂಟಿಡಯಾಬಿಟಿಕ್ ಗುಣಲಕ್ಷಣಗಳನ್ನು ಹೊಂದಿವೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಪ್ಪು ಸಾಸಿವೆ ಬೀಜಗಳು ಟೈಪ್ 2 ಡಯಾಬಿಟಿಸ್ ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಕೆಲಸ ಮಾಡುತ್ತದೆ.
- ನೆಗಡಿ ಇದ್ದರೆ ಈ ಕಾಳುಗಳನ್ನು ಜಗಿದು ತಿನ್ನಿ, ಎದೆಯಲ್ಲಿ ಕಫದಿಂದ ಉಂಟಾಗುವ ದಟ್ಟಣೆಯನ್ನೂ ಕೂಡ ಇದು ಕಡಿಮೆ ಮಾಡುತ್ತದೆ.
- ಸಾಸಿವೆ ಕಾಳಿನಿಂದ ದದ್ದಿನಿಂದಾಗುವ ತುರಿಕೆ ಗುಣವಾಗುತ್ತದೆ, ಸಾಸಿವೆಯನ್ನು ನೀರಿನಲ್ಲಿ ಕುದಿಸಿ ನಂತರ ಅದನ್ನು ಜಗಿದು ತಿನ್ನಬೇಕು. ನೀವು ಸಾಸಿವೆಯ ಪೇಸ್ಟ್ ತಯಾರಿಸಿ, ಅಂದನ್ನು ತುರಿಕೆ ಇರುವ ಜಾಗಕ್ಕೆ ಅನ್ವಯಿಸಬಹುದು.
- ಸಾಸಿವೆ ಬೀಜಗಳು ಜೀರ್ಣಕ್ರಿಯೆ ಉತ್ತಮಗೊಳಿಸಲು ಸಹಾಯ ಮಾಡುತ್ತವೆ ಮತ್ತು ಚಯಾಪಚಯ ಕ್ರಿಯೆಯ ದರವನ್ನು ಉತ್ತೇಜಿಸುತ್ತವೆ, ಇದು ಮಲಬದ್ಧತೆ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ.
- ಚೇಳು ಕಚ್ಚಿದಾಗ ಸಾಸಿವೆ ಕಾಳು ಹತ್ತಿ ಗಿಡದ ಎಲೆಗಳನ್ನು ಅರೆದು ಲೇಪಿಸಬೇಕು. ಹಿಮ್ಮಡಿ ನೋವಿಗೆ ಸಾಸಿವೆ ಅರೆದು ಕರ್ಪುರ ಸೇರಿಸಿ ಲೇಪಿಸಬಹುದು.