ಹಾವೇರಿ ,07(Zoom Karnataka): ಶಕ್ತಿ ಯೋಜನೆ (Shakthi Scheme)ಯಡಿ ಹೆಣ್ಮಕ್ಕಳಿಗೆ ಉಚಿತ ಪ್ರಯಾಣ(Free Travel) ಕ್ಕೆ ಅವಕಾಶ ನೀಡಿದ್ದೇ ತಡ, ಮನೆಯಿಂದ ಹೊರಗಡೆ ಬರೋ ಹೆಣ್ಣುಮಕ್ಕಳ(Ladies) ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಬಹುತೇಕ ಪ್ರವಾಸಿ ತಾಣಗಳು ಮಹಿಳೆಯರಿಂದಲೇ ತುಂಬಿ ತುಳುಕುತ್ತಿದೆ.
ಅದೆಲ್ಲಾ ಇರ್ಲಿ ಬಿಡಿ. ಇದೀಗ ಕೋತಿಗಳು ಕೂಡ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳೋಕೆ ಮುಂದಾದಂತೆ ಕಾಣ್ತಿದೆ. ಯಾಕಂದ್ರೆ ಹಾವೇರಿಯಲ್ಲೊಂದು ಕೋತಿ(Monkey) ಕೆಎಸ್ ಆರ್ ಟಿಸಿ(KSRTC) ಬಸ್ ನಲ್ಲಿ ಸುಮಾರು 30 ಕಿ.ಮೀ ಪ್ರಯಾಣ ಮಾಡಿದೆ.. ಹಾವೇರಿಯಿಂದ – ಹಿರೇಕೆರೂರವರೆಗೂ ಮಂಗ ಬಸ್ ನ ಸೀಟಿನಲ್ಲಿ ಕೂತು ಮನುಷ್ಯರಂತೆ ಪ್ರಯಾಣಿಸಿದೆ.ಬಸ್ ಫುಲ್ ಜನರಿದ್ದರೂ ಮಂಗ ಯಾವುದೇ ಭಯವಿಲ್ಲದೆ ಪ್ರಯಾಣ ಮಾಡಿದೆ. ಬಸ್ ನಲ್ಲಿ ಮಂಗನ ಪ್ರಯಾಣದ ದೃಶ್ಯಕಂಡು ಜನರು ಫುಲ್ ಖುಷ್ ಆಗಿದ್ದಾರೆ. ಶಾಲಾ ಮಕ್ಕಳು ಕೋತಿಗೆ ಬಸ್ ನಲ್ಲಿ ಸೀಟು ಬಿಟ್ಟುಕೊಟ್ಟು ಬಾಳೆ ಹಣ್ಣು, ಬಿಸ್ಕೇಟ್ ನೀಡಿ ಮಂಗನ ಜರ್ನಿಗೆ ಶುಭ ಹಾರೈಸಿದ್ದಾರೆ. ಸದ್ಯ ಮಂಗನ ಬಸ್ ಜರ್ನಿಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಪ್ರಯಾಣಕ್ಕೆ ಸರ್ಕಾರಿ ಬಸ್ ಗಳನ್ನೇ ಬಳಸಿ ಅನ್ನೋ ಸಂದೇಶವನ್ನು ಕೋತಿ ನೀಡಿದಂತಿದೆ.