ಮುಂಬೈ: ಇತ್ತೀಚಿಗಿನ ಸಂದರ್ಶನವೊಂದರಲ್ಲಿ ನಟಿ ಇಶಾ ಗುಪ್ತಾ ತಮ್ಮ ಸಿನಿಮಾ ಜೀವನದಲ್ಲಿ ಎದುರಿಸಿದ ಆಘಾತಕಾರಿ ಕಾಸ್ಟಿಂಗ್ ಕೌಚ್ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ.
ಚಿತ್ರವೊಂದು ಹೆಚ್ಚೂ ಕಡಿಮೆ ಅರ್ಧಪಾಲು ಶೂಟಿಂಗ್ ಮುಗಿಸಿತ್ತು. ಈ ಹಂತದಲ್ಲಿ ಚಿತ್ರ ನಿರ್ಮಾಣ ಮಾಡಿದ ವ್ಯಕ್ತಿ ನನ್ನೊಂದಿಗೆ ಸೆಕ್ಸ್ ಬಯಕೆ ವ್ಯಕ್ತಪಡಿಸಿದ್ದ ಎಂದು ಇಶಾ ಹೇಳಿದ್ದಾರೆ.
ನಾನು ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದೆ. ಈ ಹಂತದಲ್ಲಿ ಬಂದ ಚಿತ್ರದ ಸಹ ನಿರ್ಮಾಪಕ, ನಿರ್ದೇಶಕರಿಗೆ ನಾನು ಚಿತ್ರದಲ್ಲಿ ಇರೋದು ಇಷ್ಟವಿಲ್ಲ ಎಂದಿದ್ದ. ಅದಾದ ಮೇಲೆ ಸೆಟ್‌ನಲ್ಲಿದ್ದು ನಾನೇನು ಮಾಡಲಿ. ಕೆಲವೊಂದು ನಿರ್ಮಾಪಕರು ಇದೇ ಕಾರಣಕ್ಕಾಗಿ ನನಗೆ ಸಿನಿಮಾ ಆಫರ್ ಮಾಡುತ್ತಿರಲಿಲ್ಲ ಎಂದಿದ್ದಾರೆ.