Connect with us

ರಾಷ್ಟ್ರ ಸುದ್ದಿ

ಭರ್ಜರಿ ಮಳೆಗೆ ತತ್ತರಿಸಿದ ಹಿಮಾಚಲ ಪ್ರದೇಶ; ಕೇದಾರನಾಥದಲ್ಲಿ ಸಿಲುಕಿದ ಕನ್ನಡಿಗರು

Published

on

ಉತ್ತರ ಭಾರತದಲ್ಲಿ ಮಳೆರಾಯನ ಅಟ್ಟಹಾಸ ಜೋರಾಗಿದೆ. ಮೇಘರಾಜನ ಮೊರೆತಕ್ಕೆ ಧರೆಯೇ ಕುಸಿಯುತ್ತಿದೆ. ನದಿಗಳ ಆರ್ಭಟಕ್ಕೆ ಅದೆಷ್ಟೋ ಮನೆಗಳು ಜಲಾವೃತವಾಗಿವೆ. ಪ್ರವಾಹದ ಹೊಡೆತಕ್ಕೆ ಸಿಲುಕಿ ಅದೆಷ್ಟೋ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ಮಠಗಳನ್ನ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಎಡೆಬಿಡದೇ ಸುರಿಯುತ್ತಿರೋ ಮಳೆಯಿಂದ ನದಿಗಳ ಭೋರ್ಗರೆತ ಜೋರಾಗಿದೆ.
ಪ್ರವಾಹ.. ಪ್ರತಾಪ.. ಪರಿಸ್ಥಿತಿ ಅಲ್ಲೋಲ-ಕಲ್ಲೋಲ!

ಇನ್ನೂ, ಭಾರೀ ಮಳೆಯಿಂದ ಗುಡ್ಡ ಪ್ರದೇಶದಿಂದ ಹರಿದು ಬಂದ ನೀರು ಮನೆಗಳಿಗೆ ನುಗ್ಗಿದೆ. ಬಾಲ ಕಣಿವೆಯ ಮಂಜಿಯಾಲ್ ಪ್ರದೇಶದಲ್ಲಿ ಘಟನೆ ದಿಢೀರ್ ಪ್ರವಾಹದಿಂದ ರಭಸವಾಗಿ ಬಂದ ನೀರಿನಲ್ಲಿ ಮನೆಗಳು ಕೊಚ್ಚಿಕೊಂಡು ಹೋಗಿವೆ. ಇನ್ನೂ ಅಬ್ಬರಿಸಿ ಬೊಬ್ಬಿರಿದು ವರುಣದೇವನ ಅಬ್ಬರಕ್ಕೆ ರಸ್ತೆಗಳಲ್ಲಿ ಕೊಚ್ಚಿಹೋಗಿದ್ದು ರಸ್ತೆಯೆಲ್ಲಾ ಮಣ್ಣಿನಿಂದ ಆವೃತವಾಗಿದೆ.. ಈ ಮಣ್ಣಿನಲ್ಲಿ ಬಸ್​​ ಒಂದು ಸಿಕ್ಕಿಬಿದ್ದಿತ್ತು. ಅಲ್ಲದೇ ಅಬ್ಬರಿಸುತ್ತಿರುವ ಮಳೆಗೆ ಗುಡ್ಡ, ಬೆಟ್ಟಗಳಲ್ಲಿ ಮರ-ಗಿಡಗಳು, ಕಲ್ಲು-ಬಂಡೆಗಳು ಮಳೆ ನೀರಿನಲ್ಲಿ ತೇಲಿ ಹೋಗುತ್ತಿವೆ.
ರಸ್ತೆಗಳು ಮಾಯ.. ತೇಲಿದ ಗಿಡ-ಮರ, ಕಲ್ಲು-ಬಂಡೆಗಳು!

ಹಿಮಾಚಲ ಪ್ರದೇಶದಲ್ಲಿ ಜಲಾಸುರನ ಅಟ್ಟಹಾಸಕ್ಕೆ ಈಗಾಗಲೇ 55 ಮಂದಿ ತಮ್ಮ ಜೀವವನ್ನೇ ಕಳೆದು ಕೊಂಡಿದ್ದಾರೆ.. ಇನ್ನ ಕೆಲವರು ತಮ್ಮ ಜೀವವನ್ನ ಕೈಯಲ್ಲಿಡಿದುಕೊಂಡು ಜೀವನ ಸಾಗಿಸ್ತಿದ್ದಾರೆ. ಅಲ್ಲದೇ ವರುಣ ದೇವ ಸೃಷ್ಟಿಸಿದ ಅವಾಂತರಕ್ಕೆ ಸಾಕಷ್ಟು ಆಸ್ತಿ-ಪಾಸ್ತಿಗಳು ಹಾನಿಯಾಗಿದ್ದು, ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಯಾವಾಗ ನಾವು ವರುಣನ ವಿಕೋಪಕ್ಕೆ ತುತ್ತಾಗ್ತಿವೋ, ನೀರಲ್ಲಿ ಕೊಚ್ಚೋಗ್ತಿವೋ ಅಂತ ಭಯಭೀತರಾಗಿದ್ದಾರೆ. ನೆರೆ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡವರನ್ನ ರಕ್ಷಿಸಲು ರಕ್ಷಣಾ ಪಡೆಗಳು ಮುಂದಾಗಿವೆ. ಮಕ್ಕಳು, ವೃದ್ಧರನ್ನ ತಮ್ಮ ಭುಜದ ಮೇಲೆ ಹೊತ್ತು ಸ್ಥಳಾಂತರ ಮಾಡ್ತಿದ್ದಾರೆ. ಒಂದು ದಡದಿಂದ ಮತ್ತೊಂದು ದಡಕ್ಕೆ ಹಗ್ಗದ ಮೂಲಕ ಜನರನ್ನ ಕರೆತರಲಾಗ್ತಿದೆ.
ಉತ್ತರಾಖಂಡ್‌ನಲ್ಲಿ ನದಿಗಳ ಆರ್ಭಟ.. ಜನರಿಗೆ ಸಂಕಷ್ಟ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಮೇಘಸ್ಪೋಟವೇ ಸಂಭವಿಸಿಬಿಟ್ಟಿದೆ. ನಯ್ನಿ ಗ್ರಾಮದ ಬಳಿ ನದಿಗಳ ಆರ್ಭಟ ಜೋರಾಗಿದೆ. ಕಂಡ ಕಂಡ ಕಡೆ ಮಳೆ ನೀರು ಕೊಚ್ಚಿ ಹರೀತಿದೆ. ಅಪಯಾದಲ್ಲಿ ಸಿಲುಕಿದ್ದ ನಯ್ನಿ ಗ್ರಾಮಸ್ಥರನ್ನ ರಕ್ಷಣ ಪಡೆ ಹಾಗೂ ಚಮೋಲಿ ಜಿಲ್ಲೆ ಪೊಲೀಸರು ತಮ್ಮ ಪ್ರಣಾವನ್ನ ಪಣಕ್ಕಿಟ್ಟು ರಕ್ಷಣೆ ಮಾಡಿದ್ದಾರೆ. ಉಕ್ಕಿ ಹರಿಯುತ್ತಿರುವ ನದಿ ಮಧ್ಯೆ ಹಗ್ಗದ ಸಹಾಯದಿಂದ ಗ್ರಾಮಸ್ಥರನ್ನ ರಕ್ಷಿಸಿದ್ದಾರೆ. ಇನ್ನೂ ಕೇದಾರನಾಥ ಪ್ರವಾಸಕ್ಕೆ ಅಂತ ತೆರಳಿದ್ದ ಕನ್ನಡಿಗರು, ಉತ್ತರಾಖಂಡದ ಕೇದಾರದ ಬಳಿ ಸಿಲುಕಿ ಪರದಾಡ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ 40 ಜನರ ತಂಡದ ಜೊತೆ ಚಿತ್ರದುರ್ಗದ ಮಹಿಳೆಯರು ಕೂಡ ಕೇದಾರನಾಥನ ದರ್ಶನಕ್ಕೆಂದು ತೆರಳಿದ್ರು.
ಮಳೆ ಆರ್ಭಟದಿಂದಾಗಿ, ಸಾಕಷ್ಟು ಕಡೆ ಭೂಕುಸಿತಗಳಾಗ್ತಿವೆ. ಹಲವೆಡೆ ಪ್ರವಾಹ ಪರಿಸ್ಥಿತಿ ಇದೆ. ಹೀಗಾಗಿ ಕೇದಾರದಿಂದ 30 ಕಿಲೋಮೀಟರ್ ದೂರದಲ್ಲಿ ಈ ತಂಡ ಸಿಲುಕಿದ್ದು, ಕೇದಾರಕ್ಕೆ ತಲುಪಲೂ ಆಗ್ತಿಲ್ಲ, ವಾಪಸ್ ಬರುವ ಪರಿಸ್ಥಿತಿಯೂ ಇಲ್ಲ. ಹೀಗಾಗಿ ಚಿತ್ರದುರ್ಗದ ರತ್ನಮ್ಮ, ಅಂಬಿಕಾ, ಗೀತಾರನ್ನ ಸುರಕ್ಷಿತವಾಗಿ ವಾಪಸ್ ಕರೆತರುವಂತೆ ಸಂಬಂಧಿಕರು ಮನವಿ ಮಾಡಿದ್ದಾರೆ. ಇನ್ನೂ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಹವಾಮಾನ ಇಲಾಖೆ ಎರಡು ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಒಟ್ಟಾರೆ, ಮೇಘರಾಜನ ರೌದ್ರನರ್ತನಕ್ಕೆ ಉತ್ತರ ತತ್ತರಿಸಿ ಹೋಗಿದೆ. ಮಳೆರಾಯ ಕೊಂಚ ಶಾಂತವಾಗುವಂತೆ ಜನರ ಪ್ರಾರ್ಥನೆ ಮುಗಿಲು ಮುಟ್ಟಿದೆ.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading