ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದ.ಕ ಜಿಲ್ಲಾ ಫುಟ್ ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಡಿ ಎಸ್ ಅಸ್ಲಂ ಸ್ವಾತಂತ್ರ್ಯ ದಿನಾಚರಣೆಯ ಸವಿನೆನಪಿಗಾಗಿ
೨೫ವರ್ಷಗಳ ಹಿಂದೆ ಶಾಲಾ ಕಾಲೇಜು ಮಟ್ಟದ ಒಂದು ಫುಟ್ಬಾಲ್ ಪಂದ್ಯಾಟ ದಿ|ಪಳ್ಳಿ ಜಯರಾಮ ಶೆಟ್ಟಿಯವರ ಪ್ರೇರಣೆಯಿಂದ”ಇಂಡಿಪೆಂಡೆನ್ಸ್” ಕಪ್ ಪಂದ್ಯಾವಳಿಯನ್ನು ಪ್ರಾರಂಭಿಸಲಾಯಿತು ಕೋವಿಡ್ ನಂತರ ಇದೀಗ ಮೊದಲ ಪಂದ್ಯಾಟ ಜುಲೈ ೨೨ರಂದು ಮಂಗಳೂರಿನ ನೆಹರೂ ಫುಟ್ಬಾಲ್ ಗ್ರೌಂಡ್‌ನಲ್ಲಿ ನಡೆಯಲಿದೆ
ಸುಮಾರು ೨೧೦ಕ್ಕೂ ಮಿಕ್ಕಿದ ತಂಡಗಳು ಭಾಗವಹಿಸುತ್ತಿರುವುದಾಗಿ ಮಾಹಿತಿ ನೀಡಿದರು ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಬಿ.ಬಿ ಥೋಮಸ್ ಕಾರ್ಯದರ್ಶಿ ಹುಸೈನ್ ಬೋಳಾರ್ ಖಜಾಂಚಿ ಫಿರೋಝ್ ಉಳ್ಳಾಲ್ ಉಪಸ್ಥಿತರಿದ್ದರು.