ಬಂಟ್ವಾಳ:ಸರಕಾರಿ ಬಸ್ ನಲ್ಲಿದ್ದ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಹಿಂಬದಿ ಶೀಟಿನಲ್ಲಿ ಕುಳಿತುಕೊಂಡ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯ ಜಡೆಯನ್ನು ಸವರಿದ್ದಾನೆಂದು ಹಿಂದು ಜಾಗರಣ ವೇದಿಕೆ ಪೊಲೀಸರಿಗೆ ದೂರು ನೀಡಿದೆ.
ಮಹಿಳೆಯೋರ್ವರ ಜಡೆಯನ್ನು ಸವರಿದ್ದಾನೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.ಮಂಗಳೂರು ಧರ್ಮಸ್ಥಳಕ್ಕೆ ಸಂಚಾರಿಸುವ ಸರಕಾರಿ ಬಸ್ಸಿನಲ್ಲಿ ಘಟನೆ ನಡೆದದೆ ಎನ್ನಲಾಗಿದೆ.ಹಿಂಬದಿ ಶೀಟಿನಲ್ಲಿ ಕುಳಿತುಕೊಂಡು ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯ ಜಡೆಯನ್ನು ಸವರಿದ ವಿಡಿಯೋ ವನ್ನು ಸಹಪ್ರಯಾಣಿಕರು ಚಿತ್ರೀಕರಣ ಮಾಡಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೆ ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಆಗ್ರಹಿಸಲಾಗಿದೆ.