ಗಂಗಾವತಿ: ಇಕ್ಬಾಲ್ ಅನ್ಸಾರಿಯವರು ಸೋಲಲು ಕಾರಣಗಳು ಎರಡು. ಮೊದನೆಯ ಕಾರಣ ಬಿಜೆಪಿ ತನ್ನ ಮತಗಳನ್ನು ಪಡೆಯುವಲ್ಲಿ ವಿಫಲವಾಗಿರುವುದು, ಎರಡನೆಯದಾಗಿ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಜನಾರ್ಧನರೆಡ್ಡಿಗೆ ಒಳಬೆಂಬಲ ನೀಡಿರುವುದು ಈಗ ಬಹಿರಂಗವಾಗಿದೆ. ಇದನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರರವರು ಗಮನಿಸಿ, ಗಂಗಾವತಿಯಲ್ಲಿ ಕಾಂಗ್ರೆಸ್ ಸೋಲಿನ ಕಾರಣವನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಈ ಕೆಲಸದಿಂದ ಹೊರಗಡೆಯಿಂದ ರೌಡಿಗಳು ಗಂಗಾವತಿಗೆ ಬಂದು ಶಾಂತಿ ಕದಡಿಸಲು ಕಾರಣವಾಗುತ್ತಾರೆ. ಗಂಗಾವತಿಯ ಜನತೆ ಎಚ್ಚೆತ್ತುಕೊಂಡು ನಮ್ಮ ಊರಿನ ಶಾಂತಿ ಹಾಗೂ ಸಂಪ್ರದಾಯ ಕಾಪಾಡಿಕೊಳ್ಳಬೇಕೆಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಕೋರಿದ್ದಾರೆ.