ಕೊಪ್ಪಳ ಮೇ 11 (ಕ.ವಾ.): ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10ರಂದು ಬೆಳಗ್ಗೆ 7ರಿಂದ ಆರಂಭಗೊಂಡು ಮತದಾನದ ಮುಕ್ತಾಯದವರೆಗೆ ಅಂತಿಮವಾಗಿ ಈ ಬಾರಿ ಶೇ.77.88ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 1,17,661 ಪುರುಷರು ಹಾಗೂ 1,15,955 ಮಹಿಳೆಯರು ಹಾಗೂ ಇತರೆ 9 ಜನರು ಸೇರಿ ಒಟ್ಟು 2,33,625 ಮತದಾರರ ಪೈಕಿ 93,372 ಪುರುಷರು ಹಾಗೂ 89,371 ಮಹಿಳೆಯರು ಸೇರಿ 1,82,743 ಜನರು ಮತ ಚಲಾಯಿಸಿದ್ದು ಶೇ.78.22 ರಷ್ಟು ಮತದಾನವಾಗಿದೆ. ಹಿಂದಿನ ಚುನಾವಣೆಯಲ್ಲಿ ಇದೆ ಕ್ಷೇತ್ರದಲ್ಲಿ ಶೇ.73.22ರಷ್ಟು ಮತದಾನವಾಗಿತ್ತು
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1,10,587 ಪುರುಷರು ಹಾಗೂ 1,13,446 ಮಹಿಳೆಯರ ಮತ್ತು ಇತರೆ 9 ಜನರು ಸೇರಿ ಒಟ್ಟು 2,24,042 ಮತದಾರರ ಪೈಕಿ 88,524 ಪುರುಷರು ಹಾಗೂ 86,976 ಮಹಿಳೆಯರು ಮತ್ತು ಇತರೆ 4 ಜನರು ಸೇರಿ ಒಟ್ಟು 1,75,504 ಜನರು ಮತ ಚಲಾಯಿಸಿದ್ದು ಶೇ.78.34 ರಷ್ಟು ಮತದಾನವಾಗಿದೆ. ಹಿಂದಿನ ಚುನಾವಣೆಯಲ್ಲಿ ಇದೆ ಕ್ಷೇತ್ರದಲ್ಲಿ 78.98ರಷ್ಟು ಮತದಾನವಾಗಿತ್ತು.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 1,00,295 ಪುರುಷರು ಹಾಗೂ 1,01,899 ಮಹಿಳೆಯರು ಮತ್ತು ಇತರೆ 12 ಸೇರಿ ಒಟ್ಟು 2,02,206 ಮತದಾರರ ಪೈಕಿ 80,627 ಪರುಷರು ಹಾಗೂ 78,259 ಮಹಿಳೆಯರು ಮತ್ತು ಇತರ 4 ಜನರು ಸೇರಿ 1,58,890 ಜನರು ತಮ್ಮ ಮತ ಹಕ್ಕನ್ನು ಚಲಾಯಿಸಿದ್ದು, ಶೇ.78.58 ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಇದೆ ಕ್ಷೇತ್ರದಲ್ಲಿ ಶೇ.75.42ರಷ್ಟು ಮತದಾನವಾಗಿತ್ತು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 1,11,884 ಪುರುಷರು ಹಾಗೂ 1,11,144 ಮಹಿಳೆಯರು ಮತ್ತು ಇತರೆ 8 ಜನರು ಸೇರಿ ಒಟ್ಟು 2,23,036 ಮತದಾರರ ಪೈಕಿ 89,917 ಪುರುಷರು ಹಾಗೂ 85,718 ಮಹಿಳೆಯರು ಮತ್ತು ಇತರೆ 2 ಸೇರಿ 1,75,637 ಜನರು ತಮ್ಮ ಮತ ಹಕ್ಕನ್ನು ಚಲಾಯಿಸಿದ್ದು ಶೇ.78.75ರಷ್ಟು ಮತದಾನ ಪ್ರಮಾಣ ದಾಖಲಾಗಿದೆ. ಹಿಂದಿನ ಚುನಾವಣೆಯಲ್ಲಿ ಶೇ.78.08ರಷ್ಟು ಮತದಾನವಾಗಿತ್ತು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1,25,954 ಪುರುಷರು ಹಾಗೂ 1,27,963 ಮಹಿಳೆಯರು ಮತ್ತು ಇತರೆ 12 ಜನರು ಸೇರಿ ಒಟ್ಟು 2,53,929 ಮತದಾರರ ಪೈಕಿ 98,377 ಪುರುಷರು ಹಾಗೂ 94,173 ಮಹಿಳೆಯರು ಮತ್ತು ಇತರೆ ಒಬ್ಬರು ಸೇರಿ ಒಟ್ಟು 1,92,551 ಜನರು ಮತ ಚಲಾಯಿಸಿದ್ದು, ಶೇ.75.83ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಇದೆ ಕ್ಷೇತ್ರದಲ್ಲಿ ಈ ಹಿಂದೆ 74.36ರಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು.
ಐದು ವಿಧಾನಸಭಾ ಕ್ಷೇತ್ರಗಳಲ್ಲಿನ ಒಟ್ಟಾರೆ 5,66,381 ಪುರುಷರು ಮತ್ತು 5,70,407 ಮಹಿಳೆಯರು ಮತ್ತು ಇತರೆ 50 ಜನರು ಸೇರಿ 11,36,838 ಮತದಾರರ ಪೈಕಿ 4,50,817 ಪುರುಷರು, 4,34,497 ಮಹಿಳೆಯರು ಮತ್ತು ಇತರೆ 11 ಜನ ಸೇರಿ ಒಟ್ಟಾರೆ 8,85,325 ಜನರು ತಮ್ಮ ಮತ ಹಕ್ಕನ್ನು ಚಲಾಯಿಸಿ ಒಟ್ಟಾರೆ ಜಿಲ್ಲೆಯಾದ್ಯಂತ ಶೇ.77.88 ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಇದರಲ್ಲಿ ಶೇ.79.60ರಷ್ಟು ಪುರುಷರು ಹಾಗೂ ಶೇ.76.17ರಷ್ಟು ಮಹಿಳೆಯರು ಮತ್ತು ಶೇ.22ರಷ್ಟು ಇತರೆ ಜನರು ಮತ ಚಲಾಯಿಸಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.76.16ರಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು.