ಗಂಗಾವತಿ,8: ಇಂದು ನಗರ ಮಂಡಲ ಅಧ್ಯಕ್ಷರಾದ ಶ್ರೀ ಕಾಶಿನಾಥ ಚಿತ್ರಗಾರ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಮಳಗಿ ಅವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಪ್ರಾರಂಭಗೊಂಡಿತು
ನಗರದ ಶ್ರೀ ಕೃಷ್ಣ ದೇವರಾಯ ವೃತ್ತದಿಂದ , ಬಸವಣ್ಣ ವೃತ್ತ , ಗಾಂಧಿ ವೃತ್ತ, ಮಹಾವೀರ ವೃತ್ತ, ಸಿಬಿಎಸ್ ವೃತ್ತ ಮಾರ್ಗವಾಗಿ ಸಾಂಸ್ಕೃತಿಕ ಕಲಾ ಮೇಳ ಗಳೊಂದಿಗೆ, ಡಿಜೆ ದೊಂದಿಗೆ, ಬಿಜೆಪಿ ಬೃಹತ್ ಪ್ರಚಾರ ಮೆರವಣಿಗೆ ಜಾತಾ ಅದ್ದೂರಿಯಾಗಿ ಜರುಗಿತು
ಸಹಸ್ರ ಸಂಖ್ಯೆಯ ಜನ ಸಾಗರದಲ್ಲಿ ಹನುಮನ ವೇಷ ಧಾರಿ ಗಮನ ಸೆಳೆದಿದ್ದು ವಿಶೇಷವಾಗಿತ್ತು.
ಮೆರವಣಿಗೆ ಉದ್ದಕ್ಕೂ ಮುಖಂಡರುಗಳು , ಕಾಂಗ್ರೇಸ್ ಹಾಗೂ ಕೆ.ಆರ್.ಪಿ.ಪಿ ಪಕ್ಷದ ವಿರುದ್ದ ಹರಿಹಾಯುತ್ತ, ಗಂಗಾವತಿ ಹಾಗೂ ಅಂಜನಾದ್ರಿಯ ಅಭಿವೃದ್ದಿಗೆ ಹಾಗೂ ಮೋದಿಜಿ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು
ಜನಪ್ರಿಯ ಶಾಸಕರು ಬಿಜೆಪಿ ಅಭ್ಯರ್ಥಿಗಳು ಆದ ಶ್ರೀ ಪರಣ್ಣ ಮುನವಳ್ಳಿ ಅವರು, ಜಿಲ್ಲಾ ಕಾರ್ಯಾಧ್ಯಕ್ಷರಾದ ಗಿರೇಗೌಡ ಹೊಸಕೇರಾ, ಮಾಜಿ ಕಾಢಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಮಾಧ್ಯಮ ವಕ್ತಾರರಾದ ವೀರಭದ್ರಪ್ಪ ನಾಯಕ, ಬಳ್ಳಾರಿ ಜಿಲ್ಲಾ ಸಹ ಪ್ರಭಾರಿಗಳಾದ ವಿರುಪಾಕ್ಷಪ್ಪ ಸಿಂಗನಾಳ, ಮುಖಂಡರಾದ ಹೊಸಳ್ಳಿ ಶಂಕರಗೌಡ, ಸಿದ್ದರಾಮಯ್ಯ ಸ್ವಾಮಿ, ಸೂರಿಬಾಬು ನೆಕ್ಕಂಟಿ, ಸಂತೋಷ್ ಕೆಲೋಜಿ, ರಾಘವೇಂದ್ರ ಶೆಟ್ಟಿ, ಜೋಗದ ನಾರಾಯಣಪ್ಪ ನಾಯಕ, ಹನುಮಂತಪ್ಪ ನಾಯಕ, ನವೀನ್ ಮಾಲಿಪಾಟೀಲ್, ರುದ್ರೇಶ್ ಡ್ಯಾಗಿ, ಸಾಗರ್ ಮುನವಳ್ಳಿ ಸೇರಿದಂತೆ ಪಕ್ಷದ ಸಮಸ್ತ ಕಾರ್ಯಕರ್ತರೊಂದಿಗೆ ಕನಕಗಿರಿ ರಸ್ತೆ ಹತ್ತಿಮಿಲ್ ಬಿಜೆಪಿ ಚುನಾವಣೆ ಕಚೇರಿಯಲ್ಲಿ ಮೆರವಣಿಗೆ ಸಂಪನ್ನಗೊಂಡಿತು.
ಈ ಸಮಯದಲ್ಲಿ ಮುನವಳ್ಳಿ ಕುಟುಂಬದವರು, ಸಮಸ್ತ ಭಾಜಾಪ ಪಧಾದಿಕಾರಿಗಳು, ನಗರಸಭೆ ಸರ್ವಸದಸ್ಯರು, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳು, ಮಹಿಳಾ ಮೋರ್ಚಾ ಅಧ್ಯಕ್ಷರು, ಕಾರ್ಯಕರ್ತ ಬಂಧುಗಳು, ಅಭಿಮಾನಿಗಳು ಉಪಸ್ಥಿತರಿದ್ದರು.