ಗಂಗಾವತಿ ವಕೀಲರ ಸಂಘದ ಕಾರ್ಯಾಲಯಕ್ಕೆ ಜೆಡಿಎಸ್ ಅಭ್ಯರ್ಥಿಯಾದ HR ಚನ್ನಕೇಶವ ಅವರು ಭೇಟಿ ಗಂಗಾವತಿಯ ವಕೀಲರ ಸಂಘದ ಕಾರ್ಯಾಲಯಕ್ಕೆ ಜೆಡಿಎಸ್ ಅಭ್ಯರ್ಥಿಯಾದ ಶ್ರೀ HR ಚನ್ನಕೇಶವ ಅವರು ಭೇಟಿ ಮಾಡಿ ಮತಯಾಚನೆ ಮಾಡಿದರು.
ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮುಸಾಲಿ ಕಾರ್ಯದರ್ಶಿ HM ಮಂಜುನಾಥ್ ಹಾಗೂ ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಜೆಡಿಎಸ್ ಅಭ್ಯರ್ಥಿಯಾದ ಶ್ರೀ HR ಚನ್ನಕೇಶವ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು ಸನ್ಮಾನ ಸ್ವೀಕರಿಸಿ ಜೆಡಿಎಸ್ ಅಭ್ಯರ್ಥಿಯಾದ ಶ್ರೀ HR ಚನ್ನಕೇಶವ ಅವರು ಮಾತನಾಡಿ ಎಲ್ಲಾ ವರ್ಗದವರ ಸೇವೆ ಮಾಡಲು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದು ವಕೀಲರ ಸಂಘದ ಪದಾಧಿಕಾರಿಗಳು ಬೆಂಬಲಿಸಿ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಶೇಖ್ ನಬಿಸಾಬ್ ಜೆಡಿಎಸ್ ಮುಖಂಡರಾದ ಸತೀಶ್ ಸ್ವಾಮಿ ಹಿರೇಮಠ ದುರ್ಗಾ ಪ್ರಸಾದ್ ಜಾನಿ ಸಾಹೇಬರು ಮಹಮ್ಮದ್ ಯೂಸೂಫ್ ಮಂಜುನಾಥ್ ಸಂಗಾಪುರ ಮಂಜುನಾಥ್ ಹಿರೇಮಠ ಭಾಷಾ ಮಸ್ಕಿ ಚಂದ್ರು ಪವನ್ ನವೀನ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಈ ಸಮಯದಲ್ಲಿ ಉಪಸ್ಥಿತರಿದ್ದರು