ತಿಪಟೂರು : ಭಾಸ್ಕರ್ ಪತ್ರಿಕಾ ಬಳಗ ಮತ್ತು ಕರ್ನಾಟಕ ಕಟ್ಟಡ ಕೂಲಿ ಕಾರ್ಮಿಕರ ತಾಲ್ಲೂಕು ಘಟಕದ ವತಿಯಿಂದ ಮೇ ೧ ರಂದು ಹಾಸನ ವೃತ್ತದ ನಂದಿನಿ ಡೈರಿ ಆವರಣದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ದಿನಾಚರಣೆಯನ್ನು ಕಾರ್ಮಿಕ ಮುಖಂಡರು ಉದ್ಘಾಟಿಸಿದರು. ಕೋವಿಡ್ ಹಾಗೂ ಶ್ರಮಿಕ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಿ. ರೈಲ್ವೆ ಕಾರ್ಮಿಕ ನಾಯಕ ಕಾಂತರಾಜ್ ಅವರ ಹುಟ್ಟುಹಬ್ಬ ಆಚರಿಸಿ ಸನ್ಮಾನಿಸಿ ಸಿಹಿ ಹಂಚಲಾಯಿತು. ರೈತಕವಿ ಡಾ.ಪಿ ಶಂಕ್ರಪ್ಪಬಳ್ಳೆಕಟ್ಟೆರವರು ಕಾರ್ಮಿಕರು,ರೈತರು ಸದಾ ಜಗದ್ರಕ್ಷಕರು ಎಂದು ಗುಣಗಾನಮಾಡುತ್ತಾ ಸ್ವಾಗತಿಸಿ ವಂದಿಸಿದರು ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಭಾಸ್ಕರ್ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸರ್ವೇಶ್,ಕಾರ್ಯದರ್ಶಿ ಧರಣೀಶ್ ಕುಪ್ಪಾಳು , ವಿಶೇಷ ಚೇತನ ಮಾದಿಹಳ್ಳಿ ನಾಗರಾಜ್, ಸಿದ್ದರಾಮಯ್ಯ,ಗಂಗಾಧರ್ ಸುಪ್ರೀತ್, ಮತ್ತು ಎಸ್ ಎಸ್ ಆಸ್ಪತ್ರೆಯ ಶುಶ್ರೂಷಿಕಿಯರು ಹಾಗು ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.