ಗಂಗಾವತಿ : ನಗರದ ಹೀರೆಜಂತಕಲ್ ನಲ್ಲಿ ಸೋಮವಾರ ರಾತ್ರಿ 7 ಗಂಟೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಗಾಲಿ ಜನಾರ್ಧನ ರೆಡ್ಡಿಯವರ ಚುನಾವಣೆಯ ಅಬ್ಬರದ ಪ್ರಚಾರ ನಡೆಸಿದರು.
ಚುನಾವಣೆ ಇನ್ನೂ ಕೆಲವು ದಿನಗಳು ಬಾಕಿಯಿದ್ದು, ಗಂಗಾವತಿ ವಿಧಾನಸಭೆ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾದ ಗಾಲಿ ಜನಾರ್ಧನ ರೆಡ್ಡಿಯವರ ಸೋಮವಾರ ಸಂಜೆ ಹೀರೆಜಂತಕಲ್ ನ ಕನ್ನಿಕಾ ಪರಮೇಶ್ವರಿ ದೇಗುಲ, ದ್ಯಾವಮ್ಮ ಗುಡಿ ಹಾಗೂ ಬಸವಣ್ಣ ಗುಡಿ ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಕ್ಷದ ಪ್ರಚಾರ ನೆಡಸಿದ ಜನಾರ್ಧನ ಈ ಸಂದರ್ಭದಲ್ಲಿ ತಾಯಂದಿರು ರೆಡ್ಡಿಯವರಿಗೆ ಕಳಸ ಬೆಳಗುವ ಮೂಲಕ ಸ್ವಾಗತಿಸಿ ತಿಲಕವನ್ನಿಟ್ಟರು.
ವಾರ್ಡ್ ನಂ 33,34,35 ರಲ್ಲಿ ಪ್ರಚಾರ ಸಮಯದಲ್ಲಿ ಎರಿಯಾ ನಿವಾಸಿಗಳ ಮನೆಯ ಹಕ್ಕುಪತ್ರ, ಮೂಲಭೂತ ಸೌಕರ್ಯಗಳಲ್ಲಿ ಮುಖ್ಯವಾದ ಚರಂಡಿ ಸಮಸ್ಯೆ ಬಹು ಮುಖ್ಯವಾಗಿ ಕಂಡು ಬಂದಿತು. ಇನ್ನುಳಿದ ಎಲ್ಲಾ ಸಮಸ್ಯೆಗಳನ್ನು ಅರಿತು, ಈ ಬಾರಿ ಶಾಸಕನಾಗಿ ಅರ್ಶಿವಾದ ಮಾಡಿ. ನಾನು ಶಾಸಕನಾಗಿ ಕೇವಲ ಎರಡು ಮೂರು ತಿಂಗಳಲ್ಲಿ ಖುದ್ದು ಅಧಿಕಾರಿಗಳು ಜೊತೆ ತಮ್ಮ ಬಳಿ ಬಂದು ಸ್ಥಳದಲ್ಲೇ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಯುವ ಮುಖಂಡರಾದ ಹನುಮಾನ್ ಕಲರ್ ಲ್ಯಾಬ್ ಮಾಲೀಕರಾದ ರಮೇಶ್ ಹೊಸಮನಿ, ವಿನಯ್ ಪಾಟೀಲ್, ಶ್ರೀ ದೇವಿ ಇಂಡಸ್ಟ್ರೀಸ್ ನಾಗರಾಜ್, ರೈತ ಮುಖಂಡ ನಾರಾಯಣಪ್ಪ ಉಪ್ಪಾರ, ಯಲಬುರ್ತಿ ರವಿಕುಮಾರ್ ಹಾಗೂ ಇನ್ನೂ ಮುಂತಾದ ಹಿರಿಯ, ಕಿರಿಯ ಮುಖಂಡರು ಸಾಥ್ ನೀಡಿದರು.