ಗಂಗಾವತಿ:ಇಂದು ಹೊಸದುರ್ಗಾ ರಾಜ ರು಼ಷಿ ಭಗಿರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮಿಜಿ ಅವರು ಪೂಜಾ ಕಾರ್ಯಕ್ರಮದ ನಿಮಿತ್ಯ ಗಂಗಾವತಿ ಮಾರ್ಗವಾಗಿ ಚಿಕ್ಕಡಂಕನಕಲ್ ಗ್ರಾಮಕ್ಕೆ ಹೊರಡುವ ಸಂದರ್ಭದಲ್ಲಿ
ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರಿಗೆ ಆಶಿರ್ವದಿಸಿ ಹರಸಿ, ಅವರ ಹುಟ್ಟು ಹಬ್ಬದ ಪ್ರಯುಕ್ತ ಸಿಹಿ ತಿನ್ನಿಸಿ ಶುಭಕೋರಿದರು.
ಈ ಸಮಯದಲ್ಲಿ ಶಾಸಕರು ಗುರುಗಳನ್ನ ಸತ್ಕರಿಸಿ ಗೌರವಿಸಿ ಅವರ ಆಶಿರ್ವಾದ ಪಡೆದುಕೊಂಡು ಪುನೀತರಾದರು,
ಈ ಸಮಯದಲ್ಲಿ ಮುಖಂಡರಾದ ಶಂಕರಣ್ಣ ಮುನವಳ್ಳಿ, ಸೂರಿಬಾಬು ನೆಕ್ಕಂಟಿ, ಸಮಾಜದ ಮುಖಂಡರಾದ ವೆಂಕಟೇಶ್ ಅಮರಜ್ಯೋತಿ, ಯಂಕಪ್ಪ ಕಟ್ಟಿಮನಿ, ನೀಲಕಂಠ ಕಟ್ಟಿಮನಿ, ಗೋವಿಂದ್, ಹನುಮಂತಪ್ಪ, ನಾಗರಾಜ , ಹಾಗೂ ಸಮಾಜದ ಗಣ್ಯರು ಹಿರಿಯರು, ಮುಖಂಡರು ಉಪಸ್ಥಿತರಿದ್ದರು.