ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್ ಮೇಲಿನ ಕ್ರೇಜ್ ಹೆಚ್ಚಾಗುತ್ತಿದೆ. ಜನ ಟೆಸ್ಟ್, ಏಕದಿನ ಪಂದ್ಯಕ್ಕಿಂತಲೂ ಟ20 ನೋಡಲು ಇಷ್ಟಪಡುತ್ತಾರೆ. ಕಾರಣ ಕೇವಲ 4 ಗಂಟೆಯಲ್ಲಿ ಪಂದ್ಯದ ಫಲಿತಾಂಶ ಏನು ಎಂದು ತಿಳಿಯುತ್ತದೆ. ಜೊತೆಗೆ ಹೊಡಿಬಡಿ ಆಟವನ್ನು ನೋಡಬಹುದಾಗಿದೆ.
ಅಲ್ಲದೆ ಈ ಸ್ವರೂಪದಲ್ಲಿ ಬೌಲರ್ಗಳ ಮೇಲೆ ಬ್ಯಾಟ್ಸ್ಮನ್ಗಳು ಪ್ರಾಬಲ್ಯ ಸಾಧಿಸುತ್ತಾರೆ. ಮೊದಲ ಓವರ್ನಿಂದಲೇ ಬೌಲರ್ಗಳನ್ನು ದಂಡಿಸುತ್ತಾರೆ. ಅದರೆ ಕೆಲವೊಮ್ಮೆ ಕ್ರಿಕೆಟ್ ಪ್ರಿಯರನ್ನು ಆಕರ್ಷಿಸಲೆಂದ ಬ್ಯಾಟಿಂಗ್ ಪಿಚ್ಗಳನ್ನು ನಿರ್ಮಿಸಲಾಗುತ್ತಿದೆ. ಇದು ಬೌಲರ್ಗಳಿಗೆ ನರಕವಾಗುತ್ತದೆ.
ಸದ್ಯ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್ನಲ್ಲೂ ಬ್ಯಾಟರ್ಗಳ ಅಬ್ಬರ ಮುಂದುವರೆದಿದೆ. ಈವರೆಗೆ ನಡೆದ 6 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ 200+ ರನ್ಗಳು ದಾಖಲಾಗಿವೆ. ಇದು ಬ್ಯಾಟರ್ಗಳ ಪ್ರಾಬಲ್ಯ ಎತ್ತಿ ತೋರಿಸುತ್ತಿದೆ. ಇದರ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಆಟಗಾರ ಕಗಿಸೋ ರಬಾಡ ಆಕ್ರೋಶ ಹೊರಹಾಕಿದ್ದಾರೆ.
ಮಂಗಳವಾರ (ಮಾರ್ಚ್ 25) ನಡೆದ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಎಲ್ಲಾ ಬೌಲರ್ಗಳು ವಿಫಲರಾದರು. ವಿಶ್ವದರ್ಜೆಯ ಬೌಲರ್ಗಳಾದ ಕಗಿಸೊ ರಬಾಡ, ರಶೀದ್ ಖಾನ್, ಚಹಾಲ್, ಅರ್ಶ್ದೀಪ್ ಸಿಂಗ್ ಮತ್ತು ಸಿರಾಜ್ ಬೌಲಿಂಗ್ ಮೂಲಕ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇದಕ್ಕೆ ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ರಬಾಡ್ ಆಕ್ರೋಶ ಹೊರಹಾಕಿದ್ದಾರೆ.
ಕ್ರಿಕೆಟ್ ಎಂದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲನ ಇರಬೇಕು. ಬ್ಯಾಟಿಂಗ್ ಬೌಲಿಂಗ್ ಎರಡೂ ಸರಾಗವಾಗಿ ನಡೆದರೆ ಮಾತ್ರ ಪ್ರೇಕ್ಷಕರಿಗೆ ಮನರಂಜನೆ ಸಿಗುತ್ತದೆ. ಆದರೆ ಟಿ20 ಸ್ವರೂಪ ಬಂದ ನಂತರ ಇದು ಬ್ಯಾಟರ್ಗಳ ಆಟವಾಗಿ ಬದಲಾಗಿದೆ. ಐಪಿಎಲ್ನಲ್ಲೂ ಹಲವು ಪಿಚ್ಗಳನ್ನು ಬ್ಯಾಟಿಂಗ್ ಸ್ನೇಹಿಯಾಗಿ ಮಾಡಲಾಗುತ್ತಿದೆ. ಆದ್ದರಿಂದ 250ಕ್ಕೂ ಹೆಚ್ಚು ಸ್ಕೋರ್ಗಳನ್ನು ಸುಲಭವಾಗಿ ಗಳಿಸಲಾಗುತ್ತಿದೆ. ಇದಕ್ಕೆ ಕ್ರಿಕೆಟ್ ಅನ್ನುವ ಬದಲು ಬ್ಯಾಟಿಂಗ್ ಎಂದು ಹೆಸರು ಬದಲಿಸಬೇಕು ಎಂದಿದ್ದಾರೆ.
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಿಚ್ಗಳು ತುಂಬಾ ಸಮತಟ್ಟಾಗುತ್ತಿವೆ. ಪ್ರತಿಯೊಂದು ಪಂದ್ಯದಲ್ಲೂ ನಾವು ಒಂದೇ ರೀತಿಯ ಪರಿಸ್ಥಿತಿಯನ್ನು ನೋಡುತ್ತೇವೆ. ಇದು ಆಟದಿಂದ ಮಜವನ್ನು ಕಸಿದುಕೊಳ್ಳುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮಂಗಳವಾರ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಬಾಡ 4 ಓವರ್ಗಳಲ್ಲಿ 41 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 11 ರನ್ಗಳಿಂದ ಸೋಲನ್ನು ಕಂಡಿತು.