Connect with us

ಮನೋರಂಜನೆ

‘ಎಂಪುರಾನ್’​​ ರಿಲೀಸ್: ಅಡ್ವಾನ್ಸ್​​ ಬುಕಿಂಗ್​​​ನಲ್ಲೇ 80ಕೋಟಿಗೂ ಅಧಿಕ ಕಲೆಕ್ಷನ್

Published

on

ಸೌತ್ ಸೂಪರ್​ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ‘ಎಲ್2: ಎಂಪುರಾನ್’ ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಲಿವುಡ್​​ ಸ್ಟಾರ್ ಮೋಹನ್ ಲಾಲ್ ನಟಿಸಿದ್ದು, ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸೂಪರ್ ಹಿಟ್​​ ಲೂಸಿಫರ್​​ನ ಎರಡನೇ ಭಾಗವಿದು. ಮೊದಲ ಚಿತ್ರ ‘ಲೂಸಿಫರ್’ 2019ರ ಮಾರ್ಚ್​​ 28ರಂದು ತೆರೆಗಪ್ಪಳಿಸಿ ಯಶಸ್ವಿಯಾಗಿತ್ತು. 6 ವರ್ಷಗಳ ನಂತರ ಸ್ವೀಕ್ವೆಲ್​​ ಸಾಕಷ್ಟು ನಿರೀಕ್ಷೆಗಳೊಂದಿಗೆ ಥಿಯೇಟರ್​ ರೀಚ್​ ಆಗಿದೆ. ಚಿತ್ರದ ಅಡ್ವಾನ್ಸ್​​ ಟಿಕೆಟ್​​ ಆರಂಭವಾದ ಕ್ಷಣದಿಂದಲೇ, ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಷ್ಟು ದೊಡ್ಡ ಮಟ್ಟಿನ ರೆಸ್ಪಾನ್ಸ್ ಅನ್ನು ನಿರೀಕ್ಷಿಸಿರಲಿಲ್ಲ ಎಂದು ಸ್ವತಃ ಚಿತ್ರದ ನಿರ್ದೇಶಕ ಪೃಥ್ವಿರಾಜ್​​ ತಿಳಿಸಿದ್ದರು. ಮಲಯಾಳಂ ಸಿನಿಮಾ ಇತಿಹಾಸದಲ್ಲೇ ಎಂಪುರಾನ್​​ ದಾಖಲೆಯ ಓಪನಿಂಗ್ ಪಡೆಯಲಿದೆ. ಎಲ್ಲದಕ್ಕೂ ನಾಳೆ ಬೆಳಗ್ಗೆ ಸ್ಪಷ್ಟ ಉತ್ತರ ಸಿಗಲಿದೆ.

‘ಎಂಪುರಾನ್’ ಇಂಡಿಯಾ ಬಾಕ್ಸ್ ಆಫೀಸ್ ಕಲೆಕ್ಷನ್(ಮೊದಲ ದಿನ): ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ (Net Collection) ಭಾರತದಲ್ಲಿ ಈವರೆಗೆ 7 ಕೋಟಿ ರೂಪಾಯಿಯನ್ನು ದಾಟಿದೆ. ಈ ಅಂಕಿಅಂಶ ಕ್ಷಣಕ್ಷಣಕ್ಕೂ ಏರಲಿದ್ದು, ನಾಳೆ ಬೆಳಗ್ಗೆ ಒಟ್ಟು ಕಲೆಕ್ಷನ್​ ಮಾಹಿತಿ ಸಿಗಲಿದೆ.

ಗ್ಲೋಬಲ್​ ಕಲೆಕ್ಷನ್​​: ವಿಶ್ವಾದ್ಯಂತ ತನ್ನ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದ ಸಿನಿಮಾಗಳ ಲಿಸ್ಟ್​ಗೆ ‘ಎಂಪುರಾನ್​​’ ಸೇರೋದು ಬಹುತೇಕ ಪಕ್ಕಾ ಆಗಿದೆ. ಚೆನ್ನೈ ಎಕ್ಸ್‌ಪ್ರೆಸ್ (ಹಿಂದಿ), ಬಾಹುಬಲಿ (ತೆಲುಗು), ಕಬಾಲಿ (ತಮಿಳು), ಕೆಜಿಎಫ್ 2 (ಕನ್ನಡ) ಈ ಸ್ಪೆಷಲ್​ ಲಿಸ್ಟ್​​ನಲ್ಲಿದೆ. ಈ 4 ಸಿನಿಮಾಗಳು ತನ್ನ ಮೊದಲ ದಿನ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿತ್ತು. ಅದಾಗ್ಯೂ, ಮಾಲಿವುಡ್‌ ಸಣ್ಣ ಮಾರುಕಟ್ಟೆಯಾಗಿರುವ ಹಿನ್ನೆಲೆ, ಎಂಪುರಾನ್​ ಸಾಧನೆ ಮತ್ತಷ್ಟು ಪ್ರಭಾವಶಾಲಿಯಾಗಲಿದೆ.

ಪ್ರೀಸೇಲ್ಸ್​​​ನಲ್ಲಿ ವಿಶ್ವಾದ್ಯಂತ 80 ಕೋಟಿ ರೂಪಾಯಿಯ ವ್ಯವಹಾರ: ಎಂಪುರಾನ್ ಈಗಾಗಲೇ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ, ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡುವ ಸಿನಿಮಾವಾಗಿ ಹೊರಹೊಮ್ಮಲಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿಕೊಂಡಿದ್ದಾರೆ. ಸಹ-ನಿರ್ಮಾಣ ಬ್ಯಾನರ್‌ಗಳಲ್ಲಿ ಒಂದಾದ ಶ್ರೀ ಗೋಕುಲಂ ಮೂವೀಸ್, ಮುಂಗಡ ಬುಕಿಂಗ್‌ನಲ್ಲಿ (ಕೇವಲ ಮೊದಲ ದಿನದ ಕಲೆಕ್ಷನ್​ ಅಲ್ಲ, ನಾಳಡ, ನಾಡಿದ್ದು ಎಲ್ಲವನ್ನೂ ಸೇರಿಸಿ) 80 ಕೋಟಿ ರೂಪಾಯಿಯ ಗಡಿ ದಾಟಿದೆ ಎಂದು ಸೋಷಿಯಲ್​​ ಮೀಡಿಯಾದಲ್ಲಿ ಮಾಹಿತಿ ಒದಗಿಸಿದೆ.

ಮಲಯಾಳಂನ ಬಿಗ್ಗೆಸ್ಟ್​ ಓಪನರ್​: ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಎಂಪುರಾನ್​​, ಭಾರತ ಮತ್ತು ವಿಶ್ವಾದ್ಯಂತ ಅಡ್ವಾನ್ಸ್​​ ಟಿಕೆಟ್​ ಬುಕಿಂಗ್​ನಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿಯೆಬ್ಬಿಸಲು ಸಜ್ಜಾಗಿದೆ. ಮುಂಗಡ ಬುಕಿಂಗ್ ಪ್ರಾರಂಭವಾದಾಗಿನಿಂದಲೂ ಈ ಚಿತ್ರವು ಪ್ರತಿದಿನ ದಾಖಲೆಗಳನ್ನು ಪುಡಿಗಟ್ಟಿದೆ. ಮಲಯಾಳಂನ ಬಿಗ್ಗೆಸ್ಟ್​ ಓಪನರ್​ ಸಿನಿಮಾ ‘ಮರಕ್ಕರ್’ (20 ಕೋಟಿ ರೂಪಾಯಿ)ಗೂ ಎರಡು ಪಟ್ಟು ಹೆಚ್ಚು ಪ್ರೀ-ಸೇಲ್ಸ್​​ ವ್ಯವಹಾರ ನಡೆಸಿದ್ದು, ಯಾರೂ ನಿರೀಕ್ಷಿಸದ ಗಮನಾರ್ಹ ಸಾಧನೆ ಅಂತಲೇ ಹೇಳಬಹುದು.


Discover more from Zoom Karnataka

Subscribe to get the latest posts sent to your email.

Continue Reading
Click to comment

Leave a Reply

Your email address will not be published. Required fields are marked *

error: Content is protected !!

Discover more from Zoom Karnataka

Subscribe now to keep reading and get access to the full archive.

Continue reading