ಮಧೂರು ಕ್ಷೇತ್ರದ ಬ್ರಹ್ಮ ಕಲಶ ಮಾರ್ಚ್ ತಿಂಗಳಿನಲ್ಲಿ ,ಮಹಾಮಜ್ಜನದ ಸಕಲ ಸಿದ್ದತೆಗಾಗಿ ಮಂಜೇಶ್ವರ ತಾಲೂಕು ಸಮಿತಿ ರೂಪೀಕರಣ.
ಮಂಜೇಶ್ವರ ನ.16(Zoom Karnataka) : :-ಸೀಮೆಯ ಪುರಾತನ, ಇತಿಹಾಸ ಪ್ರಸಿದ್ದವಾದ ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರದ ಬ್ರಹ್ಮಕಲಶೋತ್ಸವ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವುದು. ಕ್ಷೇತ್ರದ ಕೆಲಸ ಕಾಮಗಾರಿ ಭರದಿಂದ ಸಾಗುತ್ತಿದ್ದು ,ಈ ನಿಟ್ಟಿನಲ್ಲಿ ಬ್ರಹ್ಮ ಕಲಶವನ್ನು ಯಶಸ್ವಿಯಾಗಿ ನಡೆಸಲು ಮಂಜೇಶ್ವರ ತಾಲೂಕು ಸಮಿತಿಯಿಂದ ಪೂರ್ವಭಾವಿ ಸಿದ್ದತೆ ಮತ್ತು ಸಮಾಲೋಚನಾ ಸಭೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮಿ ಗಳ ನೇತೃತ್ವದಲ್ಲಿ ಉಪ್ಪಳ ಕೊಂಡೆವೂರು ಯೋಗಾಶ್ರಮದಲ್ಲಿ ಶುಕ್ರವಾರ ಜರಗಿತು.
ಅಧ್ಯಕ್ಷತೆಯನ್ನು ಕನ್ಯಾನ ಸದಾಶಿವ ಶೆಟ್ಟಿ ಕುಳೂರು ವಹಿಸಿದರು. ಬಳಿಕ ಮಾತನಾಡಿದ ಅವರು ಮಾರ್ಚ್ ತಿಂಗಳಿನಲ್ಲಿ ಸೀಮೆಯ ಪ್ರಧಾನ ಕ್ಷೇತ್ರ, ಎಲ್ಲಾರೂ ಪ್ರಥಮವಾಗಿ ಶುಭ ಕಾರ್ಯಗಳಲ್ಲಿ ಪ್ರಾರ್ಥಿಸುವ ಮಧೂರು ಮಹಾಗಣಪತಿ ದೇವರ ಸಂಭ್ರಮದ ಬ್ರಹ್ಮ ಕಲಶವನ್ನು ಕಾಣಲು ಭಕ್ತರು ಕಾತಾರದಿಂದ ಇದ್ದಾರೆ. ಎಲ್ಲಾರೂ ಪೂರ್ಣವಾಗಿ ಜೊತೆಯಲ್ಲಿ ಸೇರಿಸಿಕೊಂಡು ಈ ಮಹಾಮಜ್ಜನವನ್ಜು ಯಶಸ್ವಿ ಮಾಡಬೇಕಾಗಿದೆ ಎಂಬುದಾಗಿ ತಿಳಿಸಿದರು.
ಅಶಿರ್ವಚನ ನೀಡಿದ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮಿಗಳು ಮಾತನಾಡಿ , ಮಧೂರು ಮಹಾಗಣಪತಿ ದೇವರು ಪ್ರಥಮ ಪೂಜಿತ ದೇವರು. ಶುಭ ಕಾರ್ಯದಿಗಳಿಗೆ ಆರಂಭದಲ್ಲಿ ಮಧೂರರನ್ನೆ ಪ್ರಥಮ ಪೂಜಿತವಾಗಿ ಗಣಪತಿಯ ಮಹಾಮಜ್ಜನಕ್ಕೆ ತಾವೆಲ್ಲರೂ ಭಕ್ತಯಿಂದ ತಮ್ಮ ನ್ನು ತೊಡಗಿಸಿಕೊಂಡು ಈ ಕಾರ್ಯವನ್ನು ಯಶಸ್ವಿ ಮಾಡಬೇಕು.
ಸರ್ವಸೇವೆಯನ್ನು ಭಗವಂತನಿಗೆ ಅರ್ಪಿಸಿ ಎಲ್ಲಾರಿಗೂ ಸರ್ವ ಮಂಗಳ ವನ್ನುಂಟುಮಾಡಲಿ ,ಮಾರ್ಚ್ ತಿಂಗಳು ನಮಗೆಲ್ಲಾ ಶುಭದಿನವಾಗಲಿ ಎಂಬುದಾಗಿ ತಿಳಿಸಿದರು.
ಬ್ರಹ್ಮಕಲಶ ಕೇಂದ್ರ ಸಮಿತಿ ಅಧ್ಯಕ್ಷ ಡಾ. ಬಿ.ಎಸ್ ರಾವ್ ,ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಉಪಾಧ್ಯಕ್ಷ ಮಧುಸೂದನ , ಶಶಿಧರ ಶೆಟ್ಟಿ ಗ್ರಾಮಚಾವಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.ಬಳಿಕ ಬ್ರಹ್ಮ ಕಲಶ ಮಂಜೇಶ್ವರ ತಾಲೂಕು ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಕನ್ಯಾನ ಸದಾಶಿವ ಶೆಟ್ಟಿ ,ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಕಾರ್ಯಾಧ್ಯಕ್ಷ ರಾಗಿ ಡಾ. ಶ್ರೀಧರ ಭಟ್ ,ಮೀರಾ ಆಳ್ವ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಡಾ.ಜಯಪ್ರಕಾಶ ನಾರಾಯಣ ತೊಟ್ಟತ್ತೋಡಿ ಅವರನ್ನು ಅಯ್ಕೆ ಮಾಡಲಾಯಿತು.