ಮಂಗಳೂರುZoomKarnataka Aug 23 : ಆ.೨೩. ಕದರಿಕಾ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ ಕದ್ರಿ ಕ್ರಿಕೆಟರ್ಸ್ (ರಿ) ಇವರು ಆಯೋಜಿಸುವ ೧೫ ನೇ ವರ್ಷದ ಕದ್ರಿ ಸ್ಟಾರ್ ನೈಟ್ ಸಂಗೀತ ರಸ ಸಂಜೆ ಕಾರ್ಯಕ್ರಮವು ಇದೇ ಬರುವ ತಾರೀಕು ಆಗಸ್ಟ್ ೨೭ ರಂದು ಮಂಗಳವಾರ ಸಂಜೆ ಕದ್ರಿ ಮೊಸರುಕುಡಿಕೆ ಉತ್ಸವದ ಸಂದರ್ಭದಲ್ಲಿ ಕದ್ರಿ ಮೈದಾನದಲ್ಲಿ ನಡೆಯಲಿದೆ.
ಈ ಬಾರಿಯ ಕಾರ್ಯಕ್ರಮದಲ್ಲಿಯೂ ಸಹ ಖ್ಯಾತ ಚಿತ್ರ ನಟ ನಟಿಯರು ಹಾಗು ಹಿನ್ನೆಲೆ ಗಾಯಕರ ಸಂಗೀತ ಕಾರ್ಯಕ್ರಮ ನೀಡಲಿದ್ದು, ಬಹಳ ವರ್ಣ ರಂಜಿತವಾಗಿ ಅದ್ಧೂರಿ ಇಂದ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕರಾದ ಕದ್ರಿ ಮನೋಹರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ
ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲಾ ಭಾಗವಹಿಸಲಿದ್ದು ಅಲ್ಲದೆ ಕನ್ನಡತಿ ಖ್ಯಾತಿಯ ಹಾಗೂ ಸ್ಯಾಂಡಲ್ವುಡ್ ನಟ ಕಿರಣ್ ರಾಜ್, ಸೈಮಾ ಪ್ರಶಸ್ತಿ ವಿಜೇತೆ ಕೃಷ್ಣಮ್ ಪ್ರಣಯ ಸಖಿ ಚಿತ್ರ ನಟಿ ಶರಣ್ಯ ಶೆಟ್ಟಿ, ಚಿತ್ರ ನಟಿ ರಾಧ್ಯಾ, ಖ್ಯಾತ ಚಿತ್ರ ನಿರ್ದೇಶಕ ಗುರುತೇಜ್ ಶೆಟ್ಟಿ, ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಲಿನ್, ಬಹುಭಾಷಾ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಖ್ಯಾತ ಹಿನ್ನೆಲೆ ಗಾಯಕ ವ್ಯಾಸರಾಜ್ ಸೋಸಲೆ, ಜಿಎ ಸರಿಗಮಪ ಖ್ಯಾತಿ ತನುಶ್ರೀ ಮಂಗಳೂರು, ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರ ಹೀಗೆ ಹಲವು ಕಲಾವಿದರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ
ಇನ್ನು ವಿಶೇಷವಾಗಿ ಭಾರತೀಯ ಸೇನೆಯ ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಡಿದ ಮಾಜಿ ಸೈನಿಕರು ಭಾಗವಹಿಸಲಿದ್ದು ಅವರನ್ನು ಸನ್ಮಾನಿಸುವ ಕಾರ್ಯಕ್ರಮವು ನಡೆಯಲಿದೆ ವಿಶೇಷವಾಗಿ ಮಳೆಯಿಂದ ಅಡ್ಡಿಯಾಗದಂತೆ ಕಾರ್ಯಕ್ರಮವು ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.