ಬೋಳಿಯಾರು Jun 10 (Zoomkarnataka) ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ವಿಜಯೋತ್ಸವ ಆಚರಿಸಿ ಮರಳುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಮುಸ್ಲಿಂ ಯುವಕರ ಗುಂಪು ಚೂರಿಯಿಂದ ಇರಿದ ಘಟನೆ ಬಂಟ್ವಾಳ ತಾಲೂಕಿನ ಬೋಳಿಯಾರು ಎಂಬಲ್ಲಿ ನಡೆದಿದೆ.
ಬೋಳಿಯಾರು ನಿವಾಸಿಗಳಾದ ಹರೀಶ್ ಹಾಗೂ ನಂದಕುಮಾರ್ ಎಂಬ ಇಬ್ಬರು ಚೂರಿ ಇರಿತಕ್ಕೊಳಕ್ಕಾದವರು ಎನ್ನಲಾಗಿದೆ.
ಮೋದಿ ಪದಗ್ರಹಣದ ವಿಜಯೋತ್ಸವದಲ್ಲಿ ತೊಡಗಿ ನಂತರ ತನ್ನ ಊರಿಗೆ ಮರಳುವ ಸಂದರ್ಭದಲ್ಲಿ 40 ಜನರ ಮುಸ್ಲಿಂಮರ ತಂಡವೊಂದು ಇಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದಇಬ್ಬರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.