Jun 07 (ZoomKarnataka)ಎಸ್ ಆರ್ ಎಸ್ ಮೀಡಿಯಾ ಹೌಸ್ ಪ್ರಸ್ತುತ ಪಡಿಸುವ ‘ ಅವನಿ ‘ ಎಂಬ ಕನ್ನಡ ಹೊಚ್ಚ ಹೊಸ ಧಾರವಾಹಿಯು ಕರ್ನಾಟಕದಾದ್ಯಂತ ನಿಮ್ಮ ನೆಚ್ಚಿನ ಕೇಬಲ್ ಟಿವಿ ಚಾನೆಲ್ ಮೂಲಕ ಅತೀ ಶೀಘ್ರದಲ್ಲೇ ತಲುಪಲಿದೆ. ಕರಾವಳಿ ಮೂಲದ ಪ್ರಸಿದ್ಧ ಟಿವಿ ಚಾನೆಲ್ ಈ ಧಾರವಾಹಿಯ ಪ್ರಸಾರದ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಇದಕ್ಕೆ ಮುನ್ನ ಧಾರವಾಹಿಯ ಹಾಗೂ ಮುಹೂರ್ತ ಸಮಾರಂಭವು ಗಣ್ಯರ ಸಮ್ಮುಖದಲ್ಲಿ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು. ಟ್ರೈಲರ್ ಚಿತ್ರೀಕರಣ ಮೂಡಬಿದ್ರಿ ಸಂಪಿಗೆ ಹಾಗೂ ಪಾಲಡ್ಕ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಡೆಯಿತು.
ಸದ್ಯ ಎಸ್ ಆರ್ ಎಸ್ ಮೀಡಿಯಾ ಹೌಸಿನ ಪಾಲುದಾರರಾದ ಸುಜಿತ್ ಕುಮಾರ್ ಫರಂಗಿಪೇಟೆ, ಲಯನ್ ಅನಿಲ್ ದಾಸ್ ಮಂಗಳೂರು ಹಾಗೂ ದಿನೇಶ್ ಸುವರ್ಣ ಪಡುಪಣಂಬೂರು ಇವರ ನೇತೃತ್ವದಲ್ಲಿ ‘ಅವನಿ ‘ ಕನ್ನಡ ಧಾರವಾಹಿಯು ಮೂಡಿಬರಲಿದ್ದು, ಇದರ ಕಥೆ ಸಂಭಾಷಣೆ, ನಿರ್ದೇಶನ, ಸಾಹಿತ್ಯ ಶಶಿ ಬೆಳ್ಳಾಯರು, ನಿರ್ವಹಣೆ ಹಾಗೂ ಕಾರ್ಯಕಾರಿ ನಿರ್ಮಾಕರಾಗಿ ಸುಜಿತ್ ಕುಮಾರ್ ಫರಂಗಿಪೇಟೆ, ಲಯನ್ ಅನಿಲ್ ದಾಸ್ ಮಂಗಳೂರುಹಾಗೂ ದಿನೇಶ್ ಸುವರ್ಣ ಪಡುಪಣಂಬೂರು,ಸಲಹೆಗಾರ ಲಾನ್ಸಿ ಕೊವೆಲ್ಲೊ, ಸಹ ನಿರ್ದೇಶನ ಸೋನು ನೆಲ್ಲಿಗುಡ್ಡೆ ಹಾಗೂ ಛಾಯಾಗ್ರಾಹಣವನ್ನು ಮನೋಹರ್ ಶೆಟ್ಟಿ ಸುರತ್ಕಲ್ ವಹಿಸಿಕೊಂಡಿದ್ದಾರೆ. ಹೊಸ ತಂತ್ರಜ್ಞಾನವನ್ನು ಹಾಗೂ ನುರಿತ ಕಲಾವಿದರನ್ನು ಒಳಗೊಂಡಿದ್ದು ಧಾರವಾಹಿಯು ಅತ್ಯುತ್ತಮವಾಗಿ ಮೂಡಿಬರಲಿದೆ.
ಓರ್ವ ಪ್ರಾಮಾಣಿಕ ನಿಷ್ಠಾವಂತ ಹುಡುಗಿಯ ಸುತ್ತ ಹೆಣೆದಿರುವ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಥಾ ಹಂದರವನ್ನು ಒಳಗೊಂಡಿದೆ. ತಾರಗಣದಲ್ಲಿ ನಾಯಕಿಯಾಗಿ ಆಶಿಕಾ ತೀರ್ಥಹಳ್ಳಿ, ನಾಯಕನಾಗಿ ನವೀನ್ ಹಳೇಬೀಡು ಹಾಗೂ ನೆಗೆಟಿವ್ ರೋಲಿನಲ್ಲಿ ಕನ್ನಡಚಲನಚಿತ್ರರಂಗದ ನುರಿತ ಕಲಾವಿದ ಸಯ್ಯದ್ ವಹಿದ್ ಖಾನ್ ಬೆಂಗಳೂರು ಹಾಗೂ ಭೀಮಯ್ಯ ಕೊಡಗು ಹಾಗೂ ಇನ್ನಿತರ ಕರಾವಳಿಯ ಕಲಾವಿದರ ತಂಡವನ್ನು ಒಳಗೊಂಡಿದೆ.
ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣವು ಮಂಗಳೂರಿನ ಸುತ್ತಮುತ್ತ ಹಾಗೂ ಗ್ರಾಮೀಣ ಪ್ರದೇಶದ ಸೊಗಡಿನಲ್ಲಿ ಅತ್ಯುತ್ತಮವಾಗಿ ನಡೆಯಲಿದೆ.