ಮಂಜೇಶ್ವರ: 18 2023 ZoomKarnataka 18 ಪೇಟೆಗಳ ಕ್ಷೇತ್ರವೆಂದೇ ಖ್ಯಾತಿ ಪಡೆದ ಮಂಜೇಶ್ವರ ಶ್ರೀ ಮತ್ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಟಿ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಇಂದು ಸಂಜೆ ನಡೆಯಿತು. ನೂರಾರು ಮಂದಿ ಭಜಕರು ರಥವನ್ನ ಭಕ್ತರ ಮಠದವರೆಗೆ ಎಳೆದು ಅಲ್ಲಿ ವಿಶೇಷ ಆರತಿ ಪೂಜೆಯ ಬಳಿಕ ಮರಳಿ ಸ್ವ ಸ್ಥಾನಕ್ಕೆ ಎಳೆದುಕೊಂಡು ಬಂದರು.
ಸಹಸ್ರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ಮಂಜುಲೇಶನ ಕೃಪೆಗೆ ಪಾತ್ರರಾಗಿ, ಕಣ್ತುಂಬಿ ಕೊಂಡರು. ಬೆಳಗ್ಗೆನಿಂದ ಜಾತಿ ಧರ್ಮ ವರ್ಗ ಎನ್ನದೆ ಸರ್ವ ಜನತೆಗೆ ಕ್ಷೇತ್ರದ ವತಿಯಿಂದ ಪ್ರತೀ ವರ್ಷದಂತೆ ಅಕ್ಕಿ ವಿತರಣೆ “ಧರ್ಮ ನೀಡುವ” ಕಾರ್ಯಕ್ರಮ ನಡೆಯಿತು. ಬಳಿಕ ಮಧ್ಯಾಹ್ನ ಮಹಾಪೂಜೆ, ಯಜ್ಞ, ಪೂರ್ಣಾಹುತಿ, ಯಜ್ಞಾರತಿ ಸ್ವರ್ಣ ವಾಹನದಲ್ಲಿ ಬಲಿ ಉತ್ಸವ ಮತ್ತು ರಥಾರೋಹಣಕ್ಕೆ ದೇವರು ಹೊರಟರು. ಬ್ರಹ್ಮರಥೋತ್ಸವದ ಬಳಿಕ ರಾತ್ರಿ 9:30 ಕ್ಕೆ ಮಂಗಳಾರತಿ ಸಮಾರಾಧನೆ ನಡೆಯಲಿದೆ.
ನಾಳೆ ಕ್ಷೇತ್ರದಲ್ಲಿ ಮಧ್ಯಾಹ್ನ 1:30 ಕ್ಕೆ ಅವಭೃತ 2:30 ರಿಂದ 4:30 ರ ವರೆಗೆ ಮರದ ಲಾಲ್ಕಿ ಸಣ್ಣ ರಥೋತ್ಸವಗಳು, ಸಂಜೆ 5 ಕ್ಕೆ ಶೇಷ ತೀರ್ಥ ಸ್ನಾನ, 6 ಕ್ಕೆ ಧ್ವಜ ಅವರೋಹಣ, 7 ಕ್ಕೆ ಗಡಿಪ್ರಸಾದ ವಿತರಣೆ, ರಾತ್ರಿ 9:30 ಕ್ಕೆ ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ ನಡೆಯುವುದರೊಂದಿಗೆ ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಮಂಜೇಶ್ವರ ಷಷ್ಟಿ ಮಹೋತ್ಸವವು ಸಂಪನ್ನಗೊಳ್ಳಲಿದೆ.
Live Link : https://youtube.com/live/-mbu2G3aasc?feature=share