ಬೆಂಗಳೂರು,ಡಿ 16(Zoom Karnataka) : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗೀತಾ’ ಧಾರಾವಾಹಿಯ ನಾಯಕ ನಟ ಧನುಷ್ ಗೌಡ ಈಗ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸಂಜನಾ ಅವರೊಂದಿಗೆ ಧನುಷ್ ಗೌಡ ಎಂಗೇಜ್ ಆಗಿದ್ದಾರೆ. ಸಂಜನಾ – ಧನುಷ್ ಗೌಡ ಅವರ ನಿಶ್ಚಿತಾರ್ಥ ಸಮಾರಂಭ ಗ್ರ್ಯಾಂಡ್ ಆಗಿ ಜರುಗಿದೆ.
ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಧನುಷ್-ಸಂಜನಾ ಎಂಗೇಜ್‌ಮೆಂಟ್ ಕಾರ್ಯಕ್ರಮ ನಡೆದಿದೆ. ‘ಗೀತಾ’ ಸಹನಟಿ ಭವ್ಯಾ ಗೌಡ ಮತ್ತು ಕುಟುಂಬಸ್ಥರು, ಆಪ್ತರು ಅಷ್ಟೇ ಈ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಟಿ ಭವ್ಯಾ ಗೆಳೆಯನ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗೆಳೆಯನ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ. ಸದಾ ಭವ್ಯ ಜೊತೆಗೆ ಧನುಷ್ ಟ್ರಾವೆಲ್ ಕೂಡ ಮಾಡುತ್ತಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು, ಧನುಷ್ ಮತ್ತು ಭವ್ಯ ಇಬ್ಬರೂ ರಿಯಲ್ ಲೈಫ್‌ನಲ್ಲೂ ಒಂದಾಗುತ್ತಾರೆ ಎಂದುಕೊಂಡಿದ್ದರು. ಆದರೆ ಈಗ ಧನುಷ್ ನಿಶ್ಚಿತಾರ್ಥದ ಫೋಟೋಗಳನ್ನು ನೋಡಿ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.