ಉಡುಪಿ,ಡಿ12(Zoom Karnataka) : ತುಳುವನಾಡ ಧರ್ಮ ತುಡರ್ ಸ್ವಾಮಿ ಕೊರಗಜ್ಜ ಪಂಚ ವರ್ಣದ ಮಣ್ಣ ಕಣ್ಣು ಸತ್ಯ ಕರಿಯಜ್ಜ ಎಂಬಾ ಮಾತು ಸತ್ಯ.ಸ್ವಾಮಿ ಕೊರಗಜ್ಜ ಎಂದರೆ ಒಂದು ಶಕ್ತಿ ಅಂತಲೇ ಹೇಳಬಹುದು,ಇಲ್ಲಿ ಭಕ್ತಿಯಿಂದ ನಾವು ಅನಿಸಿದ್ದನ್ನು ಪ್ರಾರ್ಥನೆ ಮಾಡಿದರೆ ಅದು ಎಷ್ಟೋ ಕೆಲಸಕಾರ್ಯಗಳು ಅಗಿದುಂಟು ,ಇಂತದರಲ್ಲಿ ಕೊರಗಜ್ಜನಿಗೆ ಮದ್ಯದ ಸಮಾರಾಧನೆ ಎಂದರೆ ಬಹಳ ಅಚ್ಚುಮೆಚ್ಚು. ಜೊತೆಗೆ ಚಕ್ಕುಲಿ, ಬೀಡಾ ಕೊಟ್ಟರಂತೂ ಇನ್ನೂ ಪ್ರೀತಿ.
ಕರಾವಳಿ ಭಾಗದಲ್ಲಂತೂ ಕೊರಗಜ್ಜನನ್ನು ನಂಬದವರು ಬಹಳ ವಿರಳ ಈ ನಡುವೆ ಉಡುಪಿಯಲ್ಲಿ ನಡೆದ ಅಪರೂಪದ ಹರಕೆ ತೀರಿಸುವ ಕಾರ್ಯಕ್ರಮದ ನಡೆದಿದೆ. ಭಕ್ತರ ಬೇಡಿಕೆಯನ್ನು ಕ್ಷಣಮಾತ್ರದಲ್ಲಿ ಈಡೇರಿಸುವ ಕಾರ್ಣಿಕ ಮೆರೆಯುತ್ತಿರುವ ತುಳುನಾಡಿನ ಮೆಚ್ಚಿನ ದೈವ, ಸ್ವಾಮಿ ಕೊರಗಜ್ಜನಿಗೆ ಭಕ್ತರ ಹರಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಸ್ವಾಮಿ ಕೊರಗಜ್ಜರ ಭಕ್ತರು ಕ್ಷೇತ್ರಗಳಿಗೆ ಬರುತ್ತಾರೆ. ಈಗಂತೂ ಮೈಸೂರ್ ಬೆಂಗಳೂರಿನಲ್ಲೂ ಕೊರಗಜ್ಜ ಮೂರ್ತಿ ಸ್ಥಾಪನೆ ಮಾಡಿ ನಂಬುತ್ತಿರುವುದು ಎಲ್ಲರಿಗೆ ತಿಳಿದ ವಿಷಯ.ಉಡುಪಿ ಜಿಲ್ಲೆ ಕಟಪಾಡಿ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿಕೊರಗಜ್ಜ ಸನ್ನಿಧಿಯಲ್ಲಿ ಹರಕೆ ಹೊತ್ತ ವ್ಯಕ್ತಿಯೊಬ್ಬರು ಪವಾಡವೋ ಎಂಬಂತೆ ತನ್ನ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ.
ಉಡುಪಿಯ ಜಿಲ್ಲೆಯ ಸಾಲಿಗ್ರಾಮದಲ್ಲಿ ನೆಲೆಸಿರುವ ರವಿಚಂದ್ರ ದಂಪತಿಗಳಿಗೆ ಮದುವೆಯಾಗಿ ಕೆಲವು ವರ್ಷಗಳೆ ಕಳೆದರು ಸಂತಾನ ಪ್ರಾಪ್ತಿಯಾಗಿರುವುದಿಲ್ಲ.ಹಾಗೇನೇ ಕಾಪು ತಾಲೂಕಿನ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಮತ್ತು ಕೊರಗಜ್ಜ ದೈವಸ್ಥಾನಕ್ಕೆ ಬಂದು ಕೊರಗಜ್ಜ ಗುಡಿಯ ಮುಂದೆ ಸಂತಾನ ಪ್ರಾಪ್ತಿಗಾಗಿ ಒಂದು ಸಾವಿರದ ಎರಡು ಮಧ್ಯದ ಬಾಟಲಿಗಳ ಹರಕೆಯನ್ನು ಸಲ್ಲಿಸುತ್ತೆವೆ ಎಂದು ದಂಪತಿಗಳು ಪ್ರಾರ್ಥನೆ ಮಾಡಿಕೊಂಡಿದ್ದರು,ಹರಕೆ ಹೊತ್ತಂತೆ ವರ್ಷದ ಬಳಿಕ ಅವರಿಗೆ ಸಂತಾನ ಪ್ರಾಪ್ತಿಯಾಗಿದೆ. ಹಾಗಾಗಿ ತಾನು ಹರಕೆ ಹೊತ್ತಂತೆ,ಹರಕೆಯ ಫಲಶ್ರುತಿಯಂತೆ ಒಂದು ಸಾವಿರದ ಎರಡು ಮದ್ಯದ ಬಾಟಲಿಗಳನ್ನು ತಂದು ಕೊರಗಜ್ಜನ ಸನ್ನಿಧಾನಕ್ಕೆ ಅರ್ಪಿಸಿದ್ದಾರೆ.
ರವಿಚಂದ್ರ ರವರು ಈ ಕೊರಗಜ್ಜ ಸನ್ನಿಧಿಯ ಬಗ್ಗೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದರು,ಈ ಕ್ಷೇತ್ರಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದ ಮದ್ಯದ ಹರಕೆ ಸಲ್ಲಿಕೆ ಆಗಿರುವುದು ಇದೇ ಮೊದಲ ಬಾರಿಯಾಗಿದ್ದು ಸುಮಾರು ಒಂದು ವರ್ಷದ ನಂತರ ಅದರಂತೆ ಹರಕೆಗೆ ಬೇಕಾದ ಹಣಹೊಂದಿಸಿಕೊಂಡು ಮದ್ಯದ ಬಾಟಲಿಗಳನ್ನು ಒಟ್ಟುಗೂಡಿಸಿ ಕುಟುಂಬ ಸಮೇತವಾಗಿ ಬಂದು ಹರಕೆಯನ್ನು ಸಲ್ಲಿಸಿದ್ದಾರೆ.ಪೇಟೆ ಬೆಟ್ಟು ಶ್ರೀ ಭಗವಾನ್ ಶ್ರೀ ಬಬ್ಬು ಸ್ವಾಮಿ ದೇವಸ್ಥಾನ ಕಟಪಾಡಿ ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತರು ಬರುತ್ತಾರೆ.ಕರಾವಳಿ ಭಾಗದಲ್ಲಿ ಪ್ರತಿ ದಿನ ಭಕ್ತರು ಹರಕೆಯ ರೂಪದಲ್ಲಿ ಚಕ್ಕುಲಿ, ಬೀಡಾ, ವೀಳ್ಯದೆಲೆ, ಮದ್ಯದ ಬಾಟಲಿ ಸಲ್ಲಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಒಂದಾದ ಮೇಲೊಂದು ಪವಾಡ ನಡೆಯುತ್ತಿರುವ ಕಾರಣ ಕೊರಗಜ್ಜನನ್ನು ನಂಬಿದವರಿಗೆ ಎಲ್ಲೂ ಕೈ ಬಿಡಲ್ಲಾ ಎಂಬುದು ಭಕ್ತರ ನಂಬಿಕೆ.