ಮುಂಬೈ,ನ 20(Zoom Karnataka): ಬಾಲಿವುಡ್ ನಟಿ ಅನನ್ಯಾ ಪಾಂಡೆ ಹೆಬ್ಬಾವಿನ ಜತೆ ಪೋಸ್ ಕೊಟ್ಟಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹಾವಿನ ಜೊತೆ ಫೋಟೋಗೆ ನಗು ನಗುತ್ತಾ ಪೋಸ್ ಕೊಟ್ಟಿದ್ದಾರೆ. ತಮಗೆ ಹಾವು ಮತ್ತು ನಾಯಿ ಮರಿಗಳೆಂದರೆ ತುಂಬಾ ಇಷ್ಟ ಎಂದು ಬರೆದುಕೊಂಡಿರುವ ನಟಿ ಯಾವುದೇ ಭಯವಿಲ್ಲದೇ ಹಾವುಗಳೊಂದಿಗೆ ಪೋಸ್ ಕೊಟ್ಟಿದ್ದಾರೆ. ಸ್ವರ್ಗದ ನನ್ನ ವ್ಯಾಖ್ಯಾನ ಎಂದರೆ ನಾಯಿಮರಿಗಳು ಮತ್ತು ಹಾವುಗಳು .. ನನ್ನ ಎರಡು ನೆಚ್ಚಿನ ಪ್ರಾಣಿಗಳು ಎಂದು ಬರೆದುಕೊಂಡಿದ್ದಾರೆ.
ಸದ್ಯ ಅವರು ನಟ ಆದಿತ್ಯ ರಾಯ್ ಕಪೂರ್ ಸಂಬಂಧದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಇತ್ತೀಚೆಗೆ ಡಿನ್ನರ್ ಡೇಟ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಆದಿತ್ಯ ಮತ್ತು ಅನನ್ಯಾ ಇಬ್ಬರೂ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡರು. ಇದರ ವಿಡಿಯೋ ಹೊರಬಿದ್ದಿದ್ದು, ಇಬ್ಬರೂ ಸಂಬಂಧದಲ್ಲಿದ್ದಾರೆ ಎನ್ನಲಾಗಿದೆ. ಈಚೆಗೆ ಇವರು ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾದಲ್ಲಿ ನಟಿಸಿದ್ದರು.