ಕಾಸರಗೋಡು,ನ 18(Zoom Karnataka): ಶ್ರೀ ಕ್ಷೇತ್ರ ಅನಂತಪುರ, ಕುಂಬಳೆ ಸರೋವರದಲ್ಲಿದ್ದ “ಬಬಿಯಾ” ಹರಿಪಾದ ಸೇರಿದ ಬಳಿಕ ಇತ್ತೀಚೆಗೆ ಹೊಸ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಕ್ಷೇತ್ರದ ಭಕ್ತ ಜನರಲ್ಲಿ ಸಂತಸ ಸಂಭ್ರಮ ತುಂಬಿಕೊಂಡಿದೆ.
ಕುಂಬಳೆ ಸರೋವರದಲ್ಲಿ ಇತ್ತೀಚೆಗೆ ಮೊಸಳೆಯೊಂದು ಪ್ರತ್ಯಕ್ಷ.
ಇದೀಗ ಕ್ಷೇತ್ರದ ಆಚಾರ್ಯ ದೇಲಂಪಾಡಿ ಗಣೇಶ ತಂತ್ರಿಗಳ ನಿರ್ದೇಶನದಲ್ಲಿ ಹರಿಪಾದ ಸೇರಿದ “ಬಬಿಯಾ” ನೆನಪಿಗಾಗಿ ಮೊಸಳೆಗೆ “ಬಬಿಯಾ” ಎಂದೇ ಮರುನಾಮಕರಣ ಮಾಡಲಾಯಿತು.
ಈ ಸಂದರ್ಭ “ಮಕರ ಸಂಭ್ರಮ” ಹಾಗೂ ನೈವೇದ್ಯ ಕಾರ್ಯಕ್ರಮ ಜರಗಿತು. ದೇವರ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಮೊಸಳೆ ಎಲ್ಲಾ ಭಕ್ತಾದಿಗಳಿಗೆ ದರ್ಶನವನ್ನು ನೀಡಿದೆ ಇದು ಅಲ್ಲಿ ಸೇರಿದಂತಹ ಭಕ್ತಾದಿಗಳಿಗೆ ಅಚ್ಚರಿಯೂ ಹೌದು ಭಕ್ತಿ ಪರವಶರಾಗಿದ್ದಾರೆ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಊರ ಭಕ್ತಾಧಿಗಳು ಭಾಗವಹಿಸಿದ್ದರು.
ದೇವಳದ ಕೆರೆಯಲ್ಲಿ ಹೊಸ ಮೊಸಳೆ ಪತ್ತೆಯಾಗಿರುವ ಕುರಿತು “ವೀಕ್ಷಕವಾಣಿ” ಪ್ರಥಮವಾಗಿ ವರದಿ ಮಾಡಿತ್ತು. ಈ ವರದಿಯನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.